ಶನಿವಾರ, ಡಿಸೆಂಬರ್ 3, 2022
21 °C

ಶಾಲಾವಾಹನ ಹಾಯ್ದು ಬಾಲಕಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್ (ಯಾದಗಿರಿ ಜಿಲ್ಲೆ): ಶಾಲೆಯಿಂದ ಮಕ್ಕಳನ್ನು ಮನೆಗೆ ಬಿಡಲು ತೆರಳಿದ್ದ ಖಾಸಗಿ ಶಾಲಾ ವಾಹನ ಹಾಯ್ದು 2 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಪಟ್ಟಣದ ಲಕ್ಷ್ಮಿನಗರ ಬಡಾವಣೆಯ ನಿವಾಸಿ ವೆಂಕಟಪ್ಪ ಪುತ್ರಿ ಮನಸ್ವಿನಿ (2) ಮೃತಪಟ್ಟ ಬಾಲಕಿ.

ಪಟ್ಟಣದ ಫ್ರಂಟ್ ಲೈನ್ ಶಾಲೆಯ ವಾಹನದ ಚಾಲಕನ ನಿರ್ಲಕ್ಷ್ಯತನದಿಂದ ಅವಘಡ ಸಂಭವಿಸಿದೆ ಎಂದು ಬಾಲಕಿಯ ಸೋದರಮಾವ ವೆಂಕಟೇಶ ನಿಂಗವೋಳ ಆರೋಪಿಸಿದರು.

ಘಟನೆ: ಗುರುವಾರ ಸಂಜೆ ಅದೇ ಶಾಲಾ ಬಸ್‌ನಿಂದ ಪುತ್ರ ಭುವನನನ್ನು ಕರೆತರಲು ಬಾಲಕಿಯ ಸೋದರತ್ತೆ ಸುಧಾರಾಣಿ ತೆರಳಿದ್ದರು. ಅವರೊಂದಿಗೆ ಬಾಲಕಿಯೂ ರಸ್ತೆಯಲ್ಲಿದ್ದಳು. ಚಾಲಕ ಸರಿಯಾಗಿ ಗಮನಿಸದೆ ವೇಗವಾಗಿ ವಾಹನ ಚಲಾಯಿಸಿದ್ದು, ಬಾಲಕಿಯ ಮೇಲೆ ಬಸ್ ಚಕ್ರ ಹತ್ತಿದೆ. ಇದರಿಂದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ವೆಂಕಟೇಶ ತಿಳಿಸಿದರು.

ಪ್ರತಿನಿತ್ಯ ಬರುವ ಚಾಲಕನ ಬದಲಿಗೆ ಗುರುವಾರ ಹೊಸ ಚಾಲಕ ಬಂದಿದ್ದಾನೆ. ಶಾಲಾ ಬಸ್‌ನಲ್ಲಿ ಇನ್ನೊಬ್ಬ ಸಹಾಯಕನ್ನು ನೇಮಕ ಮಾಡಿಕೊಳ್ಳದ ಸಂಸ್ಥೆಯ ಹಾಗೂ ಮಕ್ಕಳನ್ನು ಗಮನಿಸದಂತೆ ಚಲಾಯಿಸಿದ ಚಾಲಕನ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಲಕ್ಷ್ಮಿನಗರ ಬಡಾವಣೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು