ಮಂಗಳವಾರ, ಡಿಸೆಂಬರ್ 1, 2020
18 °C

ಕುರಿಕೋಟಾ: ಹಕ್ಕುಪತ್ರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ತಾಲ್ಲೂಕಿನ ಕುರಿಕೋಟಾ ಗ್ರಾಮಸ್ಥರಿಗೆ ತಹಶೀಲ್ದಾರ್‌ ಅಂಜುಮ್ ತಬಸುಮ್ ಶನಿವಾರ ಹಕ್ಕುಪತ್ರ ವಿತರಿಸಿದರು.

ಬೆಣ್ಣೆತೊರೆ ಯೋಜನೆಯಲ್ಲಿ ಕುರಿಕೋಟಾ ಮುಳಗಡೆಯಾಗಿದ್ದು, ಮಹಾಗಾಂವ ಕ್ರಾಸ್‍ಬಳಿ ಪುನರ್ವಸತಿ ಕಲ್ಪಿಸಲಾಗಿದೆ. ಪುನರ್ವಸತಿಯಲ್ಲಿ ಈಗಾಗಲೇ ಎಲ್ಲ ಸೌಕರ್ಯ ಒದಗಿಸಲಾಗಿದೆ. ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಳ್ಳಲು ಪತ್ರ ಹಾಗೂ ಕಟ್ಟಿಗೆಗಳನ್ನು ಒದಗಿಸಲು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಒಟ್ಟು 498 ನಿವೇಶನಗಳಿದ್ದು, 220 ನಿವೇಶನಗಳ ಹಕ್ಕುಪತ್ರ ಸಿದ್ಧಪಡಿಸಲಾಗಿದೆ. ಈಗಾಗಲೇ 120 ಜನರಿಗೆ ಹಕ್ಕುಪತ್ರ ಹಂಚಿಕೆ ಮಾಡಲಾಗಿದೆ. ಬಾಕಿ ಉಳಿದವರಿಗೆ ಮಂಗಳವಾರ ಗ್ರಾಮ ಪಂಚಾಯಿತಿಯಲ್ಲಿ ವಿತರಿಸಲಾಗುವುದು ಎಂದು ತಿಲಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವೀಣಾ ರಾಜಕುಮಾರ ಜಾಧವ್, ಸದಸ್ಯೆ ಪಾರ್ವತಿ ಸಲಗರ್, ಬೆಣ್ಣೆತೊರೆ ಯೋಜನೆ ಕಾರ್ಯಪಾಲಕ ಎಂಜಿನಿಯರ್ ಸಂಗಮನಾಥ, ಎಂಜಿನಿಯರ್ ರವೀಂದ್ರನಾಥ ಕುಲಕರ್ಣಿ, ಸಹಾಯಕ ಎಂಜಿನಿಯರ್ ಮಹಮ್ಮದ ಸಿರಾಜ್ಜೋದ್ದಿನ್, ಕಂದಾಯ ನಿರೀಕ್ಷಕ ವೆಂಕಟೇಶ ಅಡೋಣಿ, ಮುಖಂಡ ಚೆನ್ನವೀರಪ್ಪ ಸಲಗರ್, ಪಿಎಸ್‍ಐ ಹುಸೇನ್ ಭಾಷಾ, ಯೂನೂಸ್ ಪಟೇಲ್, ಅಣವೀರ, ದೇಶಮುಖ ಬಸವಣ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು