ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ತಾಪುರ | ಬಹಾರಪೇಠ ತಾಂಡಾದಲ್ಲಿ ವಿದ್ಯುತ್‌ ದುರಂತ: ₹10 ಲಕ್ಷ ಪರಿಹಾರಕ್ಕೆ ಆದೇಶ

Published 16 ಜೂನ್ 2023, 6:03 IST
Last Updated 16 ಜೂನ್ 2023, 6:03 IST
ಅಕ್ಷರ ಗಾತ್ರ

ಚಿತ್ತಾಪುರ: ಪಟ್ಟಣದ ಬಹಾರಪೇಠ ತಾಂಡಾದಲ್ಲಿ ಜೂ.12 ರಂದು ರಾತ್ರಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ದಂಪತಿಗೆ ತಲಾ ₹5 ಲಕ್ಷದಂತೆ ಒಟ್ಟು ₹10 ಲಕ್ಷ ಪರಿಹಾರವನ್ನು ಕಲಬುರಗಿ ಜೆಸ್ಕಾಂ ಇಲಾಖೆ ಮಂಜೂರು ಮಾಡಿ ಆದೇಶಿಸಿದೆ.

ಸಂಬಂಧಿಕರ ಮನೆಯ ಹತ್ತಿರ ವಿದ್ಯುತ್ ಸ್ಪರ್ಶದಿಂದ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಏವೂರು ತಾಂಡಾದ ಶಿವು ಕಿಶನ್ ರಾಠೋಡ್, ತಾರಾಬಾಯಿ ಶಿವು ರಾಠೋಡ್ ಅವರು ಸಾವನ್ನಪ್ಪಿದ್ದರು.

ಮೃತಪಟ್ಟವರ ವಾರಸುದಾರರ ಪ್ರಮಾಣ ಪತ್ರ ಪಡೆಯಬೇಕು. ಇಲಾಖೆಯಿಂದ ಪರಿಹಾರ ಧನ ಪಡೆದ ಮೇಲೆ ಹೆಚ್ಚಿನ ಪರಿಹಾರ ಕೋರಿ ಯಾವುದೇ ನ್ಯಾಯಾಲಯದಲ್ಲಿ ದಾವೆ ಹೂಡುವುದಿಲ್ಲ ಎಂದು ಅವಲಂಬಿತರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳಬೇಕು ಎಂದು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪೆನಿ ನಿಯಮಿತದ ಅಧಿಕ್ಷಕ ಎಂಜಿನಿಯರ್ ಅವರು ಆದೇಶ ಮಾಡಿದ್ದಾರೆ.

ಗಾಯಾಳುಗಳಿಗೂ ಪರಿಹಾರ ನೀಡಿ: ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ದಂಪತಿ ಕುಟುಂಬಕ್ಕೆ ಜೆಸ್ಕಾಂ ಇಲಾಖೆ ಪರಿಹಾರ ಧನ ಮಂಜೂರು ಮಾಡಿ ಆದೇಶ ಮಾಡಿದಂತೆ ಘಟನೆಯಲ್ಲಿ ಗಾಯಗೊಂಡಿರುವ ರೂಪಸಿಂಗ್ ಮತ್ತು ಕಿರಣ ಅವರಿಗೂ ಪರಿಹಾರ ನೀಡಬೇಕು ಎಂದು ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ರಾಮದಾಸ್ ಚವಾಣ್ ಅವರು ಆಗ್ರಹಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಗಾಯಾಳುಗಳಿಗೆ ಪರಿಹಾರ ಧನ ನೀಡುವಂತೆ ಜೆಸ್ಕಾಂ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT