ಮಂಗಳವಾರ, ಸೆಪ್ಟೆಂಬರ್ 28, 2021
21 °C

ಸೊನ್ನ ಭೀಮಾ ಏತ ನೀರಾವರಿ ಯೋಜನೆ: ಸಮರ್ಪಕ ನೀರಾವರಿ ಸೌಲಭ್ಯ ಮರೀಚಿಕೆ

ಶಿವಾನಂದ ಹಸರಗುಂಡಗಿ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ತಾಲ್ಲೂಕಿನ ಸೊನ್ನ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಿ, 3 ಟಿಎಂಸಿ ನೀರು ಬಳಸಿಕೊಂಡು ಎರಡು ಕಾಲುವೆಗಳ ಮೂಲಕ 60 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಗೆ ಇಲ್ಲಿಯವರೆಗೆ ₹916 ಕೋಟಿ ಖರ್ಚು ಮಾಡಲಾಗಿದೆ. ಆದರೂ ಕೆಲವು ಕಡೆಗಳಲ್ಲಿ ಕಾಲುವೆಯಲ್ಲಿ ನೀರು ಹರಿಯುತ್ತಿಲ್ಲ!.

ಭೀಮಾ ಬ್ಯಾರೇಜ್‌ನಿಂದ ಬಳುಂಡಗಿ ಮತ್ತು ಅಳ್ಳಗಿ (ಬಿ) ಗ್ರಾಮದ ಹತ್ತಿರ ಏತಗಳನ್ನು ನಿರ್ಮಿಸಿ 29 ಮೀಟರ್ ನೀರು ಎತ್ತಿ ಕಾಲುವೆಗಳ ಮುಖಾಂತರ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಬಳುಂಡಗಿ ಏತ ನೀರಾವರಿ ಯೋಜನೆಯಿಂದ 41300, ಅಳ್ಳಗಿ (ಬಿ) ಏತ ನೀರಾವರಿ ಯಿಂದ 18700 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕಾಲುವೆ ನಿರ್ಮಿಸಲಾಗಿದೆ. ಹೂಳು ತುಂಬಿದ್ದರಿಂದ ನೀರು ಹರಿಯುತ್ತಿಲ್ಲ ಎಂದು ರೈತರು ಹೇಳುತ್ತಾರೆ.

ಒಟ್ಟು 32 ಗ್ರಾಮಗಳಲ್ಲಿ ಬಳುಂಡಗಿ ಏತ ನೀರಾವರಿ ಹಾಗೂ 11 ಗ್ರಾಮಗಳಲ್ಲಿ ಅಳ್ಳಗಿ (ಬಿ) ಏತ ನೀರಾವರಿ ಕಾಲುವೆ ಹಾದು ಹೋಗಿದೆ.

ಗುಡ್ಡೇವಾಡಿ ಗ್ರಾಮದ ಗುರು ಚಾಂದಕೋಟೆ, ಕೊಳ್ಳೂರ ಗ್ರಾಮದ ಭಾಗಣ್ಣ ಕುಂಬಾರ, ಸಿದ್ದು ಹಿಂದಿನಮನಿ ಮಾಹಿತಿ ನೀಡಿ, ‘ನಮ್ಮ ಗ್ರಾಮಕ್ಕೆ ಕಾಲುವೆ ಬಂದು 20 ವರ್ಷ ಕಳೆದರೂ ಒಂದು ದಿನವೂ ಕಾಲುವೆಗೆ ನೀರು ಹರಿದಿಲ್ಲ. ಕಾಲುವೆ ನಿರ್ಮಾಣವಾದಾಗ ಬಹಳ ಸಂತಸವಾಗಿತ್ತು. ಇದರಿಂದ ವರ್ಷದಲ್ಲಿ ಎರಡು ಬೆಳೆ ಬೆಳೆಯಲು ಅನುಕೂಲವಾಗುತ್ತಿತ್ತು. ನೀರೇ ಬರಲಿಲ್ಲ’ ಎಂದು ಅವರು
ಹೇಳಿದರು.

ಭೀಮಾ ಏತ ನೀರಾವರಿ ಮುಖ್ಯ ಕಚೇರಿಯಲ್ಲಿ ಒಬ್ಬ ಕಾರ್ಯಪಾಲಕ ಎಂಜಿನಿಯರ್ ಮತ್ತು ಉಪ ವಲಯ ಕಚೇರಿಗಳಲ್ಲಿ 3 ಜನ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್‌ಗಳಿದ್ದಾರೆ.

ಸುಮಾರು 8–10 ಎಕರೆಗಳಲ್ಲಿ ಭೀಮಾ ಏತ ನೀರಾವರಿ ಕಚೇರಿ ಕಟ್ಟಲಾಗಿದೆ. ಎಲ್ಲ ಸೇರಿ ಇಲ್ಲಿ 50 ಕ್ಕೂ ಹೆಚ್ಚು ಸಿಬ್ಬಂದಿ ಇದ್ದು, ಒಂದು ದಿನವೂ ಇಲ್ಲಿಗೆ ಯಾರೊಬ್ಬರೂ ಬರುವುದಿಲ್ಲ. ಮಾಹಿತಿ ನೀಡುವುದಿಲ್ಲ ಎಂದು ರೈತ ಸಂಘದ ಪದಾಧಿಕಾರಿಗಳು ದೂರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.