ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಫಜಲಪುರ: ದ್ರಾಕ್ಷಿ ತಳಿಗಳ ಕುರಿತು ಕ್ಷೇತ್ರೋತ್ಸವ

Published 14 ಮೇ 2024, 16:26 IST
Last Updated 14 ಮೇ 2024, 16:26 IST
ಅಕ್ಷರ ಗಾತ್ರ

ಅಫಜಲಪುರ: ‘ಕಡಿಮೆ ಜಮೀನಿನಲ್ಲಿ ದ್ರಾಕ್ಷಿ ಬೆಳೆಯಿಂದ ಹೆಚ್ಚು ಆದಾಯ ಪಡೆಯಬಹುದು. ದ್ರಾಕ್ಷಿ ಬೆಳೆಯುವುದು ಬಹಳ ಕಷ್ಟದ ಕೆಲಸ. ಶ್ರಮವಹಿಸಿ ಜವಾಬ್ದಾರಿಯಿಂದ ಕೆಲಸ ಮಾಡಿದರೆ ದ್ರಾಕ್ಷಿ ಬೆಳೆಯಿಂದ ಲಾಭವನ್ನ ಪಡೆದುಕೊಳ್ಳಬಹುದು’ ಎಂದು ಮಹಾರಾಷ್ಟ್ರದ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಶಿಶ್ ಕಾಳೆ ತಿಳಿಸಿದರು.

ತಾಲ್ಲೂಕಿನ ಶಿರವಾಳ ಗ್ರಾಮದ ಸಮೀಪ ತಾಲ್ಲೂಕು ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಅವರ ತೋಟದಲ್ಲಿ ಮಂಗಳವಾರ ನಡೆದ ರಾಜಾ-ರಾಣಿ ದ್ರಾಕ್ಷಿ ತಳಿಗಳ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.

‘ಹೊಸ ಹೊಸ ದ್ರಾಕ್ಷಿ ತಳಿಗಳನ್ನು ಬೆಳೆಯಬೇಕು. ಸಮಯಕ್ಕೆ ಕೀಟನಾಶಕ, ಸಾವಯವ ಗೊಬ್ಬರ ಬಳಸಬೇಕು. ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಜಿಲ್ಲಾಮಟ್ಟದ ದ್ರಾಕ್ಷಿ ಬೆಳೆಗಾರರ ಕಾರ್ತಯಾಗಾರ ಏರ್ಪಡಿಸಿದರೆ ಅನುಕೂಲವಾಗುತ್ತದೆ. ಸರ್ಕಾರ ದ್ರಾಕ್ಷಿ ಬೆಳೆಯುವ ಸಣ್ಣ ರೈತರಿಗೆ ಶೇ 70 ಸಹಾಯಧನ ನೀಡಬೇಕು ಮತ್ತು ನರೇಗಾ ಯೋಜನೆ ಅಡಿಯಲ್ಲಿ ದ್ರಾಕ್ಷಿ ಬೆಳೆಯನ್ನ ಅಳವಡಿಸಿಕೊಂಡು ಸರಿಯಾದ ಸಮಯಕ್ಕೆ ಮಾನವ ದಿನ ಮತ್ತು ಸಾಮಗ್ರಿ ವೆಚ್ಚ ನೀಡಬೇಕು. ಸರ್ಕಾರದಿಂದಲೇ ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಒಂದು ವಾರ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು, ವಿಶೇಷವಾದ ಬೆಳೆ ವಿಮೆ ಕಂಪನಿ ಸ್ಥಾಪಿಸಬೇಕು. ಸ್ಟೋರೆಜ್‌ಘಲ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರಗತಿಪರ ದ್ರಾಕ್ಷಿ ಬೆಳೆಗಾರ ಜೆ.ಎ. ಕೊರಗು ಮಾತನಾಡಿ, ‘ವೈಜ್ಞಾನಿಕ ಕೃಷಿ ಮಾಡಬೇಕು. ಸಾವಯವ ಗೊಬ್ಬರ ಬಳಕೆ ಮಾಡಬೇಕು’ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ಗಣೇಶ್ ಬೋಸಲೆ ಮಾತನಾಡಿದರು.ರೈತ ಮುಖಂಡರಾದ ಹಾಗೂ ದ್ರಾಕ್ಷಿ ಬೆಳೆಗಾರರಾದ ಶಿವಪುತ್ರಪ್ಪ ಜಿಡಿಗಿ, ಸಿದ್ದು ಸಿನ್ನೂರು, ಮಾಂತು ಬಡಿಗೇರ್, ಸೈಪನ್ ಚಿಕ್ಕಳಗಿ.ಗಾಲಿಬ್ ಮುಜಾವರ . ಹಾಜಿ ಮುಜಾವರ್, ಗೌಸ್ ಮುಜಾವರ್ ಅಮೀರ್ ಮುಜಾವರ್, ಸೋಂದೂಸಾಬ್ ಶೇಖ್ ನಗರಸಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT