ಮಂಗಳವಾರ, ಜೂನ್ 22, 2021
23 °C

ಕಲಬುರ್ಗಿ: ಕೋವಿಡ್‌ನಿಂದ ವಕೀಲರ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ಗುಲಬರ್ಗಾ ‌ವಕೀಲರ ಸಂಘದ‌ ಮಾಜಿ ಅಧ್ಯಕ್ಷ ‌ಎ.ವಿಜಯಕುಮಾರ್ (58) ಕೋವಿಡ್‌ನಿಂದಾಗಿ‌ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ‌ಬೆಳಿಗ್ಗೆ ನಿಧನರಾದರು.

ಅವರ ಪತ್ನಿಯೂ ಕೋವಿಡ್‌ಗಾಗಿ ಜಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯ, ಬೀದರ್ ವೈದ್ಯಕೀಯ ವಿಜ್ಞಾನ ‌ಸಂಸ್ಥೆ, ರಿಮ್ಸ್ ಸೇರಿದಂತೆ ‌ಹಲವು ಸಂಸ್ಥೆಗಳಿಗೆ ‌ಕಾನೂನು ಸಲಹೆಗಾರರಾಗಿದ್ದರು.

ಹೈಕೋರ್ಟ್‌ನ ಕಲಬುರ್ಗಿ ಪೀಠದ ವಕೀಲ ಸಮುದಾಯದಲ್ಲಿ ‌ಸರಳ, ಸಜ್ಜನಿಕೆಗೆ ಹೆಸರಾಗಿದ್ದರು.

ವಿಜಯಕುಮಾರ್ ಪೂರ್ವಜರು ತಮಿಳುನಾಡು ‌ಮೂಲದವರು. ಕಲಬುರ್ಗಿಗೆ ಉದ್ಯೋಗಕ್ಕಾಗಿ ಬಂದು ಇಲ್ಲಿಯೇ ನೆಲೆ ನಿಂತರು.

ವಿಜಯಕುಮಾರ್ ಅವರಿಗೆ ಪತ್ನಿ, ‌ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿಜಯಕುಮಾರ್ ಅವರನ್ನು ಆಮ್ಲಜನಕ ಕೊರತೆಯ ಕಾರಣಕ್ಕೆ ಜಿಮ್ಸ್‌ಗೆ ಸ್ಥಳಾಂತರಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು