ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಾದಯಾತ್ರೆ

Published 14 ಆಗಸ್ಟ್ 2024, 13:41 IST
Last Updated 14 ಆಗಸ್ಟ್ 2024, 13:41 IST
ಅಕ್ಷರ ಗಾತ್ರ

ಚಿಂಚೋಳಿ: ಅಹಿಂದ ಚಿಂತಕರ ವೇದಿಕೆ ವತಿಯಿಂದ ಮುಖಂಡ ಸೈಬಣ್ಣ ಜಮಾದಾರ ನೇತೃತ್ವದಲ್ಲಿ ಹಮ್ಮಿಕೊಂಡ ಯಾತ್ರೆಗೆ ಪಟ್ಟಣದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು. ಆ.13ರಿಂದ 29ರವರೆಗೆ ನಡೆಯಲಿರುವ ಯಾತ್ರೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆ.29ರಂದು ಮುಕ್ತಾಯಗೊಳ್ಳಲಿದೆ.

371(ಜೆ) ಸಮರ್ಪಕ ಅನುಷ್ಠಾನ, ಕಲ್ಯಾಣ ಕರ್ನಾಟಕ ಹೊರತುಪಡಿಸಿದ ಜಿಲ್ಲೆಗಳಲ್ಲಿ ಶೇ 8 ಮೀಸಲಾತಿ ಮತ್ತು ಮುಂಬಡ್ತಿ ಮೀಸಲಾತಿ ಒದಗಿಸಲು, ಕಲ್ಯಾಣ ಕರ್ನಾಟಕದ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ, 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ₹ 3 ಸಾವಿರ ಕೋಟಿ ನೀಡಲು ಒತ್ತಾಯಿಸಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅವ್ಯವಹಾರ ಸಿಬಿಐ ತನಿಖೆಗೆ ಆಗ್ರಹಿಸಿ ಹಮ್ಮಿಕೊಂಡ ಯಾತ್ರೆಗೆ ಚಾಲನೆ ನೀಡಲಾಯಿತು.

371 ಜಾರಿಗಾಗಿ ಹೋರಾಟ ನಡೆಸಿದ ಮಾಜಿ ಸಚಿವ ವೈಜನಾಥ ಪಾಟೀಲ ಸ್ಮಾರಕದಿಂದ ಅವರ ಸಮಾಧಿಗೆ ಮುಖಂಡರು ಪುಷ್ಪಾರ್ಪಣೆ ಮಾಡಿ ಯಾತ್ರೆಗೆ ಶುಭ ಕೋರಿದರು.

ಜಿ.ಪಂ. ಮಾಜಿ ಸದಸ್ಯ ಗೌತಮ ಪಾಟೀಲ, ಜೆಸ್ಕಾಂ ಮಾಜಿ ನಿರ್ದೆಶಕಿ ಉಮಾ ಪಾಟೀಲ, ಬಿಜೆಪಿ ಮಾಜಿ ಅಧ್ಯಕ್ಷ ಭೀಮಶೆಟ್ಟಿ ಮುರುಡಾ, ಸಂತೋಷ ಗಡಂತಿ, ಕೆ.ಎಂ.ಬಾರಿ, ಚಿತ್ರಶೇಖರ ಪಾಟೀಲ, ಶರಣು ಪಾಟೀಲ ಮೋತಕಪಳ್ಳಿ, ಶ್ರೀಮಂತ ಕಟ್ಟಿಮನಿ, ಡಾ. ಬಸವೇಶ ಪಾಟೀಲ, ಭವಾನಿರಾವ್ ಫತೆಪುರ, ಮಾರುತಿ ಗಂಜಗಿರಿ, ಗೋಪಾಲ ಗಾರಂಪಳ್ಳಿ, ಯಶವಂತರಾವ್ ಸೂರ್ಯವಂಶಿ, ಪ್ರಶಾಂತ ಪಟ್ಟೇದಾರ ಮೊದಲಾದವರು ಇದ್ದರು.

ಚಿಂಚೋಳಿ ಪಟ್ಟಣದ ವೈಜನಾಥ ಪಾಟೀಲ ಸಮಾಧಿಯಿಂದ 371(ಜೆ) ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಯಾತ್ರೆ ಹಮ್ಮಿಕೊಂಡ ಅಹಿಂದ ಚಿಂತಕರ ವೇದಿಕೆ ಮುಖಂಡ ಸೈಬಣ್ಣ ಜಮಾದಾರ ಅವರಿಗೆ ಮುಖಂಡರು ಮಂಗಳವಾರ ಸನ್ಮಾನಿಸಿದರು
ಚಿಂಚೋಳಿ ಪಟ್ಟಣದ ವೈಜನಾಥ ಪಾಟೀಲ ಸಮಾಧಿಯಿಂದ 371(ಜೆ) ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಯಾತ್ರೆ ಹಮ್ಮಿಕೊಂಡ ಅಹಿಂದ ಚಿಂತಕರ ವೇದಿಕೆ ಮುಖಂಡ ಸೈಬಣ್ಣ ಜಮಾದಾರ ಅವರಿಗೆ ಮುಖಂಡರು ಮಂಗಳವಾರ ಸನ್ಮಾನಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT