ಕಲಬುರಗಿ: ಮುಂಬರುವ ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಸೋಲಾಪುರ ವಿಭಾಗದಿಂದ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ದೌಂಡ್–ಕಲಬುರಗಿ ರೈಲು: ವಾರದಲ್ಲಿ 5 ದಿನಗಳು ಕಾಯ್ದಿರಿಸದ ವಿಶೇಷ (ರೈಲು ಸಂಖ್ಯೆ 01421) ಸೆ.26ರಿಂದ ಡಿ.1ರವರೆಗೆ ಪ್ರತಿ ಸೋಮವಾರ, ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ 5 ಗಂಟೆಗೆ ದೌಂಡ್ನಿಂದ ಹೊರಟು ಅದೇ ದಿನ ಬೆಳಿಗ್ಗೆ 11.20 ಗಂಟೆಗೆ ಕಲಬುರಗಿಗೆ ಆಗಮಿಸಲಿದೆ. ಅದೇ ರೀತಿ (ರೈಲು ಸಂಖ್ಯೆ 01422) ಸೆ.26ರಿಂದ ಡಿ.1ರವರೆಗೆ ಪ್ರತಿ ಸೋಮವಾರ, ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಕಲಬುರಗಿಯಿಂದ ಸಂಜೆ 4.10ಕ್ಕೆ ಹೊರಟು ಅದೇ ದಿನ ರಾತ್ರಿ 10.20ಕ್ಕೆ ದೌಂಡ್ಗೆ ತಲುಪಲಿದೆ. ಈ ರೈಲು ಭಿಗ್ವಾನ್, ಪರೆವಾಡಿ, ಜೆಯೂರ್, ಕೆಮ್, ಕುರ್ದುವಾಡಿ, ಮಾಧಾ, ಮೊಹೋಲ್, ಸೋಲಾಪುರ, ಟಿಕೇಕರ್ವಾಡಿ, ಹೋಟಗಿ, ಅಕ್ಕಲಕೋಟ ರಸ್ತೆ, ಬೊರೊಟಿ, ದುಧನಿ ಮತ್ತು ಗಾಣಗಾಪುರ ಮಾರ್ಗವಾಗಿ ಸಂಚರಿಸಲಿವೆ.

ದೌಂಡ್– ಕಲಬುರಗಿ ಕಾಯ್ದಿರಿಸದ ವಾರದ ದ್ವಿ-ವಿಶೇಷ ರೈಲು: (ರೈಲು ಸಂಖ್ಯೆ 01425) ಈ ವಿಶೇಷ ರೈಲು ಸೆ.25ರಿಂದ ನ.30ರವರೆಗೆ ಪ್ರತಿ ಗುರುವಾರ ಮತ್ತು ಭಾನುವಾರ ದೌಂಡ್ದಿಂದ ಬೆಳಿಗ್ಗೆ 5 ಗಂಟೆಗೆ ಹೊರಟು ಅದೇ ದಿನ ಬೆಳಿಗ್ಗೆ 11.20ಕ್ಕೆ ಕಲಬುರಗಿಗೆ ಆಗಮಿಸಲಿದೆ. ಅದೇ ರೀತಿ (ರೈಲು ಸಂಖ್ಯೆ 01426) ಸೆ.25ರಿಂದ ನ.30ರವರೆಗೆ ಪ್ರತಿ ಗುರುವಾರ ಮತ್ತು ಭಾನುವಾರ ಕಲಬುರಗಿಯಿಂದ ರಾತ್ರಿ 8.30ಕ್ಕೆ ಹೊರಟು ರಾತ್ರಿ 2.30ಕ್ಕೆ ದೌಂಡ್ ತಲುಪಲಿದೆ. ಈ ರೈಲು ಭಿಗ್ವಾನ್, ಪರೆವಾಡಿ, ಜೆಯೂರ್, ಕೆಮ್, ಕುರ್ದುವಾಡಿ, ಮಾಧಾ, ಮೊಹೋಲ್, ಸೋಲಾಪುರ, ಟಿಕೆಕರ್ವಾಡಿ, ಹೋಟಗಿ, ಅಕ್ಕಲಕೋಟ ರಸ್ತೆ, ಬೊರೊಟಿ, ದುಧನಿ ಮತ್ತು ಗಾಣಗಾಪುರ ಮಾರ್ಗವಾಗಿ ನಿಲುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.