ಮಂಗಳವಾರ, ನವೆಂಬರ್ 29, 2022
21 °C

ಅ.8ರಿಂದ ಬ್ರಾಹ್ಮಣರ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ‘ಭಾರತ ಬ್ರಾಹ್ಮಣ ಸಂಘದಿಂದ ನಗರದ ಖಮಿತ್ಕರ್ ಕಲ್ಯಾಣ ಮಂಟಪದಲ್ಲಿ ಅಕ್ಟೋಬರ್ 8 ಮತ್ತು 9ರಂದು ರಾಜ್ಯ ಮಟ್ಟದ ಬ್ರಾಹ್ಮಣರ ಸಮ್ಮೇಳನ ನಡೆಯಲಿದೆ’ ಎಂದು ಸಮ್ಮೇಳನದ ಸಂಚಾಲಕ ಕೃಷ್ಣಾಜಿ ಕುಲಕರ್ಣಿ ತಿಳಿಸಿದರು.

‘ಅ.8ರ ಬೆಳಿಗ್ಗೆ 9.15ಕ್ಕೆ ನಡೆಯುವ ಕಾರ್ಯಕ್ರಮವನ್ನು ಉತ್ತರಾದಿ ಮಠ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಉದ್ಘಾಟಿಸುವರು. ರಾಷ್ಟ್ರೀಯ ನಾಯಕ ಸುಖಬೀರ ಶರ್ಮಾ, ಕಾರ್ಯದರ್ಶಿ ಧನಂಜಯ್ ಮುನಸಫ್ದಾರ್ ಹಾಗೂ ಸಂಘಟನಾ ಕಾರ್ಯದರ್ಶಿ ಡಾ.ರವಿ ಪಾಲ್ಗೊಳ್ಳುವರು. ಈ ವೇಳೆ ರಾಮ ಮಂದಿರದಿಂದ ಕಲ್ಯಾಣ ಮಂಟಪದವರೆಗೆ ಶೋಭಾಯಾತ್ರೆ ಜರುಗಲಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮಲ್ಹಾರರಾವ ಗಾರಂಪಳ್ಳಿ, ರಾಘವೇಂದ್ರ ನೀಲೂರ ಉಪಾಧ್ಯಕ್ಷರಾಗಿ ಹಾಗೂ ದಯಾಘನ್‌ ಧಾರವಾಡಕರ್ ಅಧ್ಯಕ್ಷರಾಗಿ ಭಾಗವಹಿಸುವರು. ಈ ಸಮ್ಮೇಳನದಲ್ಲಿ ಬ್ರಾಹ್ಮಣರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಮೀಸಲಾತಿ ಸೌಕರ್ಯ ಪಡೆಯುವ
ಕುರಿತು ಚರ್ಚಿಸಲಾಗುವುದು’ ಎಂದರು.

‘ಸಮಾಜದ ಯುವಕರು ಸಾಫ್ಟ್‌ವೇರ್, ಹೊರ ರಾಷ್ಟ್ರಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಐಎಎಸ್‌, ಐಪಿಎಸ್‌, ಕೆಎಎಸ್‌ನಂತಹ ಆಡಳಿತಾತ್ಮಕ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ, ಬ್ರಾಹ್ಮಣ ಹಾಗೂ ಅನ್ಯ ಸಮಾಜದ ಯುವಕರನ್ನು ಒಳಗೊಂಡಂತೆ ಐಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ತರಬೇತಿ ನೀಡಲಾಗುವುದು. ಬೋಧನೆ ಮಾಡುವಂತೆ ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಕೆಲವರು ಒಪ್ಪಿಗೆ ನೀಡಿದ್ದಾರೆ’ ಎಂದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ಕುಲಕರ್ಣಿ, ಮುಖಂಡರಾದ ವೀರೇಶ ಕುಲಕರ್ಣಿ, ವೆಂಕಟೇಶ, ಯುವ ಘಟಕದ ಅಧ್ಯಕ್ಷ ಮಂಜುನಾಥ ಕುಲಕರ್ಣಿ, ಮಹಿಳಾ ಘಟಕದ ಅನಿತಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.