ಕಲಬುರಗಿ: ‘ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಬ್ರಹ್ಮಪುರ ಬಡಾವಣೆಯ ಬಸವನಗರ ಮತಗಟ್ಟೆಯಲ್ಲಿ ಮಂಗಳವಾರ ಪತ್ನಿ ರಾಧಾಬಾಯಿ ಖರ್ಗೆ ಅವರೊಂದಿಗೆ ಮತ ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

‘ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಎಲ್ಲೆಡೆಯಿಂದಲೂ ಒಳ್ಳೆಯ ವರದಿಗಳು ಬರುತ್ತಿವೆ. ಮೂರನೇ ಹಂತದ ಮತದಾನದಲ್ಲಿ ‘ಇಂಡಿಯಾ’ ಒಕ್ಕೂಟದ ಪಕ್ಷಗಳಿಗೆ ಜನರಿಂದ ಒಳ್ಳೆಯ ರೀತಿಯ ಬೆಂಬಲವೂ ವ್ಯಕ್ತವಾಗಿದೆ. ಇದರಿಂದ ‘ಇಂಡಿಯಾ’ ಒಕ್ಕೂಟದ ಮಿತ್ರ ಪಕ್ಷಗಳು ಹೆಚ್ಚಿನ ಬಲ ಪಡೆದುಕೊಳ್ಳುತ್ತಿವೆ. ಈ ಚುನಾವಣೆಯನ್ನು ಬಹಳಷ್ಟು ಜನರು ಕುತೂಹಲದಿಂದ ನೋಡುತ್ತಿದ್ದು, ಜನರಿಂದಲೂ ನಾವು ಉತ್ತಮ ಬೆಂಬಲ ಗಳಿಸುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.