ಚಿಂಚೋಳಿ: ‘ಪ್ರಸಕ್ತ ವರ್ಷ ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿ ನಡೆಸಲಾಗಿದೆ. ಮುಂದಿನ ವರ್ಷ ದೆಹಲಿಯಲ್ಲಿ ರಾಷ್ಟ್ರೀಯ ಬಸವ ತತ್ವ ಸಮಾವೇಶ ಹಮ್ಮಿಕೊಳ್ಳಲು ಮಠಾಧಿಪತಿಗಳ ಒಕ್ಕೂಟ ನಿರ್ಧರಿಸಿದೆ’ ಎಂದು ಅನುಭವ ಮಂಟಪ ಅಧ್ಯಕ್ಷ ನಾಡೋಜ ಬಸವಲಿಂಗ ಪಟ್ಟದೇವರು ತಿಳಿಸಿದರು.

ತಾಲ್ಲೂಕಿನ ಕನಕಪುರ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಅಶ್ವಾರೂಢ ಬಸವೇಶ್ವರರ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಸಮಾವೇಶವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಚಿಂತನೆ ನಡೆದಿದ್ದು, ಶೀಘ್ರವೇ ಸಮಾವೇಶದ ದಿನಾಂಕ ಪ್ರಕಟಿಸಲಾಗುವುದು’ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ‘ಸಮಾನತೆಯ ಅಡಿಪಾಯದ ಮೇಲೆ ನಿಂತಿರುವ ಹಾಗೂ ಮಾನವೀಯತೆಯನ್ನು ಜಗತ್ತಿಗೆ ಸಾರಿದ ಜಾತಿ, ವರ್ಗ, ವರ್ಣಬೇಧ ರಹಿತವಾಗಿರುವ ಮತ್ತು ಕೆಲಸಕ್ಕೆ ಘನತೆ ತಂದುಕೊಟ್ಟು ಕಾಯಕವಾಗಿಸಿದ್ದು, ಅನ್ನಕ್ಕೆ ಪ್ರಸಾದವಾಗಿಸಿದ್ದು ಲಿಂಗಾಯತ ಧರ್ಮ’ ಎಂದು ಹೇಳಿದರು.

‘ವಚನ ಸಾಹಿತ್ಯ ಎಂಬ ಸಂವಿಧಾನ ಮತ್ತು ಅನುಭವ ಮಂಟಪವೆಂಬ ಸಂಸತ್ತು ಜಗತ್ತಿನಲ್ಲಿಯೇ ಮೊಟ್ಟ ಮೊದಲು ಜಾರಿಗೆ ತಂದ ಮಹಾನ ದಾರ್ಶನಿಕ ಬಸವೇಶ್ವರರು ಪ್ರಜಾಪ್ರಭುತ್ವದ ರೂವಾರಿಯಾಗಿದ್ದಾರೆ’ ಎಂದರು.

ಮಾಜಿ ಸಂಸದ ಡಾ.ಉಮೇಶ ಜಾಧವ ಮಾತನಾಡಿ, ‘ಸಾಮಾಜಿಕ ಸಾರುವ ಎಲ್ಲರಿಗೂ ಘನತೆಯ ಬದುಕು ನೀಡುವ ಈ ಸಮಾಜ ಒಡೆಯಬಾರದು, ಒಗ್ಗಟ್ಟಿನಿಂದ ಸಾಗಬೇಕು’ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್, ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಆರ್.ಜಿ.ಶೆಟಕಾರ, ಪ್ರಭುಲಿಂಗ ಮಹಾಗಾಂವಕರ್ ಮಾತನಾಡಿದರು.

ಭರತನೂರಿನ ಚಿಕ್ಕಗುರುನಂಜೇಶ್ವರರು, ಲಿಂಗಾಯತ ಮಹಾಮಠದ ಪ್ರಭು ಸ್ವಾಮೀಜಿ, ಶಂಕರಲಿಂಗ ಸ್ವಾಮೀಜಿ, ಅನಾವರಣ ಸಮಿತಿ ಗೌರವಾಧ್ಯಕ್ಷ ಬಸವಣಪ್ಪ ಕುಡಳ್ಳಿ, ಕಾಂಗ್ರೆಸ್ ಮುಖಂಡ ಬಸವರಾಜ ಪಾಟೀಲ ಊಡಗಿ, ಬಸವರಾಜ ಮಾಲಿ, ಗೌತಮ ಪಾಟೀಲ, ವಿಜಯಕುಮಾರ ಚೇಂಗಟಿ, ಸಂತೋಷ ಗಡಂತಿ, ಶರಣು ಪಾಟೀಲ, ಮಲ್ಲಿಕಾರ್ಜುನ ಪಾಲಾಮೂರ, ವೀರೇಶ ಯಂಪಳ್ಳಿ, ಮೊದಲಾದವರು ಇದ್ದರು.

ಅನಾವರಣ ಸಮಿತಿ ಅಧ್ಯಕ್ಷ ರೇವಣಸಿದ್ದಯ್ಯ ಮಠ ಸ್ವಾಗತಿಸಿದರು. ವೈಜನಾಥ ಸಜ್ಜನಶೆಟ್ಟಿ ನಿರೂಪಿಸಿದರು. ಜಗದೀಶ ಸೇಡಂ ವಂದಿಸಿದರು.

ಕಾರ್ಯಕ್ರಮದಲ್ಲಿ ಮೂರ್ತಿದಾನಿ ಜಹೀರಾಬಾದನ ರವಿಕುಮಾರ ವೈಜನಾಥ ಗೋಪಾಲಗಡೆ, ವಿವಿಧ ದಾಸೋಹ ಸೇವೆ ಸಲ್ಲಿಸಿದ ಕರಬಸ್ಸಪ್ಪ ದೇಶಮುಖ, ಭೀಮಶೆಟ್ಟಿ ಪಾರಾ, ಭದ್ರಯ್ಯ ಮಠ, ಬಸವರಾಜ ಪ್ಯಾಟಿ ಅವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ಗ್ರಾಮದಲ್ಲಿ ಮಹಿಳೆಯರು ಮಕ್ಕಳು ವಚನ ಸಾಹಿತ್ಯ ತಲೆ ಮೇಲೆ ಹೊತ್ತು ಮೆರವಣಿಗೆ ನಡೆಸಲಾಯಿತು. ಮಕ್ಕಳು ಶರಣರ ವೇಷ ಧರಿಸಿ ಗಮನ ಸೆಳೆದರು.

ಕೆಟ್ಟ ಕಾಲ ಶುರು....

ಜಗತ್ತಿನಲ್ಲಿ ತಾಲಿಬಾನಿಗಳನ್ನು ಶರಣರನ್ನಾಗಿಸುವ ಶಕ್ತಿ ಬಸವ ತತ್ವಕ್ಕಿದೆ. ತಾಲಿಬಾನಿಗಳು ಬಸವ ತತ್ವ ಅನುಸರಿಸಿದರೆ ಅವರು ಶರಣರಾಗುತ್ತಾರೆ. ಆದರೆ ಬಸವ ತತ್ವವನ್ನು ಅರಿಯದೇ ಬಸವ ಭಕ್ತರನ್ನು ತಾಲಿಬಾನಿಗಳೆಂದು ಜರಿಯುವ ಮೂಲಕ ಸ್ವಾಮೀಜಿಯೊಬ್ಬರು ತಮ್ಮ ಬಗ್ಗೆ ಹೊಂದಿರುವ ಗೌರವ ತಾವೇ ಕಳೆದುಕೊಂಡಿದ್ದಾರೆ. ಈಗ ಇವರಿಗೆ ಕೆಟ್ಟೆ ಕಾಲ ಶುರುವಾಗಿದೆ ಎಂದು ಬಸವರಾಜ ಧನ್ನೂರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.