ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧಡೆ ಸಂಭ್ರಮದ ಎಳ್ಳ ಅಮವಾಸ್ಯೆ ಆಚರಣೆ

Published 12 ಜನವರಿ 2024, 5:53 IST
Last Updated 12 ಜನವರಿ 2024, 5:53 IST
ಅಕ್ಷರ ಗಾತ್ರ

ಅಫಜಲಪುರ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಗುರುವಾರ ಸಡಗರ ಸಂಭ್ರಮದಿಂದ ಎಳ್ಳ ಅಮವಾಸ್ಯೆ ಆಚರಿಸಿದರು.

ರೈತರು, ವಿವಿಧ ತರಕಾರಿ ಮತ್ತು ಕಾಳು ಕಡಿಗಳನ್ನು ಸಂಗ್ರಹಿಸಿ, ವಿವಿಧ ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿಕೊಂಡು ಕುಟುಂಬದ ಸದಸ್ಯರೆಲ್ಲ ಹೊಲಗಳಿಗೆ ಹೋಗಿ ಸಾಮೂಹಿಕ ಭೋಜನ ಸವಿಯುವ ಪದ್ಧತಿಯಿದೆ.

ತಾಲೂಕಿನ ಶಿರವಾಳ ಗ್ರಾಮದ ಎನ್‌ಪಿಎಸ್ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಹೇಶ ಅಂಜುಟಗಿ ಅವರ ತೋಟದಲ್ಲಿ ಗುರುವಾರ ಎಳ್ಳ ಅಮವಾಸ್ಯೆ ನಿಮಿತ್ತ ಸಾಮೂಹಿಕ ಭೋಜನ ಸವಿದರು. ಎನ್‌ಪಿಎಸ್ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಹೇಶ ಅಂಜುಟಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕೋಶಾಧ್ಯಕ್ಷ ಹೈದರಸಾಬ್ ಚೌಧರಿ, ಬಸವರಾಜ ಕಲ್ಲೂರ, ಮಲ್ಲೇಶಪ್ಪ ಬಿಂಜಗೇರಿ ಇತರರಿದ್ದರು.

ಎಳ್ಳ ಅಮಾವಾಸ್ಯೆ ನಾಡಿನ ಆಹಾರ ಸಂಸ್ಕೃತಿಯ ಪ್ರತೀಕ. ಋತುಮಾನಗಳು ಬದಲಾಗುತ್ತಿದ್ದಂತೆಯೇ ಆಹಾರ ಸೇವನೆಯ ಪ್ರಕ್ರಿಯೆಯಲ್ಲೂ ಸ್ವಲ್ಪ ಮಟ್ಟಿಗೆ ಬದಲಾವಣೆ ಆಗುತ್ತದೆ. ಜನಪದರು ಆಹಾರ ಸೇವನೆಯ ವಿಧಾನವನ್ನು ಹಬ್ಬದ ರೀತಿಯಲ್ಲಿ ಆಚರಿಸಿಕೊಂಡು ಬಂದಿದ್ದಾರೆ. ಗದ್ದೆಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಪೌಷ್ಟಿಕಾಂಶಗಳು ದೊರೆಯಲಿ ಎನ್ನುವುದು ಮೂಲ ಉದ್ದೇಶವಾಗಿದೆ. ಸಜ್ಜೆ ಕಡಬು, ಶೇಂಗಾ ಹೋಳಿಗೆ, ವಿವಿಧ ಬಗೆಯ ಭಕ್ಷ್ಯಗಳು ಮಾಡಿಕೊಂಡು ಕುಟುಂಬದ ಸದಸ್ಯರೆಲ್ಲ ಹೊಲಗಳಿಗೆ ಹೋಗಿ ಸಾಮೂಹಿಕ ಭೋಜನ ಮಾಡುವ ಪದ್ಧತಿ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕೋಶಾಧ್ಯಕ್ಷ ಹೈದರಸಾಬ್ ಚೌಧರಿ, ಬಸವರಾಜ ಕಲ್ಲೂರ, ಮಲ್ಲೇಶಪ್ಪ ಬಿಂಜಗೇರಿ, ಶಿವಕುಮಾರ ಬಿರಾದಾರ, ಶಿವಸಿದ್ದಪ್ರಸಾದ ಕತನಳ್ಳಿ, ಕುಶಾಲ ಅಂಜುಟಗಿ, ಸಂಗಮೇಶ ಅಂಜುಟಗಿ, ಜಗದೀಶ ಭಜಂತ್ರಿ, ಧರೇಶ ಅಂಜುಟಗಿ ಇತರರಿದ್ದರು.

ತಾಲೂಕಿನ ಕರಗಿ, ಮಣ್ಣೂರು, ಮಾಶಾಳ, ಗೊಬ್ಬರ(ಬಿ), ಉಡಚಣ, ದೇವಲ ಗಣಗಪುರ, ಸ್ಟೇಷನ್ ಗಾಣಗಾಪುರ, ಆತನೂರು, ಬಳ್ಳೂರಗಿ, ಬಡದಾಳ, ರೇವೂರು ವಿವಿಧ ಗ್ರಾಮಗಳಲ್ಲಿ ರೈತರು ಸಂಭ್ರಮದಿಂದ ಎಳ್ಳು ಅಮವಾಸ್ಯೆ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT