ಗುರುವಾರ , ಜುಲೈ 29, 2021
25 °C
ಜಿಲ್ಲಾಡಳಿತ, ರೆಡ್‌ಕ್ರಾಸ್‌, ವಿವಿಧ ವಿ.ವಿ, ಶಿಕ್ಷಣ ಸಂಸ್ಥೆಗಳಲ್ಲೂ ಕಾರ್ಯಕ್ರಮ

ಕಲಬುರ್ಗಿ: ವಿವಿಧೆಡೆ ಯೋಗ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹಿಂಗುಲಾಂಬಿಕಾ ಆಯುರ್ವೇದ ಮಹಾವಿದ್ಯಾಲಯ ವತಿಯಿಂದ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸೋಮವಾರ 7ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆನ್‌ಲೈನ್‌ನಲ್ಲಿ ತರಬೇತಿ ನೀಡುವ ಮೂಲಕ ಆಚರಿಸಲಾಯಿತು.

ಯೋಗಪಟು ಸುದೀಪ ಬಿ. ಮಾಳಗಿ ಹಾಗೂ ಹಿಂಗುಲಾಂಬಿಕಾ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರವೀಣಕುಮಾರ ಚೌಧರಿ ಅವರು ವಿಶೇಷ ತರಬೇತಿ ನೀಡಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರಿಜಾ ಎಸ್.ಯು., ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯ್ಕ ಇದ್ದರು.

ಝೂಮ್ ಆ್ಯ‍ಪ್‌ ಮೂಲಕ ಕಾರ್ಯಕ್ರಮದ ನೇರ ಪ್ರಸಾರ ಮತ್ತು ಆನ್‌ಲೈನ್ ಮೂಲಕ ಯುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು. ಜಿಲ್ಲೆಯ ಸುಮಾರು 200ಕ್ಕೂ ಅಧಿಕ ಯುವಜನರು, ಅಧಿಕಾರಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.

ಹಿಂಗುಲಾಂಬಿಕಾ ಆಯುರ್ವೇದ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಸ್ಮಿತಾ ಬಿ. ಕಣ್ಮಸೆ ಅವರು ಯೋಗದ ವಿವಿಧ ಭಂಗಿಗಳ ಬಗ್ಗೆ ತಿಳಿಸಿದರು.‌

ಕೋವಿಡ್ ಪುನಶ್ಚೇತನ ಅಭಿಯಾನ ಕೇಂದ್ರ: ಜಿಲ್ಲಾ ಆಡಳಿತ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿರುವ ಕೋವಿಡ್ ಪುನಶ್ಚೇತನ ಅಭಿಯಾನ ಕೇಂದ್ರದಲ್ಲಿ, ವಿಶ್ವ ಯೋಗ ದಿನವನ್ನು ಸರ್ಕಾರಿ ನೌಕರರಿಗೆ ಯೋಗ ತರಬೇತಿ ನೀಡುವ ಮೂಲಕ ಆಚರಿಸಲಾಯಿತು.

ಕಳೆದ ಒಂದು ತಿಂಗಳಿನಿಂದ ಕೋವಿಡ್‌ನಿಂದ ಬಳಲಿ ಗುಣಮುಖರಾದವರಿಗೆ ಆತ್ಮ ಸ್ಥೈರ್ಯ ಹಾಗೂ ಆರೋಗ್ಯ ಚೈತನ್ಯರಾಗಿರುವಂತೆ ಪ್ರೇರಣೆ ನೀಡಲು ಕೋವಿಡ್ ಪುನಶ್ಚೇತನ ತರಬೇತಿ
ಯನ್ನು ಜಿಲ್ಲಾ ಆಡಳಿತವು ಆಯೋಜಿಸಿದೆ.

ಯೋಗ ತರಬೇತಿನೀಡಿದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗ ತರಬೇತುದಾರ ಗೀತಾ ಕಿಣಗಿ, ಕಿಶೋರ್, ಸುದೇಶ್ ಫಿಸ್ತೆ, ಕೇದಾರ್ ಕಿಣಗಿ, ಬಸವರಾಜ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ.ರೇಣುಕಾ ಬಾಗಲೆ, ಸುಜಾತಾ ಹಾಗೂ ಡಾ.ಸಂಗೀತ ಸಾವಳಗಿ ಹಾಗೂ ದೈಹಿಕ ಶಿಕ್ಷಣಾಧಿಕಾರಿ ರವಿಕುಮಾರ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಮೇಶ ಜಿ. ಸಂಗಾ ಅವರ ಅಧ್ಯಕ್ಷತೆ ವಹಿಸಿದ್ದರು. ಸಿಬ್ಬಂದಿಯವರಾದ ಮಿರ್ಜಾ ಬೇಗ್, ಮಹಾದೇವಿ ಹಿರೇಮಠ, ಪ್ರಾಂಶುಪಾಲ ಶಿವರಾಮ್ ಚವಾಣ, ಅಣವೀರ ಹರಸೂರ, ಶರಣಪ್ಪ ಕವಡೆ, ಕುಮಾರಸ್ವಾಮಿ, ಆನಂದ ಕೊಡೇಕಲ್, ರೇವಣ್ಣಸಿದ್ದ, ಶ್ರೀನಿವಾಸ ಮಿಸ್ಕಿನ್ ಹಾಗೂ ಇಲಾಖೆಯ ಇತರೆ ನಿಲಯಪಾಲಕರು ಇದ್ದರು.

ಗು.ವಿ.ವಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಚಣ ವಿಭಾಗದ ಒಳಾಂಗಣದಲ್ಲಿ ಕುಲಪತಿ ದಯಾನಂದ ಅಗಸರ ಅವರ ನೇತೃತ್ವದಲ್ಲಿ ಯೋಗ ದಿನ ಆಚರಿಸಲಾಯಿತು. ವಿ.ವಿ ಕುಲಸಚಿವ ಶರಣಬಸಪ್ಪ ಕೋಟ್ಯಪ್ಪಗೋಳ, ಮೌಲ್ಯಮಾಪನ ಕುಲಸಚಿವ ಪ್ರೊ.ಸೋನಾರ್ ನಂದಪ್ಪ, ವಿತ್ತಾಧಿಕಾರಿ ಪ್ರೊ.ಬಿ.ವಿಜಯ, ಯೋಗ ಸಂಚಾಲಕರಾದ ಚಂದ್ರಕಾಂತ್ ಬಿರಾದಾರ, ವಿದ್ಯಾವಿಷಯಕ ಪರಿಷತ್‌ ಸದಸ್ಯರಾದ ರಾಜು ಕಗ್ಗನಮಡಿ, ಡಾ.ಎಂ.ಎಸ್. ಪಾಸೋಡಿ, ಡಾ.ಎನ್.ಜಿ.ಕಣ್ಣೂರ್, ಡಾ.ಹಣಮಂತ ಜಂಗೆ, ದೇವೇಂದ್ರಪ್ಪ ತೇಲ್ಕರ, ಅ ಜಯಪ್ರಕಾಶ್ ಕರಜಗಿ ಹಾಗೂ ಸಿಬ್ಬಂದಿ ಹಾಜರಿದ್ದರು.

ರೆಡ್‌ಕ್ರಾಸ್‌ ಸಂಸ್ಥೆ‌

ಭಾರತೀಯ ರೆಡ್‍ಕ್ರಾಸ್ ಜಿಲ್ಲಾ ಶಾಖೆ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಆವರಣದಲ್ಲಿ ಸೋಮವಾರ 7ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯ ನಿರ್ದೇಶಕ ಡಾ.ಬಸವರಾಜ ಗಾದರೆ ಮಾತನಾಡಿ, ಯೋಗ ನಮ್ಮ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಿದೆ. ಎಲ್ಲರೂ ನಿಯಮಿತವಾಗಿ ಮತ್ತು ಕ್ರಮಬದ್ದವಾಗಿ ಯೋಗ ಮಾಡಬೇಕು ಎಂದರು. ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ಉಪಸಭಾಪತಿ ಅರುಣಕುಮಾರ ಲೋಹಿಯಾ ಉದ್ಘಾಟಿಸಿದರು. ಭಾರತ ಸ್ವಾಭಿಮಾನ ಸಮಿತಿಯ ಜಿಲ್ಲಾ ಪ್ರಭಾರಿ ಶಿವಾನಂದ ಸಾಲಿಮಠ ಅವರು ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಯೋಗಾಸನ ಕುರಿತು ತರಬೇತಿ ನೀಡಿದರು. 500 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದರು.

ಭಾಗ್ಯಲಕ್ಷ್ಮಿ ಎಂ.ಜಿ.ಎಸ್., ಪದ್ಮಾಜಿ, ಶಿವರಾಜ, ಡಾ.ಶಂಭುಲಿಂಗಪ್ಪ, ಶರಣಗೌಡ ಬಿರಾದಾರ, ಡಾ.ಶಿವರಾಮನಗೌಡ, ಗೀತಾ ಪರಿವಾರ ಸದಸ್ಯರು ಮತ್ತಿತರರು ಇದ್ದರು.

ಆನ್‌ಲೈನ್‌ನಲ್ಲಿ ಯೋಗ ಮಾರ್ಗದರ್ಶನ

‌ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದಲ್ಲಿ ನಡೆದ ಆನ್‌ಲೈನ್‌ ಯೋಗ ದಿನಾಚರಣೆಯಲ್ಲಿ ಹಲವು ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಭಾಗವಹಿಸಿದ್ದರು. ಆನ್‍ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖರಾದ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ನಿಷ್ಠಿ, ಸಮ ಉಪಕುಲಪತಿ ಪ್ರೊ.ವಿ.ಡಿ. ಮೈತ್ರಿ, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಕುಲಸಚಿವ (ಮೌಲ್ಯಮಾಪನ) ಡಾ.ಲಿಂಗರಾಜ ಶಾಸ್ತ್ರೀ, ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ, ಮತ್ತು ಡಾ.ಬಸವರಾಜ ಮಠಪತಿ ಭಾಗವಹಿಸಿದ್ದರು.

ತಜ್ಞರು 45 ನಿಮಿಷಗಳಿಗಿಂತ ಹೆಚ್ಚು ಕಾಲ ವಿಭಿನ್ನ ಯೋಗಾಸನಗಳನ್ನು ಹೇಳಿಕೊಟ್ಟರು.

ಆನ್‌ಲೈನ್‌ನಲ್ಲಿ ಯೋಗ ಮಾರ್ಗದರ್ಶನ

‌ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದಲ್ಲಿ ನಡೆದ ಆನ್‌ಲೈನ್‌ ಯೋಗ ದಿನಾಚರಣೆಯಲ್ಲಿ ಹಲವು ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಭಾಗವಹಿಸಿದ್ದರು.

ಆನ್‍ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖರಾದ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ನಿಷ್ಠಿ, ಸಮ ಉಪಕುಲಪತಿ ಪ್ರೊ.ವಿ.ಡಿ. ಮೈತ್ರಿ, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಕುಲಸಚಿವ (ಮೌಲ್ಯಮಾಪನ) ಡಾ.ಲಿಂಗರಾಜ ಶಾಸ್ತ್ರೀ, ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ, ಮತ್ತು ಡಾ.ಬಸವರಾಜ ಮಠಪತಿ ಸೇರಿದಂತೆ ಇತರರು ಭಾಗವಹಿಸಿದ್ದರು.

ತಜ್ಞರು 45 ನಿಮಿಷಗಳಿಗಿಂತ ಹೆಚ್ಚು ಕಾಲ ವಿಭಿನ್ನ ಯೋಗಾಸನಗಳನ್ನು ಹೇಳಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು