ಕಲಬುರಗಿ: ಅಫಜಲಪುರ ತಾಲ್ಲೂಕಿನ ಕುಲಾಲಿ ಸ್ಟೇಶನ್ ನಿವಾಸಿ ಅಶ್ವಿನಿ ಕೊರಳ್ಳಿ ಎಂಬುವವರಿಗೆ ವಿಚ್ಛೇದನ ನೀಡುವಂತೆ ಪೀಡಿಸಿ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ ಪತಿ ಶರಣಪ್ಪ ಕೊರಳ್ಳಿ ಎಂಬಾತನಿಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಕಲಬುರಗಿಯಲ್ಲಿರುವ ಪತಿ ಶರಣಪ್ಪನ ಮನೆಯಲ್ಲಿ ಹೊಂದಾಣಿಕೆ ಯಾಗದ್ದಕ್ಕೆ ಅಶ್ವಿನಿ ಮರಳಿ ತವರೂರಾದ ಕುಲಾಲಿಗೆ ಬಂದಿದ್ದರು. 2019ರ ಫೆಬ್ರುವರಿ 21ರಂದು ಜೀಪ್‌ನಲ್ಲಿ ಕುಲಾಲಿಗೆ ಬಂದ ಶರಣಪ್ಪ ಕೊರಳ್ಳಿ, ಆತನ ತಂದೆ ಅಂಬಾರಾಯ, ತಮ್ಮ ವಾಸುದೇವ ಹಾಗೂ ಶರಣಪ್ಪನ ತಂಗಿ ಗೌರಮ್ಮ ಸೇರಿಕೊಂಡು ಅಶ್ವಿನಿಯನ್ನು ನಿಂದಿಸಲಾರಂಭಿಸಿದರು. ಈ ಸಂದರ್ಭ ದಲ್ಲಿ ತನಗೆ ವಿಚ್ಛೇದನ ನೀಡಬೇಕು. ಇಲ್ಲವಾದರೆ ಕೊಲೆ ಮಾಡುತ್ತೇನೆ ಎಂದು ಶರಣಪ್ಪ ಬೆದರಿಕೆ ಹಾಕಿದ್ದ. ಇದಕ್ಕೆ ಆತನ ತಂದೆ ಅಂಬಾರಾಯ ಸಾಥ್ ನೀಡಿದ್ದರು. ಜೀಪ್‌ನಲ್ಲಿಟ್ಟಿದ್ದ ವಿಷದ ಬಾಟಲಿಯನ್ನು ಅಶ್ವಿನಿಗೆ ಕುಡಿಸಲು ಮುಂದಾದ. ಈ ಸಂದರ್ಭದಲ್ಲಿ ಅದನ್ನು ಗಮನಿಸಿದ ಸಾರ್ವಜನಿಕರು ಬಿಡಿಸಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿದ್ದ ರೇವೂರ ಪಿಎಸ್‌ಐ ಮಲ್ಲಣ್ಣ ಯಲಗೋಡ ನ್ಯಾಯಾಲಯಕ್ಕೆ ದೋಷಾ ರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ ಕರೋಶಿ, ಮೊದಲ ಅಪರಾಧಿ ಶರಣಪ್ಪನಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ, ಇತರ ಅಪರಾಧಿಗಳಿಗೆ ಮೂರು ತಿಂಗಳು ಜೈಲು ಹಾಗೂ ತಲಾ ₹ 3 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದರು.
ಸರ್ಕಾರದ ಪರವಾಗಿ ಮೂರನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.