ಕಲಬುರಗಿ: ‘ಅರ್ಜುನಾಚಾರ್ಯ ತೆಂಗಳಿಕರ ಮೂಲಭೂತವಾಗಿ ಸೃಜನಶೀಲ, ಪ್ರತಿಭಾವಂತ, ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಭಾರ ಕುಲಪತಿ ಪ್ರೊ. ಹೂವಿನಭಾವಿ ಬಾಬಣ್ಣ ಬಣ್ಣಿಸಿದರು.

ನಗರದ ಸಾರ್ವಜನಿಕ ಉದ್ಯಾನದ ಬಳಿಯ ಯಾತ್ರಿ ನಿವಾಸದಲ್ಲಿ ಭಾನುವಾರ ಮಹೋಪಾಧ್ಯಾಯ ಅರ್ಜುನಾಚಾರ್ಯ ತೆಂಗಳಿಕರ ಸ್ಮರಣಾರ್ಥ ಸೇವಾ ಸಂಸ್ಥೆ ಮತ್ತು ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಹಾಗೂ ಸಂಶೋಧಕರ ವೇದಿಕೆ ಹಮ್ಮಿಕೊಂಡಿದ್ದ ತೆಂಗಳಿಕರ ಅವರ ‘ಬದುಕು ಮತ್ತು ಬರಹ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ, ಅವರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೇವಲ 35 ವರ್ಷಗಳ ಬದುಕಿನಲ್ಲಿ ಎಲೆಮರೆಕಾಯಿಯಂತೆ ಅರ್ಜುನಾಚಾರ್ಯ ಅವರು ಮಾಡಿದ ಸಾಧನೆ ಅಪೂರ್ವ. ಕೇವಲ ಚಿತ್ರಕಲೆ, ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗದೇ ಅನೇಕ ಕ್ಷೇತ್ರಗಳಲ್ಲಿ ಅವರು ಛಾಪು ಮೂಡಿಸಿದ್ದರು. ಸಂಗೀತ, ವಿಜ್ಞಾನ ಕ್ಷೇತ್ರದಲ್ಲೂ ಅವರಿಗೆ ಅಪಾರ ಆಸಕ್ತಿಯಿತ್ತು. ಅನೇಕರ ಬಗೆಗೆ ಸಂಶೋಧನೆಯನ್ನೂ ಮಾಡಿದ್ದಾರೆ. ವಿಚಾರ ಸಂಕಿರಣಗಳು, ಕೃತಿಗಳ ರಚನೆ ಮೂಲಕ ಅರ್ಜುನಾಚಾರ್ಯರರ ಸಾಹಿತ್ಯದ ಬಗೆಗೆ ಇನ್ನಷ್ಟು ಬೆಳಕು ಚೆಲ್ಲಬೇಕು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಕೆ.ಪಿ.ಈರಣ್ಣ, ಅರ್ಜುನಾಚಾರ್ಯ ಅವರ ಬದುಕು, ಸಾಧನೆ, ವಿದ್ವತ್ ಪ್ರೌಢಿಮೆ ಮೇಲೆ ಬೆಳಕು ಚೆಲ್ಲಿದರು.

‘1953ರಲ್ಲಿ ಹುಟ್ಟಿದ ಅರ್ಜುನಾಚಾರ್ಯರದ್ದು ಅಧ್ಯಯನಶೀಲಗುಣ. ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷಾ ಪಾರಂಗತರು. ಕನ್ನಡದಲ್ಲಿ ನಿರರ್ಗಳವಾಗಿ ವಿಚಾರ ಮಂಡಿಸುತ್ತಿದ್ದರು. 19ನೇ ವಯಸ್ಸಿನಲ್ಲಿ ಮೌನೇಶ್ವರ ಸುಪ್ರಭಾತ ನಿರರ್ಗಳವಾಗಿ ಪ್ರಸ್ತುತಪಡಿಸಿ ವಿದ್ವತ್ ಪ್ರದರ್ಶಿಸಿದ್ದರು. 35 ವರ್ಷದ ಜೀವನದಲ್ಲಿ 25 ವರ್ಷ ಬದುಕಿನ ಹೋರಾಟದಲ್ಲೇ ಕಳೆದರು. ಮುಂದಿನ ಹತ್ತೇ ವರ್ಷಗಳಲ್ಲಿ ನಾವೆಲ್ಲ 50 ವರ್ಷಗಳಲ್ಲಿ ಮಾಡದಷ್ಟು ಸಾಧನೆ ಮಾಡಿದ್ದಾರೆ. ಭವಿಷ್ಯದಲ್ಲಿ ಉಪನ್ಯಾಸ, ವಿಚಾರ ಸಂಕಿರಣ ಏರ್ಪಡಿಸಿ ಅವರ ಸಾಧನೆಗಳನ್ನು ಯುವಪೀಳಿಗೆಗೆ ತಿಳಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಸಂಸ್ಥೆಯ ಅಧ್ಯಕ್ಷೆ ಚಿತ್ರಲೇಖಾ ಅರ್ಜುನಾಚಾರ್ಯ ತೆಂಗಳಿಕರ ಅಧ್ಯಕ್ಷತೆ ವಹಿಸಿದ್ದರು. ಅರ್ಜುನಾಚರ್ಯರು ರಚಿಸಿದ ಸರಸ್ವತಿ, ಸ್ವಾಮಿವಿವೇಕಾನಂದ ಸೇರಿದಂತೆ 34 ಕಲಾಕೃತಿಗಳ ಪ್ರದರ್ಶನವನ್ನು ಗದುಗಿನ ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ರಾಜಗೋಪಾಲಾಚಾರ್ಯ ಉದ್ಘಾಟಿಸಿದರು.

ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೊ. ಪಿ.ಬಿ.ಬಡಿಗೇರ ಅರ್ಜುನಾಚಾರ್ಯರ ಸಮಗ್ರ ಸಾಹಿತ್ಯ ಸಂಪುಟವನ್ನು ಬಿಡುಗಡೆ ಮಾಡಿದರು. ನೀಲಕಂಠಾಚಾರ್ಯ, ಭೀಮಸೇನ ಬಡಿಗೇರ, ನರಸಿಂಗರಾವ ಹೇಮನೂರ ವೇದಿಕೆಯಲ್ಲಿದ್ದರು. ಬಸವರಾಜ ಬಡಿಗೇರ ನಿರೂಪಿಸಿದರು.

ಸಮಾಜದಲ್ಲಿ ಭಾವನೆ ಅರಳಿಸುವ ಸಾಹಿತ್ಯವನ್ನು ಅರ್ಜುನಾಚಾರ್ಯ ಕೊಟ್ಟು ಹೋಗಿದ್ದಾರೆ. ಅರ್ಜುನಾಚಾರ್ಯರ ಹೆಸರಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಸ್ಥಾಪಿಸಿ ಅವರ ವಿಚಾರ ಗೌರವಿಸುವ ಕೆಲಸ ನಡೆಯಬೇಕಿದೆ
ವಿಜಯಕುಮಾರ ಪಾಟೀಲ ತೇಗಲತೆಪ್ಪಿ ಕಸಾಪ ಜಿಲ್ಲಾಧ್ಯಕ್ಷ

ಗೋಷ್ಠಿಗಳಲ್ಲಿ ಬದುಕು ಬರಹ ಅನಾವರಣ

ವಿಚಾರ ಸಂಕಿರಣದ ಭಾಗವಾಗಿ ನಡೆದ ಎರಡು ಗೋಷ್ಠಿಗಳಲ್ಲಿ ಅರ್ಜುನಾಚಾರ್ಯ ತೆಂಗಳಿಕರ ಅವರ ಬದುಕು–ಬರಹ–ಸಮಾಜಕ್ಕೆ ನೀಡಿದ ಕೊಡುಗೆಗಳು ಅನಾವರಣಗೊಂಡವು. ಮೊದಲ ಗೋಷ್ಠಿಯಲ್ಲಿ ಅರ್ಜುನಾಚಾರ್ಯರ ಬದುಕು ಮತ್ತು ಕಥಾ ಸಾಹಿತ್ಯ ಕುರಿತು ಮೋಹನಚಂದ್ರ ಹುದ್ದಾರ ಅರ್ಜುನಾಚಾರ್ಯರ ಕಾವ್ಯ ಮತ್ತು ನಾಟಕ ಸಾಹಿತ್ಯದ ಕುರಿತು ಪ್ರಾಧ್ಯಾಪಕ ಲಕ್ಷ್ಮೀಕಾಂತ ಪಂಚಾಳ ವಿಷಯ ಮಂಡಿಸಿದರು.

ಗುರುಮೂರ್ತಿ ಬಡಗೇರ ಅಧ್ಯಕ್ಷತೆ ವಹಿಸಿದ್ದರು. ಎರಡನೇ ಗೋಷ್ಠಿಯಲ್ಲಿ ಅರ್ಜುನಾಚಾರ್ಯರ ಶಾಸನ ಮತ್ತು ಸಂಶೋಧನೆ ಬಗೆಗೆ ನಿವೃತ್ತ ಪ್ರಾಚಾರ್ಯೆ ಚಂದ್ರಕಲಾ ಬಿದರಿ ವಿಶ್ವಕರ್ಮ ಧರ್ಮ ಮತ್ತು ಸಂಸ್ಕೃತಿಗೆ ಅರ್ಜುನಾಚಾರ್ಯರ ಕೊಡುಗೆ ಕುರಿತು ದತ್ತಾತ್ರೇಯ ವಿಶ್ವಕರ್ಮ ವಿಚಾರ ಮಂಡಿಸಿದರು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಓಂಪ್ರಕಾಶ ಹೆಬ್ಬಾಳ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.