ಮೂತ್ರಪಿಂಡದಲ್ಲಿ ಕಲ್ಲು ಬೆಳೆದಿರುವುದರಿಂದ ನೋವಿನಿಂದ ಬಳಲುತ್ತಿದ್ದ ಅರ್ಜುನ್ ಹಾಗೂ ಪವನ್ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಾಗ ವೈದ್ಯಾಧಿಕಾರಿ ಇರಲಿಲ್ಲ. ವೈದ್ಯಾಧಿಕಾರಿ ತಮ್ಮ ವಸತಿ ಗೃಹದಲ್ಲಿ ಎಸ್‌ಐ ವೆಂಕಟೇಶ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಆಗ ಅಲ್ಲಿಗೆ ಬಂದ ಅರ್ಜುನ್ ಹಾಗೂ ಪವನ್ ಅವರು ಜೋರಾಗಿ ಬಾಗಿಲನ್ನು ಬಡಿದಿದ್ದಾರೆ. ‘ಬಾಗಿಲನ್ನೇಕೆ ಈ ರೀತಿ ಬಡಿಯುತ್ತೀರಿ, ಬೆಲ್ ಬಾರಿಸಿದ್ದರೆ ಸಾಕಾಗುತ್ತಿತ್ತು’ ಎಂದು ವೈದ್ಯಾಧಿಕಾರಿ ಆಕ್ಷೇಪಿಸಿದ್ದಾರೆ. ಈ ವೇಳೆ ವಾಗ್ವಾದ ನಡೆಸಿದ ಇಬ್ಬರು ರೋಗಿಗಳು, ವೈದ್ಯಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ತಡೆಯಲು ಬಂದ ಎಸ್‌ಐ ವೆಂಕಟೇಶ ಅವರನ್ನೂ ತಳ್ಳಾಡಿದ್ದಾರೆ.