ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 14.61 ಲಕ್ಷ ದಂಡ ಸಂಗ್ರಹ

ಲಾಕ್‌ಡೌನ್ ನಿಯಮ ಉಲ್ಲಂಘನೆ; 1949 ವಾಹನಗಳ ಜಪ್ತಿ
Last Updated 17 ಮೇ 2021, 10:59 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್ ಆರಂಭವಾದ ಮೇ 10ರಿಂಧ 16ರ ಸಂಜೆಯವರೆಗೆ ಕಮಿಷನರೇಟ್‌ ವ್ಯಾಪ್ತಿಯಲ್ಲಿ 1949 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ₹ 14.61 ಲಕ್ಷ ದಂಡವನ್ನು ಸಂಗ್ರಹಿಸಲಾಗಿದೆ. ಸಕಾರಣವಿಲ್ಲದೇ ನಿಗದಿತ ಅವಧಿ ಮೀರಿದ ಬಳಿಕ ರಸ್ತೆಗಿಳಿದ ವಾಹನಗಳ ಜಪ್ತಿ ಮುಂದುವರಿದಿದೆ.

ಮಾಸ್ಕ್ ಹಾಕಿಕೊಳ್ಳದೇ ರಸ್ತೆಗಿಳಿದಿದ್ದಕ್ಕೆ 7269 ಜನರಿಂದ ದಂಡ ವಸೂಲಿ ಮಾಡಲಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ (ಕೆಇಡಿ) ಅಡಿ 222 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಸತೀಶಕುಮಾರ್‌ ಮಾಹಿತಿ ನೀಡಿದರು.

ಸದ್ಯಕ್ಕಿಲ್ಲ ವಾಹನ ಬಿಡುಗಡೆ: ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಅದನ್ನು ಮೀರಿಯೂ ಸಕಾರಣವಿಲ್ಲದೇ ವಾಹನಗಳೊಂದಿಗೆ ರಸ್ತೆಗಿಳಿಯುತ್ತಿವೆ. ಅಂಥವರ ವಾಹನಗಳನ್ನು ಜಪ್ತಿ ಮಾಡುತ್ತಿದ್ದೇವೆ. ಹೀಗೆ ಜಪ್ತಿ ಮಾಡಿದ ವಾಹನಗಳನ್ನು ಲಾಕ್‌ಡೌನ್‌ ಮುಗಿಯುವವರೆಗೆ ಬಿಡುಗಡೆ ಮಾಡುವುದಿಲ್ಲ ಎಂದರು.

‘ಪೊಲೀಸ್‌ ಇಲಾಖೆಯಿಂದ ನಾವು ಯಾರಿಗೂ ಪಾಸ್‌ ಕೊಡುತ್ತಿಲ್ಲ. ವಿವಿಧ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಂಘಟನೆಗಳ ಮುಖಂಡರು ತಮ್ಮ ಸದಸ್ಯರಿಗೆ ಗುರುತಿನ ಚೀಟಿಯನ್ನು ವಿತರಿಸಬೇಕು. ಎಷ್ಟು ಗುರುತಿನ ಚೀಟಿ ಕೊಟ್ಟಿದ್ದಾರೆ. ಅದರ ಸಂಖ್ಯೆ ಏನು ಎಂಬ ಮಾಹಿತಿಯನ್ನು ಇಲಾಖೆಗೆ ಸಲ್ಲಿಸಬೇಕು. ಒಂದೊಮ್ಮೆ ಅಂಥವರ ವಾಹನ ಹಿಡಿದಾಗ ಗುರುತಿನ ಚೀಟಿ ತೋರಿಸಿದಾಗ ಅವರನ್ನು ಮುಂದೆ ಹೋಗಲು ಅವಕಾಶ ನೀಡಲಾಗುತ್ತದೆ’ ಎಂದು ಸತೀಶಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT