ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಅಪ್ಪಾ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳ ಸಾಧನೆ

Last Updated 5 ಆಗಸ್ಟ್ 2021, 15:11 IST
ಅಕ್ಷರ ಗಾತ್ರ

ಕಲಬುರ್ಗಿ: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ನಗರದ ಅಪ್ಪಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಒಟ್ಟಾರೆ ಶಾಲೆಗೆ ಶೇ 100ರಷ್ಟು ಫಲಿತಾಂಶ ಲಭ್ಯವಾಗಿದೆ. 311 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 52 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 238 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 21 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಸಯ್ಯೀದಾ ಜಮೀನಾ ಈಶರತ್ (ಶೇ 94.8), ಖುಷಿ ಪಸ್ತಾಪುರ (94.6), ದೀಪ್ತಿ ಸೀಲು (94.4), ಪ್ರಮೋದಿನಿ ದಂಡಿಗಿ (93.8), ಕೃಪಾ ಪಾಟೀಲ (93.4), ಶ್ಲೋಕಾ ದಾಯದೆ (93.4), ಅಖಿಲೇಶ ಮಸಳಿ (92.6), ಸುಮಾ ಜೋತೆಪ್ಪ (92.4), ಅನುಶ್ರೀ ಹೂಗಾರ (92.2), ದಿಶಾ ಸಂಗಣ್ಣ (92.2), ನಿದಿಶಾ (91.8), ಸೃಷ್ಟಿ ಕೇಶ್ವಾರ (91.6), ದರ್ಶನ್ ಪಾಂಡ್ರೆ (91.4), ಸಂಜಯ್ ಜಗನೂರ (91.2), ಸಾನ್ವಿ ಗಿರೀಶ ಕಟ್ಟಿ (91.2), ರಾಹುಲ ಪಾಟೀಲ (90.8), ಋತುರಾಜ ಪವಾರ (90.6), ಸಾಕ್ಷಿ ಡೋಣೂರ (90.6), ಅನುಶ್ರೀ ಬಿರಾದಾರ (90.2) ಹಾಗೂ ಜಾವೇದ್ ಫೈಜನ್ 90.2 ಅಂಕಗಳನ್ನು ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT