ಕಲಬುರಗಿ: ‘ಭಾಷಣಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಹಾಡು ಹಾಗೂ ನಾಟಕಗಳ ಮೂಲಕ ಜನರನ್ನು ತಲುಪಬಹುದಗಿದೆ‘ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ. ಅಪ್ಪಗೆರೆ ಸೋಮಶೇಖರ್ ಅಭಿಪ್ರಾಯಪಟ್ಟರು.

ಸಮುದಾಯ ಕಲಬುರಗಿ, ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಶಿವಸಂಚಾರ ನಾಟಕೋತ್ಸವದಲ್ಲಿ ಸೋಮವಾರ ಅವರು ಮಾತನಾಡಿದರು.

1970ರ ದಶಕದಲ್ಲಿ ಹೋರಾಟದ ಹಾಡುಗಳು ಸಮಾಜ ಬದಲಾವಣೆಯಲ್ಲಿ ಬಹುದೊಡ್ಡ ಪಾತ್ರವನ್ನು ನಿರ್ವಹಿಸಿದ್ದವು. ಕವಿ, ಹೋರಾಟಗಾರರಾಗಿದ್ದ ಚಂದ್ರಪ್ರಸಾದ್ ತ್ಯಾಗಿ, ಸಿದ್ದಲಿಂಗಯ್ಯ, ಕೆ.ಬಿ. ಸಿದ್ದಯ್ಯ, ಕೋಟಗಾನಹಳ್ಳಿ ರಾಮಯ್ಯ ಅವರ ಕವಿತೆಗಳು ಜನಜನಿತವಾಗಿದ್ದವು. ದೇವನೂರು ಮಹಾದೇವ ಅವರ ಕುಸುಮಬಾಲೆಯಲ್ಲಿ ತ್ಯಾಗಿ ಅವರ ಪಾತ್ರವನ್ನು ಸೃಷ್ಟಿಸಿದ್ದರು. ಹಾಸನದಲ್ಲಿ ಜೀತ ಮಾಡುತ್ತಿದ್ದ ವ್ಯಕ್ತಿ ಹೋರಾಟದ ಹಾಡುಗಳನ್ನು ಕೇಳಿ ಜೀತವನ್ನೇ ಬಿಟ್ಟು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತನಾದನು ಎಂದು ಸ್ಮರಿಸಿದರು.

ಪ್ರಸಿದ್ಧ ನಾಟಕಕಾರ ಸಫ್ದರ್ ಹಶ್ಮಿ ಅವರು ನಾಟಕಗಳ ಮೂಲಕ ಮೂಡಿಸಿದ ವಿಚಾರ ಸಾವಿರ ಭಾಷಣಕ್ಕಿಂತಲೂ ಮಿಗಿಲು ಎಂದರು.

ಸಮುದಾಯ ಕಲಬುರಗಿ ಸಂಘಟನೆಯ ಅಧ್ಯಕ್ಷ ದತ್ತಾತ್ರೇಯ ಇಕ್ಕಳಕಿ ಮಾತನಾಡಿ, ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಚಿಕ್ಕವಯಸ್ಸಿನಲ್ಲಿಯೇ ಅಸ್ಪೃಶ್ಯತೆಯ ಕರಾಳ ರೂಪವನ್ನು ಕಂಡಿದ್ದರು. ಅವರ ತಾಯಿ ಕಾಯಿಲೆ ಬಿದ್ದಾಗಲೂ ಮೇಲ್ಜಾತಿಯ ವೈದ್ಯೆ ಚಿಕಿತ್ಸೆ ನೀಡಲು ಬಾರದೇ ಇದ್ದುದಕ್ಕೆ ಬೇಸರಗೊಂಡಿದ್ದರು‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.