ಕಮಲಾಪುರ (ಕಲಬುರಗಿ ಜಿಲ್ಲೆ): ಉಳುಮೆ ಮಾಡುವಾಗ ಎತ್ತು ಹಾಯ್ದು ಗಂಭೀರವಾಗಿ ಗಾಯಗೊಂಡಿದ್ದ ರೈತ ಬುಧವಾರ ನಸುಕಿನ ಜಾವ ಮೃತಪಟ್ಟಿದ್ದಾರೆ. ಕಮಲಾಪುರ ಪಟ್ಟಣದ ಶಾರಬೇಸ್ ತಾಂಡಾದಲ್ಲಿ ಹೊಲದಲ್ಲಿ ಈ ಘಟನೆ ನಡೆದಿದೆ.

ರೇಖು ಪೋಮು ರಾಠೋಡ (75) ಮೃತ ರೈತ.

ರೇಖು ತಮ್ಮ ಜಮೀನಿನಲ್ಲಿ ಮಂಗಳವಾರ ಉಳುಮೆ ಮಾಡುತ್ತಿದ್ದರು. ಸಂಜೆ ಕೊರಳು ಬಿಚ್ಚಿ ಮೇಯಿಸುತ್ತಿದ್ದಾಗ ರೇಖು ಅವರನ್ನು ಎತ್ತಿ ನೆಲಕ್ಕುರುಳಿಸಿತ್ತು. ನಂತರ ಎದೆಯ ಮೇಲೆ ಕಾಲಿಟ್ಟಿತ್ತು. ಗಂಭೀರವಾಗಿ ಗಾಯಗೊಂಡ ರೇಖು ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ನಸುಕಿನ ಜಾವ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಮೃತರಿಗೆ ರೇಖು ಅವರಿಗೆ ನಾಲ್ವರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.