ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಭೂಕಂಪನ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಬೇಕು ಮತ್ತು ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ತಾಲ್ಲೂಕಿನ ಸುಲೇಪೇಟ ಉಮ್ಮರ್ಗಾ ರಾಜ್ಯ ಹೆದ್ದಾರಿ -32 ರಲ್ಲಿ ಬರುವ ಹೊಡೇಬೀರನಹಳ್ಳಿ ಕ್ರಾಸ್ ಬಳಿ ಪ್ರತಿಭಟನೆ ಆರಂಭಿಸಿದ್ದಾರೆ.
ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದಿರುವ ಈ ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ
ಗಡಿಕೇಶ್ವಾರ, ತೇಗಲತಿಪ್ಪಿ, ರಾಯಕೋಡ, ಕುಪನೂರ, ಹೊಡೇಬೀರನಹಳ್ಳಿ, ರಾಯಯೋಡ, ಹೊಸಳ್ಳಿಎಚ್, ಕೊರವಿ ಮತ್ತಿತರ ಗ್ರಾಮಗಳ ಜನರು ಭಾಗವಹಿಸಿದ್ದಾರೆ.
ಪ್ರಮುಖರಾದ ರೇವಣಸಿದ್ದಪ್ಪ ಅಣಕಲ್, ಪ್ರಕಾಶ ರಂಗನೂರ, ನಾಗರಾಜ ಚಕ್ರವರ್ತಿ, ಚಂದ್ರಶೇಖರಯ್ಯ ಕಂಬದ, ಮಸ್ತಾನ ಅಲಿ ಪಟ್ಟೇದಾರ, ವೀರೇಶ ರೆಮ್ಮಣಿ, ಸುರೇಶ ಪಾಟೀಲ ರಾಯಕೋಡ, ಮಂಗಳಮೂರ್ತಿ, ಹಣಮಂತ ರಾವ್ ಪಾಟೀಲ, ಸಿದ್ದಲಿಂಗಪ್ಪ ಹಲಚೇರಾ, ಮಸೂದ್ ಪಟೇಲ, ಶರಣಪ್ಪ ಕುಂಬಾರ, ಚಂದ್ರಕಾಂತ ದಂಡೋತಿ.ಜಗನ್ನಾಥ ಪೂಜಾರಿ, ಉದಯಕುಮಾರ ಕಲ್ಯಾಣಶೆಟ್ಟಿ, ಧನಶೆಟ್ಟಿ ರೆಮ್ಮಣಿ, ಪ್ರಭುಲಿಂಗ ಪ್ರತಿಭಟನೆಯಲ್ಲಿ ಇದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.