ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡ್ರಾಮಿ: ಮೂಲ ಸೌಲಭ್ಯ ವಂಚಿತ ಸುಂಬಡ

ಬಸ್ ಸೌಲಭ್ಯ, ಶುದ್ಧ ಕುಡಿಯುವ ನೀರಿನ ಘಟಕ, ಸಾರ್ವಜನಿಕ ಶೌಚಾಲಯ ಇಲ್ಲ
Last Updated 4 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಯಡ್ರಾಮಿ:ತಾಲ್ಲೂಕಿನ ಪ್ರಮುಖ ಗ್ರಾಮ ಪಂಚಾಯಿತಿ ಕೇಂದ್ರವಾದ ಸುಂಬಡ ಗ್ರಾಮವು ಅಭಿವೃದ್ಧಿಯಿಂದ ದೂರ ಉಳಿದಿದೆ.

ಸುಂಬಡ, ಅಖಂಡಹಳ್ಳಿ ಸೇರಿ ಗ್ರಾಮ ಪಂಚಾಯತಿಯಾಗಿದೆ. ಸುಂಬಡ ಮತ್ತು ಅಖಂಡಹಳ್ಳಿ ಒಟ್ಟು ಜನಸಂಖ್ಯೆ 4,813 ಇದ್ದು ಶೇ 70 ರಷ್ಟು ಸಾಕ್ಷರತೆ ಹೊಂದಿದೆ. 13 ಜನ ಗ್ರಾ.ಪಂ ಸದಸ್ಯರು ಇದ್ದಾರೆ.

ಅಖಂಡಹಳ್ಳಿ ಗ್ರಾಮ ಇಲ್ಲಿಯವರೆಗೆ ಬಸ್ಸಿನ ಮುಖವನ್ನೇ ನೋಡಿಲ್ಲ. ನಾನಾ ಯೋಜನೆಗಳಲ್ಲಿ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಕೆಯಾಗದ ಹಿನ್ನಲೆಯಲ್ಲಿ ಸಮಸ್ಯೆಗಳ ಸುಳಿಯಲ್ಲಿಯೇ ಗ್ರಾಮ ಇದೆ.

ಸಿ.ಸಿ ರಸ್ತೆಗಳು, ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ಸೇರಿದಂತೆ ವಿವಿಧ ಯೋಜನೆಗಳಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇವುಗಳಲ್ಲಿ ಕೆಲವು ಪೂರ್ಣಗೊಂಡಿವೆ, ಇನ್ನು ಕೆಲವು ಪ್ರಗತಿಯಲ್ಲಿವೆ.

ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮದಲ್ಲಿ ತೆರೆದ ಬಾವಿಗಳಿವೆ. ಆದರೆ ಅವು ಜನವಸತಿ ಪ್ರದೇಶದಿಂದ ದೂರ ಇವೆ. ಅಲ್ಲಿಗೆ ಜನರು ಹೋಗುವುದ್ದಿಲ್ಲ. ಕೊಳವೆ ಬಾವಿಗಳಿಗೆ ತೆರಳಲು ರಸ್ತೆ ವ್ಯವಸ್ಥೆ ಇಲ್ಲ. ಜನರು ಬೈಕ್, ಆಟೊಗಳಲ್ಲಿ ಮೂಲಕ ನೀರು ತರುವುದು ಸಾಮಾನ್ಯವಾಗಿದೆ.

ಅನುದಾನದ ಕೊರತೆ

ಸುಂಬಡ ಗ್ರಾಮದಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ. ಬೇಸಿಗೆಯಲ್ಲಂತೂ ನೀರಿಗಾಗಿ ಮೈಲುಗಟ್ಟಲೆ ಅಲೆದಾಡಬೇಕು ಎನ್ನುತ್ತಾರೆ ಗ್ರಾಮದ ಹಿರಿಯರು.

ಸಾರ್ವಜನಿಕ ಶೌಚಾಲಯ ಇಲ್ಲ

ಕೇಂದ್ರ ಸ್ಥಾನ ಸುಂಬಡ ಗ್ರಾಮದಲ್ಲಿಯೇ 100 ಶೌಚಾಲಯಗಳಿವೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಆದರೆ, ವಾಸ್ತವ ಹಾಗಿಲ್ಲ. ಜನತೆಗೆ ಬಯಲು ಶೌಚವೇ ಗತಿಯಾಗಿದೆ. ಮಹಿಳೆಯರು, ಯುವತಿಯರು, ಬಹಿರ್ದೆಸೆಗೆ ಕತ್ತಲಾಗುವುದನ್ನು ಕಾಯುವ ಪರಿಸ್ಥತಿ ಇದೆ. ಇವರಿಗೆ ಗ್ರಾಮದ ಮುಖ್ಯ ರಸ್ತೆಯೇ ಶೌಚಾಲಯವಾಗಿ ಮಾರ್ಪಟ್ಟಿದೆ. ಅಖಂಡಹಳ್ಳಿ ಗ್ರಾಮದಲ್ಲೂ ಶೌಚಾಲಯ ಸಮಸ್ಯೆ ಇದೆ.

ಗ್ರಾಮದಲ್ಲಿ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಗ್ರಾಮದ ಒಳಗೆ ಹೋಗುವ ಮುಖ್ಯ ರಸ್ತೆಯ ಕಾಮಗಾರಿಯು ಅಗಲ ಕುರಿತ ವಿವಾದದಿಂದ ಸ್ಥಗಿತಗೊಂಡಿದೆ. 12 ಅಲ್ಲ 20 ಅಡಿ ರಸ್ತೆಯೇ ಬೇಕೆಂದು ಗ್ರಾಮಸ್ಥರು ಪಟ್ಟು ಹಿದಿದ್ದಿದ್ದಾರೆ.

ಭೂಸೇನಾ ನಿಗಮದವರು ಈ ರಸ್ತೆ ಮಾಡಿಸುತ್ತಿದ್ದಾರೆ. ರಸ್ತೆಗೆ ಅಂದಾಜುಪಟ್ಟಿ ತಯಾರಿಸಿದ್ದಾರೆ. ನಾವು ಯಾವುದಾದರು ಬಜೆಟ್ ರದ್ದು ಮಾಡಿ ರಸ್ತೆ ಪಕ್ಕದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಬೇಕು ಎಂದು ಕೊಂಡಿದ್ದೇವೆ. ಹಣ ನಮ್ಮಿಂದಲೇ ಬಂದರೂ ಈ ರಸ್ತೆ ಅಭಿವೃದ್ಧಿ ಕಾರ್ಯವನ್ನು ಅವರೇ ಮಾಡುತ್ತಾರೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT