ಬುಧವಾರ, ಜನವರಿ 22, 2020
23 °C

ಜೇವರ್ಗಿ: ಇರುಮುಡಿ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ಪಟ್ಟಣದ ನರಿಬೋಳ ರಸ್ತೆಯಲ್ಲಿರುವ ಬಸವೇಶ್ವರ ಸ್ಟೋನ್ ಕ್ರಷರ್‌ನಲ್ಲಿ ಶಬರಿಮಲೈಗೆ ತೆರಳುತ್ತಿರುವ ನೂರಾರು ಭಕ್ತರು ಶುಕ್ರವಾರ ಇರುಮುಡಿ ಪೂಜೆ ಸಲ್ಲಿಸಿದರು.

ಗುರುಸ್ವಾಮಿ ಕೃಷ್ಣಾ ಅವರು ಇರುಮುಡಿ ಪೂಜೆ ನೆರವೇರಿಸಿದರು. ತಾಲ್ಲೂಕಿನಿಂದ ಪ್ರತಿ ವರ್ಷ ಅನೇಕ ಭಕ್ತರು ಹರಕೆ ಹೊತ್ತು ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುತ್ತಾರೆ.

ಇರುಮುಡಿ ಪೂಜೆ ನಿಮಿತ್ತ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ಜಗದೀಶ ಪಾಟೀಲ ನರಿಬೋಳ, ವಿರೇಶ ಪಾಟೀಲ ನರಿಬೋಳ, ಈರಣ್ಣ ಹರವಾಳ, ನಿಂಗಣ್ಣಗೌಡ ಸಾತಖೇಡ, ಭೀಮು ಆಂದೋಲಾ, ಮಲ್ಲು ಕೋಳಕೂರ, ಶಾಂತಗೌಡ ಗಂವ್ಹಾರ, ಅಪ್ಪಣ್ಣ ಲಗಳಿ ಯಡ್ರಾಮಿ, ರಮೇಶ ಬಿಲ್ಲಾಡ, ಸಿದ್ದು ಮಾವನೂರ, ಕವಿರಾಜ ಸೋಮನಾಥಹಳ್ಳಿ, ಬಸವರಾಜ ಲಾಡಿ, ನಿಂಗಣ್ಣ ಆಂದೋಲಾ, ಶಿವು ಕಲ್ಲಾ, ಸಿದ್ದು ಜೋಗೂರ, ಶಂಕರ ಮುದನೂರ, ಲೋಕೇಶ, ರವಿ ಅವಂಟಿ ಮತ್ತು ಅನೇಕ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು