ಜೇವರ್ಗಿ: ಯಡ್ರಾಮಿ ಹಾಗೂ ಜೇವರ್ಗಿ ಅವಳಿ ತಾಲ್ಲೂಕಿನ ನಡುವೆ ಅಗ್ನಿಶಾಮಕ ಠಾಣೆಯಲ್ಲಿ ಏಕೈಕ ಜಲ ವಾಹನ ಇರುವುದರಿಂದ ಅವಘಡ ಸಂಭವಿಸಿದಾಗ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.

ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಕಡೆ ಅಗ್ನಿ ಅವಘಡಗಳು ಸಂಭವಿಸಿದರೆ ಅದನ್ನು ನಿಭಾಯಿಸಲು ಇಲ್ಲಿನ ಅಗ್ನಿಶಾಮಕ ದಳದ ಸಿಬ್ಬಂದಿ ಪರದಾಡುವಂತಾಗಿದೆ. ನೀರು ಹಾಗೂ ವಾಹನಗಳ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದೆ.

ಇಲ್ಲಿನ ಅಗ್ನಿ ಶಾಮಕ ಠಾಣೆಯಲ್ಲಿ ಒಂದೇ ವಾಹನದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯ ಎದುರಾಗಿದೆ. ಜೇವರ್ಗಿ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿ ಶಮನಕ್ಕೆ ಬಳಸುವ 4.5 ಸಾವಿರ ಲೀಟರ್ ಸಾಮರ್ಥ್ಯದ ಒಂದು ಜಲ ಲಾರಿ, ಒಬಿಎಂ ಬೋಟ್ ಇದೆ. ಇಲ್ಲಿ ಒಟ್ಟು 27 ಸಿಬ್ಬಂದಿ ಪೈಕಿ 20 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವೊಮ್ಮೆ ನೀರು ಕೊರತೆಯಾದ ವೇಳೆ ಸಿಬ್ಬಂದಿ ಹಳ್ಳ-ಕೊಳ್ಳಗಳಿಗೆ ಹೋಗಿ ನೀರು ತುಂಬಿಸಿಕೊಂಡು ಬೆಂಕಿ ನಂದಿಸಿದ ಪ್ರಸಂಗವು ನಡೆಯುತ್ತಿದೆ. ಭೀಮಾ ಪ್ರವಾಹ ಸಂದರ್ಭದಲ್ಲಿ ಬೋಟ್ ಸಾಗಿಸಲು ಪ್ರತ್ಯೇಕ ವಾಹನ ವ್ಯವಸ್ಥೆ ಇಲ್ಲದ ಕಾರಣ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.

ಕುಳಗೇರಿ, ಅಲ್ಲಾಪುರ, ಮಾಗಣಗೇರ, ಇಟಗಾ, ಅಂಕಲಗಾ, ಜೇರಟಗಿ, ಬೀಳವಾರ, ವಡಗೇರಾ, ಯಡ್ರಾಮಿ, ಕಡಕೋಳ ಸೇರಿ ಸುಮಾರು 60-70 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಬೇಕಾದ ಜೇವರ್ಗಿ ಠಾಣೆ, ಈಗ ಕೇವಲ ಒಂದೇ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಪ್ರತಿದಿನ 2-3 ಕರೆಗಳನ್ನು ಸ್ವೀಕರಿಸುವ ಸಿಬ್ಬಂದಿ ಒಂದು ವಾಹನವನ್ನು ಹಿಡಿದುಕೊಂಡು ಎಲ್ಲಿಗೆ ಹೋಗಬೇಕೆಂಬ ಗೊಂದಲ ಹಾಗೂ ಸಂಕಷ್ಟದಲ್ಲಿದ್ದಾರೆ.

ಜನವರಿ ತಿಂಗಳಿನಿಂದ ಈವರೆಗೆ ಬೆಂಕಿ ಅವಘಡಕ್ಕೆ ಸಂಬಂಧಿಸಿ ಠಾಣೆಗೆ 50ಕ್ಕೂ ಹೆಚ್ಚು ಕರೆಗಳು ಬಂದಿವೆ. ಬೇಸಿಗೆ-ಮಳೆಗಾಲದಲ್ಲಿ ಬರುವ ಬಹುತೇಕ ಕರೆಗಳು ಅಂಗಡಿ ಮುಂಗಟ್ಟು, ಗದ್ದೆ, ಗುಡಿಸಲುಗಳಿಗೆ ಬೆಂಕಿ ಬಿದ್ದಿರುವ ಬಗ್ಗೆ ಇರುತ್ತವೆ. ಅಲ್ಲದೆ, ದೂರದ ಊರುಗಳ ಸಾರ್ವಜನಿಕರಿಂದ ಬರುವ ಕೆಲವೊಂದು ಹುಸಿ ಕರೆಗಳು ಕೂಡ ಕಿರಿಕಿರಿ ಉಂಟು ಮಾಡುತ್ತವೆ ಎನ್ನುತ್ತಾರೆ ಠಾಣೆಯ ಸಿಬ್ಬಂದಿ.

ಅಗ್ನಿ ಶಮನಕ್ಕೆ ನೀರೇ ಸಿಗಲ್ಲ: ಬೇಸಿಗೆ ಸೇರಿದಂತೆ ಎಲ್ಲಾ ಕಾಲದಲ್ಲಿಯೂ ಠಾಣೆಯವರು ಜಲ ಸಂಕಷ್ಟ ಎದುರಿಸುತ್ತಿರುತ್ತಾರೆ. ನೀರಿಗೆ ಬರ ಬಂದಿರುವುದರಿಂದ ಠಾಣೆಯವರು ತಮ್ಮ ಜಲ ವಾಹನಗಳಿಗೆ ನೀರು ತುಂಬಿಸಲು ಪ್ರತಿ ಬಾರಿಯೂ ದೂರ ತೆರಳಬೇಕಾಗಿದೆ.

ಠಾಣೆಯ ಆವರಣದಲ್ಲಿ ಕೊಳವೆ ಬಾವಿ ಇರದ ಕಾರಣ ಪುರಸಭೆಯ ನಲ್ಲಿ ನೀರನ್ನೇ ಅವಲಂಬಿಸಿದ್ದಾರೆ. 3-4 ದಿನಗಳಿಗೊಮ್ಮೆ ಪುರಸಭೆ ಸಿಬ್ಬಂದಿ ನೀರು ಬಿಡುತ್ತಿರುವುದರಿಂದ ಸಂಗ್ರಹವಾಗುವ ಅಲ್ಪ ಪ್ರಮಾಣದ ನೀರು ಇಲ್ಲಿನ ಸಾವಿರಾರು ಲೀಟರ್ ಸಾಮರ್ಥ್ಯದ ವಾಹನಕ್ಕೆ ಸಾಕಾಗುತ್ತಿಲ್ಲ. ಇದರ ಪರಿಣಾಮ ಪ್ರತಿ ಬಾರಿಯೂ ಠಾಣೆಯ ಈ ವಾಹನ ದೂರದ ಹಳ್ಳ-ಕೊಳ್ಳಗಳಿಂದ ತುಂಬಿಸಿಕೊಂಡು ಬರಬೇಕಾಗಿದೆ. ಕೆಲವು ಸಂದರ್ಭ ಘಟನಾ ಸ್ಥಳದಲ್ಲಿ ನೀರಿನ ಮೂಲಗಳಿದ್ದರೆ ಅಲ್ಲಿಂದಲೇ ತುಂಬಿಸಲಾಗುತ್ತದೆ. ಈಗ ಎಲ್ಲ ಕಡೆ ನೀರಿಗೆ ಸಮಸ್ಯೆ ಇರುವುದರಿಂದ ನಮಗೆ ನೀರು ಸಿಗುವುದು ಕಷ್ಟ’ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

Highlights - ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಕೊಳವೆ ಬಾವಿ ಇಲ್ಲ ಜಲ ವಾಹನ ಭರ್ತಿಗೆ ಪುರಸಭೆಯ ನಲ್ಲಿ ನೀರೇ ಗತಿ ಜನವರಿ ತಿಂಗಳಿನಿಂದ ಈವರೆಗೆ 50ಕ್ಕೂ ಹೆಚ್ಚು ಕರೆ

Quote - ವಾಹನ ಕೊರತೆ ಇರುವ ಕುರಿತು ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ. ವಾಹನ ನೀಡಿದರೆ ಅನುಕೂಲ ಆಗುತ್ತದೆ. ನೀರಿನ ಸಮಸ್ಯೆ ನಿವಾರಣೆಗೆ ಠಾಣೆಯ ಆವರಣದಲ್ಲಿ ಕೊಳವೆಬಾವಿ ಕೊರೆಸಬೇಕು ತಿರುಮಲರೆಡ್ಡಿ ಠಾಣಾಧಿಕಾರಿ

Quote - ಪಟ್ಟಣದಲ್ಲಿ ಶನಿವಾರ ನಡೆದ ಬೆಂಕಿ ಅವಘಡ ಎರಡು ವಾಹನಗಳಿದ್ದರೆ ನಿಯಂತ್ರಣಕ್ಕೆ ಬರುತ್ತಿತ್ತು. ಒಂದೇ ವಾಹನ ಇದ್ದ ಕಾರಣ ಬೇಕರಿ ಹಾಗೂ ಮೆಡಿಕಲ್ ಸಂಪೂರ್ಣ ಸುಟ್ಟು ಲಕ್ಷಾಂತರ ರೂ. ಹಾನಿಯಾಗಿದೆ. ಕೂಡಲೇ ಸಂಬಂಧಪಟ್ಟವರು ಇನ್ನೊಂದು ವಾಹನ ವ್ಯವಸ್ಥೆ ಮಾಡಬೇಕು ಮಲ್ಲಿಕಾರ್ಜುನ ಬಿರಾದಾರ ಸ್ಥಳೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.