ಕಲಬುರಗಿ: ‘ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಏಳು ಕೋರ್ಸ್ಗಳನ್ನು ಆರಂಭಿಸಲು ಕೇಂದ್ರದ ಉನ್ನತ ಶಿಕ್ಷಣ ಸಚಿವಾಲಯ ಅನುಮತಿ ನೀಡಿದೆ’ ಎಂದು ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

‘ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಸಂಖ್ಯಾಶಾಸ್ತ್ರ ಮತ್ತು ದತ್ತಾಂಶ ವಿಶ್ಲೇಷಣೆಯಲ್ಲಿ ಸ್ನಾತಕೋತ್ತರ ಪದವಿ, 5 ವರ್ಷಗಳ ಬಿಎಎಲ್ಎಲ್ಬಿ, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಬಿಟೆಕ್, ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ಎಂಟೆಕ್, ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಎಂಎಸ್ಸಿ, ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನದಲ್ಲಿ ಜೀವವಿಜ್ಞಾನದ ಪುನರ್ರಚನೆ ಕೋರ್ಸ್ಗಳಿಗೆ ಅನುಮತಿ ಸಿಕ್ಕಿದೆ. ಈಗಾಗಲೇ ಬಿಎಎಲ್ಎಲ್ಬಿ ಮತ್ತು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಬಿಟೆಕ್ ಕೋರ್ಸ್ಗಳು ಪ್ರಾರಂಭವಾಗಿವೆ. ಉಳಿದವುಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಏಳು ಹೊಸ ವಿಭಾಗಗಳಿಗೆ 29 ಅಧ್ಯಾಪಕ ಹುದ್ದೆಗಳು ಮಂಜೂರಾಗಿವೆ. ಇತ್ತೀಚೆಗೆ 80 ಅಧ್ಯಾಪಕ ಮತ್ತು 50 ಅಧ್ಯಾಪಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ವಿವಿಯಲ್ಲೀಗ 175 ಅಧ್ಯಾಪಕರಿದ್ದಾರೆ. ಪೂರ್ಣ ಇ–ಆಡಳಿತ ಇದ್ದು, ಪ್ರವೇಶಾತಿಯಿಂದ ಫಲಿತಾಂಶದವರೆಗೂ ಎಲ್ಲವೂ ಆನ್ಲೈನ್ನಲ್ಲೇ ನಡೆಯುತ್ತಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಚನ್ನವೀರ ಆರ್.ಎಂ. ಹಾಗೂ ಎಲ್ಲ ವಿಭಾಗಗಳ ಡೀನ್ಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.