ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಜ್ಞಾನಗಂಗೆಯಲ್ಲಿ ‘ಗುಲ್‌ಫೆಸ್ಟ್’ ಯುವಜನೋತ್ಸವ

Last Updated 26 ಜನವರಿ 2023, 5:58 IST
ಅಕ್ಷರ ಗಾತ್ರ

ಕಲಬುರಗಿ: ‘ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯವು(ಜಿಯುಕೆ) ದಕ್ಷಿಣ ಭಾರತದ ಪ್ರತಿಷ್ಠಿತ ಅಂತರ್ ವಿಶ್ವವಿ ದ್ಯಾಲಯ ದಕ್ಷಿಣ–ಪೂರ್ವ ವಲಯ ಯುವಜನೋತ್ಸವವನ್ನು ‘ಗುಲ್‌ಫೆಸ್ಟ್‌’ ಹೆಸರನಲ್ಲಿ ಐದು ದಿನಗಳ ಕಾಲ ಆಯೋಜಿಸಲಿದೆ’ ಎಂದು ವಿ.ವಿ ಕುಲಪತಿ ಪ್ರೊ. ದಯಾನಂದ ಅಗಸರ ತಿಳಿಸಿದರು.

‘ದಕ್ಷಿಣ–ಪೂರ್ವ ವಲಯ ಯುವಜನೋತ್ಸವ ಆತಿಥ್ಯ ಮೊದಲ ಬಾರಿಗೆ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ದೊರೆತಿದೆ. ಗುಲ್‌ಫೆಸ್ಟ್‌ನಲ್ಲಿ ನಡೆಯುವ ಕರ್ನಾಟಕ, ತೆಲಂಗಾಣ ಮತ್ತು ಛತ್ತೀಸಗಡ ರಾಜ್ಯಗಳ ವೈವಿದ್ಯಮಯ ಸಾಂಸ್ಕೃತಿಕ ಮತ್ತು ವಿಭಿನ್ನ ಕಲೆಗಳ ಪ್ರದರ್ಶನವನ್ನು ಜನರು ಕಣ್ತುಂಬಿಕೊಳ್ಳಬಹುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಜ.27ರ ಯುವಜನೋತ್ಸವ ಮೆರವಣಿಗೆಯಲ್ಲಿ ಗಣ್ಯರು, ಸ್ಥಳೀಯ ಕಲಾವಿದರು, ವಿದ್ಯಾರ್ಥಿಗಳು, ಸ್ಪರ್ಧಾರ್ಥಿಗಳು ವೈವಿದ್ಯಮಯ ಉಡುಗೆ ತೊಟ್ಟು, ಜಾನಪದ ಕಲಾ ಭೂಷಣಗಳಲ್ಲಿ ಪಾಲ್ಗೊಳ್ಳುವರು. ಕಾರ್ಯಸೌಧದಿಂದ ಪ್ರವೇಶ ದ್ವಾರದವರೆಗೆ ಮೆರವಣಿಗೆ ಜರುಗಲಿದ್ದು, ಉತ್ತಮ ಕಲೆ ಪ್ರದರ್ಶಿಸಿದ ತಂಡಕ್ಕೆ ಬಹುಮಾನ ನೀಡಲಾಗುವುದು’ ಎಂದು ತಿಳಿಸಿದರು.

‘1,200 ಸ್ಪರ್ಧಾಳುಗಳ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಕ್ಷೇತ್ರಗಳ 20 ಪರಿಣಿತರನ್ನು ತೀರ್ಪುಗಾರರಾಗಿ ನಿಯೋಜಿಸಲಾಗುವುದು. ವಿ.ವಿ.ಯ ವಿದ್ಯಾರ್ಥಿನಿಲಯಗಳು, ಇಎಸ್‌ಐ ವಸತಿ ನಿಲಯ, ಹಿಂಗುಳಾಂಬಿಕ ಕಾಲೇಜಿನ ವಿದ್ಯಾರ್ಥಿನಿಲಯಗಳನ್ನು ಸ್ಪರ್ಧಾ ವಿದ್ಯಾರ್ಥಿಗಳ ವಸತಿಗೆ ಬಳಸಿಕೊಳ್ಳಲಾಗುವುದು. ತಂಡದ ವ್ಯವಸ್ಥಾಪಕರು, ತೀರ್ಪುಗಾರರಿಗೆ ನಗರದ ವಿವಿಧ ಅತಿಥಿಗೃಹಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

‘ತೀರ್ಪುಗಾರರು ಹಾಗೂ ತಂಡದ ವ್ಯವಸ್ಥಾಪಕರ ಪ್ರಯಾಣಕ್ಕೆ ವಾಹನ ಮತ್ತು ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ವಿದ್ಯಾರ್ಥಿಗಳನ್ನು ಕರೆತಂದು, ನಿಲಯಗಳಿಗೆ ಬಿಡಲು ಕೆಕೆಆರ್‌ಟಿಸಿಯಿಂದ ಬಸ್ ಸೇವೆ ಪಡೆಯಲಾಗುವುದು. ಕ್ಯಾಂಟೀನ್‌ನಲ್ಲಿ ವಿದ್ಯಾರ್ಥಿಗಳಿಗೆ ಉಪಾಹಾರ ಹಾಗೂ ಊಟದ ವ್ಯವಸ್ಥೆ ಇರಲಿದೆ’ ಎಂದು ಅವರು ಹೇಳಿದರು.

‘ಪ್ರತಿ ದಿನ ಸಂಜೆ 5ರಿಂದ ಬಯಲು ರಂಗಮಂದಿರದಲ್ಲಿ ನೃತ್ಯ ಕಾರ್ಯಕ್ರಮಗಳು ಜರಗಲಿದ್ದು, ಸಾರ್ವಜನಿಕರು ವೀಕ್ಷಿಸಬಹುದು. ಜನರಿಗೆ ಅಲ್ಲಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗುವುದು’ ಎಂದು ಅವರು ಹೇಳಿದರು.

‘ನೇಮಕಾತಿ ಪ್ರಕ್ರಿಯೆ ವಿಳಂಬ’

‘ಭೌಗೋಳಿಕವಾಗಿ ಬೀದರ್‌ ಜಿಲ್ಲೆ ಗುಲಬರ್ಗಾ ವಿ.ವಿ.ಯಿಂದ ಪ್ರತ್ಯೇಕ ಆಗುತ್ತಿರುವುದರಿಂದ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಸಂಖ್ಯೆ ಹಂಚಿಕೆ ಆಗಬೇಕಿದೆ. ಇದರಿಂದ ವಿ.ವಿ.ಯ ನೇಮಕಾತಿ ಪ್ರಕ್ರಿಯೆ ವಿಳಂಬ ಆಗುತ್ತಿದೆ’ ಎಂದು ಪ್ರೊ.ದಯಾನಂದ ಅಗಸರ ತಿಳಿಸಿದರು.

‘ಕಲಬುರಗಿ ಮತ್ತು ಬೀದರ್‌ನಲ್ಲಿ ತಲಾ 153 ಮತ್ತು 118 ಸೇರಿ ಒಟ್ಟು 271 ಮಹಾವಿದ್ಯಾಲಯಗಳಿವೆ. ಅನುಕ್ರಮವಾಗಿ 39 ಮತ್ತು 19 ಸ್ನಾತಕೋತ್ತರ ಪದವಿ ಕಾಲೇಜುಗಳಿವೆ. ಉಭಯ ಜಿಲ್ಲೆಗಳ ಯು.ಜಿ.ಯಲ್ಲಿ 81,997 ಹಾಗೂ ‍ಪಿ.ಜಿ.ಯಲ್ಲಿ 2,778 ವಿದ್ಯಾರ್ಥಿಗಳು ಇದ್ದಾರೆ. ಪ್ರವೇಶಾತಿ ಬಳಿಕ ಪಿ.ಜಿ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 6 ಸಾವಿರ ಆಗಲಿದೆ. ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ಸಂಖ್ಯೆ ಹಂಚಿಕೆ ಆಗಬೇಕಿದೆ’ ಎಂದು ವಿವರಿಸಿದರು.

ಆಂತರಿಕ ಅಂಕ ವಿಳಂಬ; ಕ್ರಮದ ಎಚ್ಚರಿಕೆ

‘ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಕಳುಹಿಸಲು ವಿಳಂಬ ಮಾಡುತ್ತಿರುವ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪ್ರೊ. ದಯಾನಂದ ಅಗಸರ ಹೇಳಿದರು.

‘ತಾಂತ್ರಿಕ ಕಾರಣಗಳಿಂದ ಮೌಲ್ಯಮಾಪನ ಪ್ರಕ್ರಿಯೆ ವಿಳಂಬ ಆಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ಇದಕ್ಕಾಗಿ ಮೇಲ್ವಿಚಾರಣೆ ತಂಡ ಸಹ ರಚಿಸಲಾಗಿದೆ’ ಎಂದರು.

ಯುವಜನೋತ್ಸವ: ಸ್ಪರ್ಧೆಗಳ ವಿವರ

ದಿನಾಂಕ; ಗಾಂಧಿ ಸಭಾಂಗಣ; ಭಾಸ್ಕರ್ ಸಭಾಂಗಣ; ಅಂಬೇಡ್ಕರ್ ಭವನ; ಒಳಾಂಗಣ ಕ್ರೀಡಾಂಗಣ

ಜ.28; ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ವಾದನ ಸೊಲೊ; ವಾಕಪಟು, ರಸಪ್ರಶ್ನೆ; ಪ್ರಹಸನ, ಮೈಮ್; ಸ್ಪಾಟ್ ಚಿತ್ರಕಲೆ, ಕೊಲಾಜ್, ಪೋಸ್ಟರ್ ರಚನೆ

ಜ.29; ಲಘು ಸಂಗೀತ, ವೃಂದ ಗಾಯನ(ಪಾಶ್ಚಿಮತ್ಯ); ರಸಪ್ರಶ್ನೆ, ಚರ್ಚಾ ಸ್ಪರ್ಧೆ; ಏಕಾಂಕ ನಾಟಕ; ಸ್ಪಾಟ್ ಛಾಯಾಚಿತ್ರ, ವ್ಯಂಗ್ಯಚಿತ್ರ, ಕ್ಲೆ ಮಾಡೆಲಿಂಗ್. ಜ.30; ಸ್ವರ ಗಾಯನ, ಶಾಸ್ತ್ರೀಯ ಗಾಯನ(ಏಕವ್ಯಕ್ತಿ), ಸಮೂಹ ಗಾಯನ;––; ಏಕಾಂಕ ನಾಟಕ, ಮಿಮಿಕ್ರಿ; ಮೆಹಂದಿ, ಪ್ರತಿಷ್ಠಾಪನಾ ಕಲೆ, ರಂಗೋಲಿ

ಯುವಜನೋತ್ಸವ: ಸ್ಪರ್ಧೆಗಳ ವಿವರ

ದಿನಾಂಕ; ಗಾಂಧಿ ಸಭಾಂಗಣ; ಭಾಸ್ಕರ್ ಸಭಾಂಗಣ; ಅಂಬೇಡ್ಕರ್ ಭವನ; ಒಳಾಂಗಣ ಕ್ರೀಡಾಂಗಣ

ಜ.28; ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ವಾದನ ಸೊಲೊ; ವಾಕಪಟು, ರಸಪ್ರಶ್ನೆ; ಪ್ರಹಸನ, ಮೈಮ್; ಸ್ಪಾಟ್ ಚಿತ್ರಕಲೆ, ಕೊಲಾಜ್, ಪೋಸ್ಟರ್ ರಚನೆ

ಜ.29; ಲಘು ಸಂಗೀತ, ವೃಂದ ಗಾಯನ(ಪಾಶ್ಚಿಮತ್ಯ); ರಸಪ್ರಶ್ನೆ, ಚರ್ಚಾ ಸ್ಪರ್ಧೆ; ಏಕಾಂಕ ನಾಟಕ; ಸ್ಪಾಟ್ ಛಾಯಾಚಿತ್ರ, ವ್ಯಂಗ್ಯಚಿತ್ರ, ಕ್ಲೆ ಮಾಡೆಲಿಂಗ್

ಜ.30; ಸ್ವರ ಗಾಯನ, ಶಾಸ್ತ್ರೀಯ ಗಾಯನ(ಏಕವ್ಯಕ್ತಿ), ಸಮೂಹ ಗಾಯನ;––; ಏಕಾಂಕ ನಾಟಕ, ಮಿಮಿಕ್ರಿ; ಮೆಹಂದಿ, ಪ್ರತಿಷ್ಠಾಪನಾ ಕಲೆ, ರಂಗೋಲಿ

*
ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಬೀದರ್ ಜಿಲ್ಲೆಯ ಸನ್‌ ಶೈನ್ ಹಾಗೂ ರಾಯಲ್‌ ಪದವಿ ಕಾಲೇಜುಗಳ ಪರೀಕ್ಷಾ ಕೇಂದ್ರಗಳ ಮಾನ್ಯತೆಯನ್ನು ಮೂರು ವರ್ಷಗಳವರೆಗೆ ನಿಷೇಧಿಸಲಾಗಿದೆ
-ಪ್ರೊ.ದಯಾನಂದ ಅಗಸರ, ಗುಲಬರ್ಗಾ ವಿ.ವಿ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT