ಶನಿವಾರ, ಜುಲೈ 24, 2021
23 °C

ಕೋವಿಡ್‌ ಸೋಂಕಿನಿಂದ ಮತ್ತೆ ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೋವಿಡ್‌–19‌ ಸೋಂಕಿನಿಂದ ಜಿಲ್ಲೆಯ ಮತ್ತೆ ಮೂವರು ಮೃತಪಟ್ಟಿದ್ದಾರೆ. ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ ‌46ಕ್ಕೆ ಏರಿಕೆಯಾಗಿದೆ.

ತೀವ್ರ ಉಸಿರಾಟ ತೊಂದರೆ, ಅಸ್ತಮಾದಿಂದ ಬಳಲುತ್ತಿದ್ದ ನಗರದ ಮಿಸ್ಬಾ ನಗರದ 59 ವರ್ಷದ ಪುರುಷ, ಜು 11ರಂದು ಆಸ್ಪತ್ರೆಗೆ ದಾಖಲಾಗಿ ಜು 13ರಂದು ನಿಧನ ಹೊಂದಿದ್ದಾರೆ. ತೀವ್ರ ಉಸಿರಾಟ ತೊಂದರೆ ಯಿಂದಾಗಿ ಆಳಂದ ಪಟ್ಟಣದ 54 ವರ್ಷದ ಮಹಿಳೆ, ಜು 9ರಂದು ಆಸ್ಪತ್ರೆಗೆ ದಾಖಲಾಗಿ ಜು 10ರಂದು ನಿಧನ ಹೊಂದಿರುತ್ತಾರೆ.

ಅದೇ ರೀತಿ ತೀವ್ರ ಉಸಿರಾಟ ತೊಂದರೆ, ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಕಲಬುರ್ಗಿಯ ಟಿಪ್ಪು ಸುಲ್ತಾನ ಚೌಕ್ ಪ್ರದೇಶದ 54 ವರ್ಷದ ಪುರುಷ ಜು 10ರಂದು ಅಸ್ಪತ್ರೆಗೆ ದಾಖಲಾಗಿ ಜು.12ರಂದು ನಿಧನ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.ಕಲಬುರ್ಗಿಯಲ್ಲಿ ಭಾನುವಾರ 69 ಜನರಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಅದೇ ದಿನ 80 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 2743ಕ್ಕೆ ಏರಿದ್ದು, 1771 ಜನ ಬಿಡುಗಡೆಯಾಗಿದ್ದಾರೆ. 926 ಸಕ್ರಿಯ ಪ್ರಕರಣಗಳಿವೆ.

ಅವರ ಪೈಕಿ 64 ವರ್ಷದ ಜಯದೇವ ಆಸ್ಪತ್ರೆಯ ವ್ಯಕ್ತಿ, ಎಸ್ಪಿ ಕಚೇರಿಯ 50 ವರ್ಷದ ಸಿಬ್ಬಂದಿ, 5 ವರ್ಷದ ಮಗು, 19 ಮಹಿಳೆಯರು ಸೇರಿದ್ದಾರೆ. ಸೋಂಕಿತರ ಪೈಕಿ 54 ಜನ ಕಲಬುರ್ಗಿ ನಗರದವರೇ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು