ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳ ಪಾತ್ರ ಮಹತ್ವದ್ದು: ಸಚಿವ ಶರಣಬಸಪ್ಪ ದರ್ಶನಾಪುರ

Published : 18 ಸೆಪ್ಟೆಂಬರ್ 2024, 15:44 IST
Last Updated : 18 ಸೆಪ್ಟೆಂಬರ್ 2024, 15:44 IST
ಫಾಲೋ ಮಾಡಿ
Comments

ಕಲಬುರಗಿ: ‘ಜಗತ್ತಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳ ಪಾತ್ರ ಬಹಳ ಪ್ರಮುಖವಾದದ್ದು’ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಅಭಿಪ್ರಾಯಪಟ್ಟರು.

ನಗರದ ಶರಣ ಬಸವೇಶ್ವರ ದೇವಸ್ಥಾನದ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಭವನದಲ್ಲಿ ದಿ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರ್ಸ್ ಇಂಡಿಯಾ ಕಲಬುರಗಿ ಘಟಕದಿಂದ ಆಯೋಜಿಸಿದ್ದ 57ನೇ ಎಂಜಿನಿಯರ್ಸ್ ಡೇ ಮತ್ತು ವಿಶ್ವೇಶ್ವರಯ್ಯ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಆರೋಗ್ಯ, ನಿರ್ಮಾಣ, ನೀರಾವರಿ, ಕೈಗಾರಿಕಾ, ಬಾಹ್ಯಾಕಾಶ, ಎಲೆಕ್ಟ್ರಾನಿಕ್ ಉದ್ಯಮ ಕ್ಷೇತ್ರದಲ್ಲಿ ಎಂಜಿನಿಯರ್‌ಗಳ ಬುದ್ಧಿಮತ್ತೆ, ಶ್ರಮದ ಫಲವಾಗಿ ಕ್ರಾಂತಿಕಾರಕ ಬದಲಾವಣೆ ಸಾಧ್ಯವಾಗಿದೆ’ ಎಂದರು.

ಇತಿಹಾಸಕಾರ, ಎಂಜಿನಿಯರ್‌ ದೇವೇಂದ್ರ ಅರ್ನಲ್ಲಿ ಮಾತನಾಡಿದರು. ಶ್ರೀಧರ್ ಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಸುನಿಲ್ ಕುಲಕರ್ಣಿ ದಿಕ್ಸೂಚಿ ಭಾಷಣ ಮಾಡಿದರು.

ಕಲಬುರಗಿಯ ಸಾಧಕ ಎಂಜಿನಿಯರ್‌ಗಳಾದ ಗಿರಿಧರ್ ಕುಲಕರ್ಣಿ, ನಾಗೇಂದ್ರಪ್ಪ ಬಿರಾದಾರ, ಸಂಪತ್ ಗಿಲಡಾ, ಶ್ರೀಯಾಂಕಾ ಧನಶ್ರೀ, ಅನಿಲ್ ಕುಮಾರ್ ಕಾಡಾದಿ ಹಾಗೂ ನಾಗೇಂದ್ರ ಎಚ್. ಅವರನ್ನು ಸನ್ಮಾನಿಸಲಾಯಿತು.

ಸೀತಾರಾಮ್ ರೆಡ್ಡಿ ಮನ್ನೂರ್ ವಂದಿಸಿದರು. ಉದಯ್ ಬಳ್ಳಾರಿ, ಚಂದ್ರಶೇಖರ್ ಭೋಗಲೆ, ಭರತ್ ಭೂಷಣ್‌ ಅತಿಥಿಗಳನ್ನು ಪರಿಚಯಿಸಿದರು. ಶ್ರದ್ಧಾ ಭುರ್ಕಪಲ್ಲಿ, ನಳಿನಿ ಸಾವನ್ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಸದಸ್ಯ ಜಿ.ಆರ್.ಮುತ್ತಗೆ, ಬಸವರಾಜ ಪಾಟೀಲ, ಪ್ರೊ.ಬಾಬುರಾವ ಶೇರಿಕಾರ, ಸುಭಾಷ ಸೂಗೂರು, ಚಂದ್ರಶೇಖರ ಕಕ್ಕೇರಿ, ಹಣಮಂತ ರೆಡ್ಡಿ, ಹಣಮಂತ ಪ್ರಭು, ಉದಯ ಬಳ್ಳಾರಿ, ಚಂದ್ರಶೇಖರ ಬೋಗ್ಲೆ, ಚನ್ನವೀರಯ್ಯ ಸ್ವಾಮಿ, ಚಂದ್ರಕಲಾ ತೆಗನೂರ, ವಿಶ್ವನಾಥ್ ರೆಡ್ಡಿ, ಅಮರೇಶ್ ಗಣಾಚಾರಿ, ಪವನ್ ರಂಗದಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT