ಚಿಂಚೋಳಿ: ತಾಲ್ಲೂಕಿನ ಹಂದರಕಿ ಮುರ್ಕಿ ರಾಜ್ಯ ಹೆದ್ದಾರಿ 122ರಲ್ಲಿ ಬರುವ ಕುಂಚಾವರಂ ಕ್ರಾಸ್ನಿಂದ ಬುರುಗಪಳ್ಳಿ ಗಡಿವರೆಗೆ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ಹೆದ್ದಾರಿ ಅವಲಂಬಿಸಿದ ಗ್ರಾಮಗಳ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ನಿಡಗುಂದಾದಿಂದ ಚತ್ರಸಾಲ ಗಡಿವರೆಗೆ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಆದರೆ ಬುರುಗಪಳ್ಳಿ ಗಡಿಯಿಂದ ತಾಲ್ಲೂಕು ಕೇಂದ್ರಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಸಂಚರಿಸುವುದೇ ವಾಹನ ಸವಾರರಿಗೆ ಸವಾಲಾಗಿದೆ. ಕುಂಚಾವರಂ ಕ್ರಾಸ್ನಿಂದ ಭಕ್ತಂಪಳ್ಳಿವರೆಗೆ ಬೃಹತ್ ಹೊಂಡಗಳು ರಸ್ತೆಯಲ್ಲಿ ನಿರ್ಮಾಣವಾಗಿದ್ದು ಬೈಕ್ ಸವಾರರು ಟಂಟಂ ಮತ್ತು ಕಾರುಗಳು ಸಂಚರಿಸಲಾಗದಂತಾಗಿದೆ. ಆದರೆ ಬೃಹತ್ ವಾಹನಗಳು ಇದೇ ಹೆದ್ದಾರಿಯಲ್ಲಿ ಸಾಗುತ್ತಿರುವುದರಿಂದ ಹೆದ್ದಾರಿಲ್ಲಿನ ಹೊಂಡಗಳು ಇನ್ನಷ್ಟು ವಿಸ್ತರಿಸುತ್ತ ಸಾಗುತ್ತಿವೆ.

ಭಕ್ತಂಪಳ್ಳಿ ಗಣಾಪುರ ಗಡಿಯಲ್ಲಿ ಬರುವ ಸಂಗಮೇಶ್ವರ ದೇವಾಲಯದ ಹತ್ತಿರದ ಸೇತುವೆಯ ಎರಡೂ ಬದಿಯಲ್ಲಿ ಹೆದ್ದಾರಿ ಯಾವುದು ಗದ್ದೆಯಾಗುವುದು ಎಂಬುದು ತಿಳಿಯದಂತಾಗಿದೆ. ಅಂಬುಲೆನ್ಸ್ ಕೂಡ ಹೋಗಲು ಬಾರದ ರೀತಿಯಲ್ಲಿ ರಸ್ತೆ ಕೆಟ್ಟು ನಿಂತಿದೆ ಎಂದು ಕರ್ಚಖೇಡ ಗ್ರಾ.ಪಂ. ಮಾಜಿ ಅಧ್ಯಕ್ಷ ಗಣಾಪುರದ ಪೀತಾಂಬರ ನಾವದಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಹೆದ್ದಾರಿಯಲ್ಲಿ ಕಲಬುರಗಿ ಸಿಮೆಂಟ್ , ಚೆಟ್ಟಿನಾಡ ಮತ್ತು ತೆಲಂಗಾಣದ ಕೆಲ ಸಿಮೆಂಟ್ ಕಂಪೆನಿಗಳ ಭಾರಿ ವಾಹನಗಳು ಸಂಚರಿಸುತ್ತವೆ. ಇದರಿಂದ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ಆದರೆ ಜನರು ಮಾತ್ರ ಹೈರಾಣಾಗುತ್ತಿದ್ದಾರೆ. ರಸ್ತೆ ಹಾಳಾಗಿದ್ದರಿಂದ ಇಲ್ಲಿ ಸಂಚರಿಸುವ ವಾಹನಗಳು ಮಗುಚಿ ಬೀಳುತ್ತಿವೆ. ಲೋಕೋಪಯೋಗಿ ಇಲಾಖೆಯವರು ಹೆದ್ದಾರಿ ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಹೆದ್ದಾರಿಗೆ ಹಾಳಾಗಿದ್ದರಿಂದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸಿಮೆಂಟ್ ಕಂಪೆನಿಗಳ ಮೂಲಕ ರಸ್ತೆ ನಿರ್ವಹಣೆಗೆ ಕೋರಲಾಗಿದ್ದು ಮಳೆ ಸುರಿಯುತ್ತಿರುವುದರಿಂದ ತೊಂದರೆಯಾಗಿದೆ. ಶೀಘ್ರವೇ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು’ ಎಂದು ಲೋಕೋಪಯೋಗಿ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅಂಬಾರಾಯ ಪಾಟೀಲ ತಿಳಿಸಿದರು.

ಹಂದರಕಿ- ಮುರ್ಕಿ ಹೆದ್ದಾರಿಯ ದುಸ್ಥಿತಿ ಭಕ್ತಂಪಳ್ಳಿ-ಗಣಾಪುರ ಜನರ ಸಂಕಟ ₹16 ಕೋಟಿ ಮಂಜೂರು

ಹಾಳಾಗಿರುವ ಹೆದ್ದಾರಿ ನಿರ್ಮಾಣಕ್ಕೆ ಎರಡು ಹಂತದಲ್ಲಿ ₹16 ಕೋಟಿ ಮಂಜೂರು ಮಾಡಿಸಲಾಗಿದೆ. ₹8 ಕೋಟಿಯ ಕಾಮಗಾರಿ ಪ್ರಾರಂಭಿಸಲಾಗಿದೆ. ಇನ್ನೂ ₹8 ಕೋಟಿಯ ಕಾಮಗಾರಿಗೆ ಟೆಂಡರ್ ಹಂತದಲ್ಲಿದೆ
ಡಾ. ಶರಣಪ್ರಕಾಶ ಪಾಟೀಲ ಸಚಿವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.