ಕಲಬುರ್ಗಿ: ‘ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಕಲಬುರ್ಗಿ ವಿಭಾಗೀಯ ಕಾರ್ಯಾಗಾರ–1ರಲ್ಲಿ ಈಚೆಗೆ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಡದೇ ಅವಮಾನ ಮಾಡಿದ ವಿಭಾಗೀಯ ತಾಂತ್ರಿಕಾ ಶಿಲ್ಪಿ ಹಾಗೂ ಸಿಬ್ಬಂದಿ ಮೇಲ್ವಿಚಾರಕನ್ನು ಅಮಾನತು ಮಾಡಬೇಕು’ ಎಂದು ಕರ್ನಾಟಕ ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ಮುಖಂಡ ದಿನೇಶ ದೊಡ್ಡಮನಿ ಒತ್ತಾಯಿಸಿದರು.

‘ಎನ್‌ಇಕೆಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಆಗಿದ್ದ ಜಹೀರಾ ನಸೀಂ ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದೇವೆ. ತಪ್ಪಿತತ್ಸರ ಮೇಲೆ ಕೂಡಲೇ ಕ್ರಮ ಜರುಗಿಸುವಂತೆ ಕೇಳಿಕೊಂಡಾಗ ಅವರು ಇಲಾಖೆಯ ಅಧಿಕಾರಿಯಾಗಿ ತಪ್ಪಿತತ್ಸರ ವಿರುದ್ಧ ಕ್ರಮಕ್ಕೆ ಮುಂದಾಗದೆ ಸಂಧಾನ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಖಂಡನೀಯ’ ಎಂದರು.

‘ಇಂತಹ ಅಧಿಕಾರಿಗಳು ಇರುವುದರಿಂದ ದೇಶದ ಮಹಾತ್ಮರಿಗೆ ಪದೇಪದೇ ಅವಮಾನ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕರು ಈ ಸಂಬಂಧಪಟ್ಟ ಘಟನೆ ಕುರಿತು ಕ್ರಮ ಕೈಗೊಳ್ಳಬೇಕು. ತಪ್ಪಿತತ್ಸರನ್ನು ಕೂಡಲೇ ಅಮಾನತುಗೊಳಿಸಬೇಕು, ಇಲ್ಲದಿದ್ದರೆ ಬರುವ ದಿನಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಎದರು ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ’ ಎಂದರು.

ಮುಖಂಡರಾದ ದೇವಿಂದ್ರ ಸಿನ್ನೂರ, ಅವಿನಾಶ ಗಾಯಕವಾಡ, ಅಸ್ವಿನ ಸಂಕಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.