ಗುರುವಾರ , ಮೇ 26, 2022
25 °C

ಕಂಚನಾಳ: ₹3.31ಕೋಟಿ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ: ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ತಾಲ್ಲೂಕಿನ ಕಂಚನಾಳ ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದ ಕಾಲ ಕೊನೆಗೂ ಕೂಡಿಬಂತು. ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಅವರು ಸೋಮವಾರ ₹3.31ಕೋಟಿ ವೆಚ್ಚದಲ್ಲಿ ಅಡಿಗಲ್ಲು ಹಾಕಿದರು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಕೈಗೊಳ್ಳಲಾದ ಕಾಮಗಾರಿಯೂ 2021-22ನೇ ಸಾಲಿನ ಕಲ್ಯಾಣ ಕರ್ನಾಟಕ ಮ್ಯಾಕ್ರೋ ಯೋಜನೆಗೆ ಸೇರಿದೆ.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಡಾ.ಅವಿನಾಶ ಜಾಧವ ಅವರು, ಗ್ರಾಮಸ್ಥರ ಇಚ್ಛೆಯಂತೆ ಪ್ರಾಥಮಿಕ ಶಾಲೆಯ ಕಾಮಗಾರಿ ಪೂರ್ಣಗೊಳಿಸಲಾಗಿದೆ. ದೇವಸ್ಥಾನದ ಕೆಲಸ ಕೈಗೊಳ್ಳಲಾಗುವುದು ಎಂದರು.

ಎಷ್ಟೋ ಚುನಾವಣೆ ಬಂದುಹೋಗಿದ್ದರೂ ಚಿಂಚೋಳಿ ಸಕ್ಕರೆ ಕಾರ್ಖಾನೆ ಕೆಲಸ ನನೆಗುದಿಗೆ ಬಿದ್ದಿತ್ತು. ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಈಗ ಸಕ್ಕರೆ ಕಾರ್ಖಾನೆ ಕಾರ್ಯ ಆರಂಭಗೊಂಡಿದೆ. ಗ್ರಾಮಸ್ಥರು ಬ್ರಿಡ್ಜ್ ಕಂ ಬ್ಯಾರೇಜ್ ನೀರು ಉಪಯೋಗಿಸಿ ಕಬ್ಬು ಬೆಳೆದು ನಮ್ಮ ಸಕ್ಕರೆ ಕಾರ್ಖಾನೆಗೆ ಕಳಿಸಿ ಅಧಿಕ ಲಾಭ ಪಡೆಯಿರಿ ಎಂದು ಹೇಳಿದರು.

ರಟಕಲ್ ವಿರಕ್ತಮಠದ ಸಿದ್ದರಾಮ ಸ್ವಾಮಿಗಳು ಸಾನಿಧ್ಯವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ತೇಜಮ್ಮ ಆಳಂದ, ತಾ.ಪಂ ಇಒ ಡಾ.ಅನಿಲಕುಮಾರ ರಾಠೋಡ, ಮುಖಂಡರಾದ ಮಹೇಂದ್ರ ಪೂಜಾರಿ ಬೆಡಸೂರ, ರಾಜಶೇಖರ ಗುಡದಾ, ರೇವಣಸಿದ್ದ ಬಡಾ, ತರುಣಶೇಖರ ಬಿರಾದಾರ, ಉಮೇಶ ಚವಾಣ, ನಾಗರಾಜ ಹಂದ್ರೋಳಿ, ಜಗದೀಶ ಮಾಳಗಿ, ಸಂತೋಷ ಗುತ್ತೇದಾರ, ರೇಣುಕಾ ಬಿರಾದಾರ, ದಶರಥ ಚಿಕ್ಕ ಅಗಸಿ, ದತ್ತಾತ್ರೇಯ ಕುಲಕರ್ಣಿ, ಮಲ್ಲಣ್ಣಾ ಭೈರಪನೋರ, ಕಲ್ಯಾಣರಾವ ತೆಳಕೇರಿ, ಚಂದ್ರಕಾಂತ ಚೋಕಾ ಇದ್ದರು.

ಮಹೇಶ ಪಾಟೀಲ ಸ್ವಾಗತಿಸಿ, ಮಲ್ಲು ಮರಗುತ್ತಿ ನಿರೂಪಿಸಿ, ಪ್ರಶಾಂತ ಪಾಟೀಲ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು