ಅಘಜಲಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕ ಎಂ.ವೈ.ಪಾಟೀಲ ಅವರು ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.

‘ತಾಲ್ಲೂಕಿನ ನೀಲೂರ ಗ್ರಾಮದ ಸಂತ ಮಹಿಬೂಬ್ ಸುಬಾನಿ ದರ್ಗಾಕ್ಕೆ ನಿತ್ಯ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ನೀಲೂರ ಗ್ರಾಮದ ಹತ್ತಿರ ಹುಣಸಿ ಇದೆ. ಹಡಗಿಲ್ ರೈಲ್ವೆ ನಿಲ್ದಾಣಯಿದ್ದು ದರ್ಗಾಕ್ಕೆ ಬರುವ ಯಾತ್ರಿಕರಿಗಾಗಿ ರೈಲು ನಿಲುಗಡೆ ಆಗುತ್ತಿತ್ತು. ಸ್ಟೇಷನ್ ಮೇಲ್ವಿಚಾರಕರು, ಟಿಕೆಟ್ ಕೌಂಟರ್, ಸಿಬ್ಬಂದಿಯನ್ನೂ ನೇಮಿಸಲಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೇ ಎಲ್ಲಾ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ರೈಲು ನಿಲುಗಡೆಯಾಗದಂತೆ ಮಾಡಲಾಗಿದೆ. ರೈಲುಗಳನ್ಳು ನಿಲ್ಲಿಸಲು, ಮೊದಲಿನಂತೆ ಕಾರ್ಯ ಮುಂದುವರಿಸಲು ಕ್ರಮ ತೆಗೆದುಕೊಳ್ಳಬೇಕು. ಕುಲಾಲಿ ಮೇಲಸೇತುವೆ ರೈಲು ನಿಲ್ದಾಣಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು’ ಎಂದು ಮನವಿ ಮಾಡಿದ್ದಾರೆ.

‘ಕಲಬುರಗಿ–ಬೆಂಗಳೂರು ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಬೇಕು, ಸೋಲಾಪುರ-ಹಾಸನ್ ಎಕ್ಸಪ್ರೆಸ್ (11311 /11312) ರಲ್ಲಿ 4ಎ.ಸಿ 2 ಟೈರ್ ಭೋಗಿಗಳನ್ನು ಅಳವಡಿಸಬೇಕು, ಬಸವ ಎಕ್ಸ್ಪ್ರೇಸ್ (17308 /17307)ನಲ್ಲಿ 4 ಎ.ಸಿ 2 ಟೈರ್ ಭೋಗಿಗಳನ್ನು ಅಳವಡಿಸಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.