ಸಭೆಯಲ್ಲಿ ನಾವು ಶಾಂತಿಯುತವಾಗಿ ನಿಲುವು ವ್ಯಕ್ತಪಡಿಸಿದೆವು. ಬೇರೆಯವರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಕ್ರಾಂತಿಯ ಮಾತನಾಡಿದ್ದಾರೆ. ಇವರೆಲ್ಲರೂ ಸಚಿವ ಪ್ರಿಯಾಂಕ್ ಕಡೆಯ ಜನಅಂಬಾರಾಯ ಅಷ್ಟಗಿ ಬಿಜೆಪಿ ಮುಖಂಡ
ಆರ್‌ಎಸ್‌ಎಸ್ ಮೊದಲು ಅರ್ಜಿ ಸಲ್ಲಿಸಿದೆ. ಅದೇ ದಿನ ತಮಗೂ ಅವಕಾಶ ಕೊಡುವಂತೆ ಕೆಲವು ಸಂಘಟನೆಗಳು ಹಟ ಹಿಡಿದಿದ್ದು ತಪ್ಪು. ಅವರೆಲ್ಲ ಅಂಬೇಡ್ಕರ್ ಅನುಯಾಯಿಗಳೂ ಅಲ್ಲ, ಸಂವಿಧಾನವನ್ನೂ ಪಾಲಿಸುತ್ತಿಲ್ಲ. ರಾಷ್ಟ್ರೀಯ ಧ್ವಜ ಹಿಡಿದು ಪಥಸಂಚಲನ ನಡೆಸುವಂತೆ ಹೇಳಲು ಸಂಘಟನೆಗಳು ಯಾರು? ನಾವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಲ್ಲಿ ಕೋಟಿ–ಕೋಟಿ ಮನೆಗಳ ಮೇಲೆ ತ್ರಿವರ್ಣಧ್ವಜ ಹಾರಿಸಿದ್ದೇವೆ. ನಿಮ್ಮನ್ನು ಕೇಳಿ ತ್ರಿವರ್ಣ ಬಾವುಟ ಹಾರಿಸಬೇಕಾ?ಅಂಬಾರಾಯ ಅಷ್ಠಗಿ, ಆರ್‌ಎಸ್‌ಎಸ್ ಪರವಾಗಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡ
ಆರ್‌ಎಸ್‌ಎಸ್ ಈಗಲೂ ಫ್ಯಾಸಿಸ್ಟ್ ಸಿದ್ಧಾಂತದ ಮನೋಭಾವದಿಂದ ಹೊರಬಂದಿಲ್ಲ. ಸಭೆಯಲ್ಲಿ ತ್ರಿವರ್ಣ ಧ್ವಜ ಹಿಡಿಯುವ ಬಗೆಗೆ ಎದುರಾದ ಪ್ರಶ್ನೆಗೂ ಅವರು ತುಟಿಬಿಚ್ಚಿಲ್ಲ. ಅವರು ಭಾರತದ ಸಂವಿಧಾನ, ತ್ರಿವರ್ಣ ಒಪ್ಪುವುದಾಗಿ ಹೇಳುವ ಅವಕಾಶ ಕೈಚೆಲ್ಲಿದ್ದಾರೆ. ಲಾಠಿ ಬಿಟ್ಟು ಭಾರತದ ಬಾವುಟ ಹಿಡಿಯುವುದಾಗಿ ಹೇಳಿದ್ದರೆ, ಶಾಂತಿಸಭೆ ದೇಶಕ್ಕೆ ಮಾದರಿಯಾಗುತ್ತಿತ್ತುಕೆ.ನೀಲಾ, ಸೌಹಾರ್ದ ಕರ್ನಾಟಕ ಸಂಘಟನೆ ಸದಸ್ಯೆ
ಆರ್‌ಎಸ್‌ಎಸ್ ಲಾಠಿ ಬಿಟ್ಟು ಭಾರತದ ಬಾವುಟ, ಸಂವಿಧಾನ ಪೀಠಿಕೆ ಹಿಡಿದು ಪಥಸಂಚಲನ ನಡೆಸಲಿ ಎಂಬುದಷ್ಟೇ ನಮ್ಮ ಬೇಡಿಕೆ. ಸಂವಿಧಾನದ ಪೀಠಿಕೆ, ತ್ರಿವರ್ಣ ಧ್ವಜ ಹಿಡಿಯಲ್ಲ ಎನ್ನುವುದಾದರೆ, ಆರ್‌ಎಸ್‌ಎಸ್ ಪಥಸಂಚಲನದ ದಿನವೇ ನಾವೂ ಪಥಸಂಚಲನ ನಡೆಸುತ್ತೇವೆಎಸ್.ಎಸ್.ತಾವಡೆ, ಭೀಮ್ ಆರ್ಮಿ ರಾಜ್ಯಾಧ್ಯಕ್ಷ
ಆರ್‌ಎಸ್‌ಎಸ್‌ನವರು ಕೈಯಲ್ಲಿ ಲಾಠಿ ಹಿಡಿದು ಪಥಸಂಚಲನ ನಡೆಸಿದರೆ, ನಾವೂ ಅದೇ ದಿನ ಪಥಸಂಚಲನ ನಡೆಸುವುದಾಗಿ ಶಾಂತಿ ಸಭೆಯಲ್ಲಿ ತಿಳಿಸಿದ್ದೇವೆ. ಸಭೆಯಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧವಿಲ್ಲದ ಅಂಬಾರಾಯ ಅಷ್ಟಗಿ ಆರ್‌ಎಸ್‌ಎಸ್ ಪರವಾಗಿ ಮಧ್ಯಪ್ರವೇಶಿಸಿ ಮಾತನಾಡಿ ಅಶಾಂತಿ ಸೃಷ್ಟಿಸಿದರು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕುಮಲ್ಲಪ್ಪ ಹೊಸಮನಿ, ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ
ಚಿತ್ತಾಪುರದಲ್ಲಿ ಸದ್ಯ ಪರಿಸ್ಥಿತಿ ಸೂಕ್ಷ್ಮವಾಗಿದೆ. ಅಲ್ಲಿ ಆರ್‌ಎಸ್‌ಎಸ್ ಸೇರಿದಂತೆ ಯಾವುದೇ ಸಂಘಟನೆಗಳಿಗೂ ಮುಂದಿನ ತಿಂಗಳ ಅವಧಿಗೆ ಪಥಸಂಚಲನಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ಸಭೆಯಲ್ಲಿ ಕೋರಿದ್ದೇವೆಅರ್ಜುನ ಭದ್ರೆ, ಡಿಎಸ್‌ಎಸ್ (ಭೀಮಮಾರ್ಗ) ಸಂಘಟನೆ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.