ಬುಧವಾರ, ಜನವರಿ 29, 2020
30 °C

ಚಲಿಸುವ ‌ರೈಲಿನಲ್ಲೇ ಹೆರಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಯಾದಗಿರಿಯಿಂದ ಬೆಂಗಳೂರಿಗೆ ಉದ್ಯಾನ್‌ ಎಕ್ಸ್‌ಪ್ರೆಸ್‌ನಲ್ಲಿ ಹೊರಟಿದ್ದ ತುಂಬು ಗರ್ಭಿಣಿಗೆ ರೈಲಿನಲ್ಲೇ ಸೋಮವಾರ ರಾತ್ರಿ ಹೆರಿಗೆಯಾಗಿದೆ. ರೈಲಿನಲ್ಲಿ ಜನ್ಮತಳೆದ ಗಂಡುಮಗು ಆರೋಗ್ಯವಾಗಿದೆ.

ಯಾದಗಿರಿ ಜಿಲ್ಲೆಯ ಸೈದಾಪುರ ನಿವಾಸಿಯಾಗಿರುವ ಗೀತಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಅದೇ ಬೋಗಿಯಲ್ಲಿ ಬೆಂಗಳೂರಿಗೆ ಕಾರ್ಯಕ್ರಮವೊಂದರಲ್ಲಿ ‌ಪಾಲ್ಗೊಳ್ಳಲು ಹೊರಟಿದ್ದ‌ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರಾದ ಮಲ್ಲಿಕಾ ಹಾಗೂ ಹಾಲಬಾಯಿ ಅವರು ಸುಸೂತ್ರ ಹೆರಿಗೆ ‌ಮಾಡಿಸಿದರು.

ಗೀತಾ ಗಂಡು ಮಗುವಿಗೆ ‌ಜನ್ಮ ನೀಡಿದರು.

ಇದನ್ನೂ ಓದಿ: ಶಹಾಪುರ | ಬಸ್‌ನಲ್ಲೇ ಹೆರಿಗೆ: ತಾಯಿ–ಮಗು ಸೌಖ್ಯ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು