ಆಳಂದ: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಿಡಗಾ ಮಠವು ಮುಂದಿನ ದಿನಗಳಲ್ಲಿ 10 ಸಾವಿರ ಬಡ ಹಾಗೂ ನಿರ್ಗತಿಕ ಮಕ್ಕಳಿಗಾಗಿ ಉತ್ತಮ ಗುಣಮಟ್ಟದೊಂದಿಗೆ ಉಚಿತ ವಸತಿ ಶಿಕ್ಷಣ ವ್ಯವಸ್ಥೆ ಕಲ್ಪಿಸುವುದು’ ಎಂದು ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಶನಿವಾರ ಶಿವಯೋಗಿ ಜ್ಞಾನಮಂದಿರ ಶಾಲೆಯ 2025–26ನೇ ಶೈಕ್ಷಣಿಕ ಸಾಲಿನ ಉಚಿತ ಪ್ರವೇಶಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ತುಮಕೂರು ಸಿದ್ಧಗಂಗೆ, ಕೊಪ್ಪಳದ ಗವಿಸಿದ್ಧೇಶ್ವರ ಮಠದಂತೆ ನಮ್ಮ ಭಾಗದಲ್ಲಿ ಉಚಿತ ಅನ್ನ, ವಸ್ತ್ರ, ವಸತಿ ಸಹಿತ ಸ್ಪರ್ಧಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣದ ಅವಕಾಶಗಳನ್ನು ಜಿಡಗಾ ಮಠವು ಒದಗಿಸಲಿದೆ. ಕಳೆದ ವರ್ಷ 200 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿ ಮತ್ತೆ 300 ವಿದ್ಯಾರ್ಥಿಗಳು ಹೊಸದಾಗಿ ಪ್ರವೇಶ ಪಡೆದುಕೊಳ್ಳಲಿದ್ದಾರೆ. ಸಾವಿರ ಮಕ್ಕಳ ವಸತಿ ಶಿಕ್ಷಣಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಮಠವು ಅಭಿವೃದ್ಧಿ ಪಡಿಸಲಿದೆ’ ಎಂದರು.

ಆಡಳಿತಾಧಿಕಾರಿ ರುದ್ರಯ್ಯ ಮಠ ಮಾತನಾಡಿ, ‘5ನೇ ತರಗತಿಯಿಂದ 9ನೇ ತರಗತಿವರೆಗೆ ವಿದ್ಯಾರ್ಥಿಗಳ ಉಚಿತ ಪ್ರವೇಶ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ವಿವಿಧ ಜಿಲ್ಲೆಗಳಿಂದ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 300 ವಿದ್ಯಾರ್ಥಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು’ ಎಂದರು.

ಸಿದ್ಧಶ್ರೀ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಬಸಯ್ಯ ಹಿರೇಮಠ, ಮುಖ್ಯಶಿಕ್ಷಕ ವಿಶ್ವನಾಥ ಬಡಿಗೇರ, ಬಸವರಾಜ ಜೋಪಟೆ, ಅಮೃತಾ ಕೊರಳ್ಳಿ, ಅಸ್ಪಾಕ್ ಅವಟೆ, ಯಲ್ಲಾಲಿಂಗ ಸಲಗರ, ಸಿದ್ದರಾಮ ಯಾದವಾಡ, ಗುರು ಪಾಟೀಲ ಉಪಸ್ಥಿತರಿದ್ದರು. ಸೋಮು ಹೊರಟ್ಟಿ ನಿರೂಪಿಸಿದರು. ಜ್ಞಾನಮಂದಿರದ ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ ಗಾಯನ ಜರುಗಿತು. ಕಲಬುರಗಿ, ಯಾದಗಿರಿ, ಬೀದರ್, ವಿಜಯಪುರ, ರಾಯಚೂರು, ಬೆಳಗಾಂವ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪಾಲಕರು ತಮ್ಮ ಮಕ್ಕಳನ್ನು ಪ್ರವೇಶ ಪರೀಕ್ಷೆಗೆ ಕರೆದುಕೊಂಡು ಬಂದಿದ್ದರು. ಕಲಬುರಗಿ, ಜಿಡಗಾ, ಕರ್ಜಗಿ ಸಿದ್ದಶ್ರೀ ಶಾಲೆ ಹಾಗೂ ಶಿವಯೋಗಿ ಜ್ಞಾನ ಮಂದಿರದ ಶಿಕ್ಷಕರಿಂದ ಪರೀಕ್ಷೆ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.