ಶಹಾಬಾದ್: ‘ಪ್ರಿಯಾಂಕ್ ಖರ್ಗೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಕುಟುಂಬಸ್ಥರಿಗೆ ಜೀವ ಬೆದರಿಕೆ ಕರೆಗಳು ನಿರಂತರವಾಗಿ ನಡೆಯುತ್ತಿದೆ. ಇದು ಖಂಡನೀಯ’ ಎಂದು ಜಿ.ಪಂ. ವಿರೋಧ ಪಕ್ಷ ನಾಯಕ ಶಿವಾನಂದ ಪಾಟೀಲ್ ಹಾಗೂ ಕಾಡಾ ಮತ್ತು ಶಹಾಬಾದ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎ.ರಶೀದ್ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ವಾಡಿ ಕ್ರಾಸ್ ಬಳಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಷ್ಟ್ರೀಯ ಹೆದ್ದಾರಿ ತಡೆದು, ಟೈರಿಗೆ ಬೆಂಕಿ ಹಚ್ಚಿ ಆರ್ಎಸ್ಎಸ್ ಪೋಸ್ಟರ್ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಆರ್ಎಸ್ಎಸ್ ನಾಯಕರು ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರಬೋಸ್ ಹಾಗೂ ಡಾ.ಅಂಬೇಡ್ಕರ್ ಅವರನ್ನೂ ಗೌರವಿಸುವುದಿಲ್ಲ. ಅವರ ವಿಚಾರ ಕೂಡ ಒಪ್ಪುವುದಿಲ್ಲ, ಸಂವಿಧಾನವಂತೂ ಪಾಲಿಸುವುದೇ ಇಲ್ಲ. ಇಂತಹ ಮನಸ್ಥಿತಿ ನಿಧಾನವಾಗಿದೆ. ಆರ್ಎಸ್ಎಸ್ ಸಂಘಟನೆಯನ್ನು ನಿಷ್ಕ್ರೀಯಗೊಳಿಸಿ ಮುಂದೆ ನಡೆಯುವ ಅನಾಹುತಗಳನ್ನು ತಪ್ಪಿಸಬೇಕು’ ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸುರೇಶ ಮೆಂಗನ, ಅಹಮದ ಪಟೇಲ್, ಅಜಿತ್ ಪಾಟೀಲ್, ಭೀಮಗೌಡ ಖೇಣಿ, ವಿಜಯ್ ಕುಮಾರ್ ಮುತ್ತಟ್ಟಿ, ರಾಜೇಶ್ ಯನುಗುಂಟಿಕರ್, ಮಹಮದ್ ಜಾವಿದ್, ಕಿರಣ ಚವ್ಹಾಣ, ಅನ್ವರ್ ಪಾಶಾ, ಪೀರ ಪಾಶಾ, ಮುಜೈದ್ ಹುಸೇನ್, ಭೀಮಯ್ಯ ಗುತ್ತೇದಾರ್, ದೇವೇಂದ್ರ ಕಾರೊಳ್ಳಿ, ಮಲ್ಕಣ್ಣ ಮುದ್ದಾ ಹಾಗೂ ಕಾಂಗ್ರೆಸ್ ವಕ್ತಾರರು, ಕಾರ್ಯಕರ್ತರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಲ್ಲೂಕು ಗ್ರೇಡ್–2 ತಹಶೀಲ್ದಾರ್ ಗುರುರಾಜ ಸಂಗಾವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಿಂದ ಸುಮಾರು 1 ಗಂಟೆಗೂ ಅಧಿಕ ಕಾಳ ಸಂಚಾರ ಬಂದ್ ಆಗಿತ್ತು. ನಗರ ಪೊಲೀಸ್ ಠಾಣೆಯ ಪಿಐ ನಟರಾಜ ಲಾಡೆ, ಪಿಎಸ್ಐ ಚಂದ್ರಕಾಂತ ಮಕಾಲೆ, ಎಎಸ್ಐ ಹಣಮಂತ ಅಷ್ಟಗಿ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.