ಯಡ್ರಾಮಿ: ‘ದೇಶದ ಇತಿಹಾಸದಲ್ಲಿ ಹೆಣ್ಣು, ಹೊನ್ನು, ಮಣ್ಣು ಮತ್ತು ಸಾಮ್ರಾಜ್ಯಕ್ಕಾಗಿ ಯುದ್ಧ ನಡೆದರೆ; ಭೀಮಾ ಕೋರೆಗಾಂವ ಸ್ವಾಭಿಮಾನಕ್ಕಾಗಿ ನಡೆದ ಯುದ್ಧವಾಗಿದೆ’ ಎಂದು ಉಪನ್ಯಾಸಕ ಅಶೋಕ ದೊಡ್ಮನಿ ಹೇಳಿದರು.

ತಾಲ್ಲೂಕಿನ ಇಜೇರಿ ಗ್ರಾಮದಲ್ಲಿ ಏರ್ಪಡಿಸಿದ್ದ 208ನೇ ಭೀಮಾ ಕೋರೆಗಾಂವ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘2ನೇ ಬಾಜಿರಾವ್ ತಮ್ಮ ಸೈನ್ಯದಲ್ಲಿ ಸೇರಿಸಿಕೊಳ್ಳದೆ ಅವಮಾನಿಸಿದ್ದ ಹಿನ್ನೆಲೆಯಲ್ಲಿ 1818 ಜನವರಿ 1 ರಂದು ಸ್ವಾಭಿಮಾನಕ್ಕಾಗಿ ನಡೆದ ಯುದ್ಧದಲ್ಲಿ ಮಹರ್ ರೆಜಿಮೆಂಟ್ ಸೈನ್ಯ ಪೇಶ್ವೆಯ 28 ಸಾವಿರ ಸೈನಿಕರನ್ನು ಕೇವಲ 500 ಮಹರ್ ಸೈನಿಕರು ಸೋಲಿಸಿದ್ದು ಇತಿಹಾಸವನ್ನು ಬಾಬಾಸಾಹೇಬರು ಹುಡುಕಿ ನಮಗೆ ತಿಳಿಸಿದ್ದಾರೆ’ ಎಂದರು.

ರುಕುಮ್ ಪಟೇಲ್ ಇಜೇರಿ, ಲಾಲಯ್ಯ ಗುತ್ತೇದಾರ, ಈರಣ್ಣ ಅವರಾದಿ, ಅಣ್ಣರಾಯ ಯಂಕಂಚಿ, ಅಮೀರ್ ಹಮಿಜ್ ಲಖನಾಪುರ, ಅಲ್ಲಪಟೇಲ್, ಈರಣ್ಣ ತಳವಾರ, ಪಿಡಿಒ ನಂದಕುಮಾರ್, ಕಾಲಿದಮಿಯಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.