ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರ್ಟ್‌ ಸರ್ಕಿಟ್‌: ಗ್ಯಾರೇಗ್‌ಗೆ ಬೆಂಕಿ

Published 3 ಫೆಬ್ರುವರಿ 2024, 15:56 IST
Last Updated 3 ಫೆಬ್ರುವರಿ 2024, 15:56 IST
ಅಕ್ಷರ ಗಾತ್ರ

ಅಫಜಲಪುರ: ಶನಿವಾರ ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಪಟ್ಟಣದ ಮಹಮ್ಮದ್ ಸಲೀಮುದ್ದೀನ್ ಮುಜಾವರ್ ಅವರ ಕರ್ನಾಟಕ ಆಟೊಮೊಬೈಲ್‌ ಗ್ಯಾರೇಜ್‌ಗೆ ಬೆಂಕಿ ಹತ್ತಿದ್ದು ವಾಹನಗಳ ಬಿಡಿ ಭಾಗಗಳು ಸುಟ್ಟಿವೆ. 

ಶನಿವಾರ ಬೆಳ್ಳಿಗೆ 8 ಗಂಟೆಗೆ ಆಟೊಮೊಬೈಲ್‌ ಗ್ಯಾರೇಜ್‌ಗೆ ಬೆಂಕಿ ಹತ್ತಿದ್ದನ್ನು ಗಮನಿಸಿದ ಸ್ಥಳೀಯರು ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರು ಬರುವುದರೊಳಗೆ ಬಹುತೇಕ ವಾಹನ ಬಿಡಿ ಭಾಗಗಳು ಸುಟ್ಟು ಹೋಗಿದ್ದವು. ಬಳಿಕ ಅಗ್ನಿಶಾಮಕ ಸಿಬ್ಬಂದಿಯ ಬಂದು ಬೆಂಕಿ ನಂದಿಸಲು ಪ್ರಯತ್ನ ಮಾಡಿದರು.

‘ನಮಗೆ ಬೇಗನೆ ಮಾಹಿತಿ ನೀಡಿದ್ದರೆ ಹೆಚ್ಚಿನ ಹಾನಿಯನ್ನು ತಡೆಯಲು ಸಾಧ್ಯವಾಗುತ್ತಿತ್ತು’ ಅಗ್ನಿಶಾಮಕ ಕಚೇರಿಯ ಅಧಿಕಾರಿ ವಿಶ್ವನಾಥ್ ಮಾಹಿತಿ ನೀಡಿದರು.

ಈ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಮ್ಮ ಗ್ಯಾರೇಜ್‌ನಲ್ಲಿ ₹30 ಲಕ್ಷ ಮೌಲ್ಯದ ವಿವಿಧ ವಾಹನಗಳ ಬಿಡಿಭಾಗಗಳನ್ನು ಮಾರಾಟ ಮಾಡಲಾಗುತ್ತಿತ್ತು. ಘಟನೆಯಲ್ಲಿ ಸುಮಾರು ₹25 ಲಕ್ಷ ಮೌಲ್ಯದ ವಸ್ತುಗಳು ಹಾಳಾಗಿವೆ. ನಮಗೆ ತುಂಬಾ ಹಾನಿಯಾಗಿದೆ ನಮ್ಮ ನೋವಿಗೆ ಸರ್ಕಾರ ಸ್ಪಂದಿಸಬೇಕು’ ಎಂದು ಗ್ಯಾರೇಜ್ ಮಾಲೀಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT