ಕಲಬುರಗಿ: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಅವರೊಂದಿಗೆ ಹೋರಾಟ ಮಾಡಿದ್ದ ಬಾಬು ಜಗಜೀವನರಾಂ ಅವರು ಪ್ರಜಾಪ್ರಭುತ್ವದ ಆಶಯಗಳನ್ನು ಮೈಗೂಡಿಸಿಕೊಂಡಿದ್ದರು ಎಂದು ಸಂಶೋಧಕ ವಡ್ಡಗೆರೆ ನಾಗರಾಜಯ್ಯ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶನಿವಾರ ಡಾ.ಬಾಬು ಜಗಜೀವನರಾಂ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಸಂಸ್ಥೆ ಆಯೋಜಿಸಿದ್ದ ಜಗಜೀವನರಾಂ ಅವರ 118ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಬಾಬೂಜಿ ಅವರು ಬುದ್ಧನ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದರು. ಜಾತಿ ಅಸಮಾನತೆ, ಅಧಿಕಾರಶಾಹಿಗಳ ವಿರುದ್ಧ ಹೋರಾಟ ಮಾಡುತ್ತಿದ್ದರು. ಜಾತಿಯ ಕಾರಣಕ್ಕೆ ತುಂಬಾ ಅವಮಾನಕ್ಕೊಳಗಾಗುತ್ತಾರೆ. ಇವೆಲ್ಲವುಗಳ ಮಧ್ಯೆಯೇ ಛಲ ಬಿಡದೆ ಓದಿ, ಗಾಂಧೀಜಿಯವರ ಜೊತೆ ಸೇರಿ ರಾಜಕೀಯ ಪ್ರವೇಶ ಮಾಡಿ ವಿವಿಧ ಖಾತೆಗಳ ಸಚಿವರಾದರು. ಭಾರತದಲ್ಲಿನ ಜನತೆ ಹಸಿವಿನಿಂದ ಯಾರೂ ಸಾಯಬಾರದು ಎಂಬ ಕಾರಣಕ್ಕೆ ಕೃಷಿ ಸಚಿವರಾಗಿದ್ದಾಗ ಕೃಷಿಯಲ್ಲಿ ಮಹತ್ತರವಾದ ಬದಲಾವಣೆ ತಂದು ಹಸಿರುಕ್ರಾಂತಿಯನ್ನು ನೆರವೇರಿಸಿದರು. ರಕ್ಷಣಾ ಸಚಿವರಾಗಿದ್ದ ಸಂದರ್ಭದಲ್ಲಿ ಸೈನಿಕರಿಗೆ ಪಿಂಚಣಿ ಸೌಲಭ್ಯ ಒದಗಿಸುತ್ತಾರೆ. ಈ ಜಗತ್ತು ಕಂಡ ಮಹಾನ್ ಚೇತನಗಳಾದ ಬುದ್ಧ, ಬಸವ, ಅಂಬೇಡ್ಕರ್, ಬಾಬು ಜಗಜೀವನರಾಂ ಇವರೆಲ್ಲರ ಚಿಂತನೆಗಳು ಒಂದೇ ಆಗಿವೆ’ ಎಂದರು.

‘ಹಿಂದೂ ಧರ್ಮದಲ್ಲಿದ್ದೇ ಬಾಬೂಜಿ ಅವರು ಸುಧಾರಣೆ ತರುವಂತಹ ಕೆಲಸ ಮಾಡಿದರು. ಕಾಂಗ್ರೆಸ್ ತೊರೆದು ಜಯಪ್ರಕಾಶ ನಾರಾಯಣ ಅವರ ಜನತಾ ಪಕ್ಷವನ್ನು ಸೇರಿದಾಗ ಸಮಾವೇಶ ಹಮ್ಮಿಕೊಂಡಿರುತ್ತಾರೆ. ಅದಕ್ಕೆ ಜನರು ಹೋಗುವುದನ್ನು ತಡೆಯಲು ಇಂಧಿರಾಗಾಂಧಿಯವರು ಆ ದಿನ ದೂರದರ್ಶನದಲ್ಲಿ ಆ ಕಾಲದ ಖ್ಯಾತ ಬಾಲಿವುಡ್ ಸಿನಿಮಾ ಬಾಬಿ ಪ್ರಸಾರ ಮಾಡುವಂತೆ ಹೇಳುತ್ತಾರೆ. ಆದರೂ ಸಮಾವೇಶಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗಲಿಲ್ಲ. ಇದು ಜಗಜೀವನರಾಂ ಅವರ ಬಗ್ಗೆ ಜನರು ಇಟ್ಟಂತಹ ಪ್ರೀತಿಯನ್ನು ತೋರಿಸುತ್ತದೆ’ ಎಂದು ಹೇಳಿದರು.

ಪ್ರಭಾರ ಕುಲಪತಿ ಪ್ರೊ. ಗೂರು ಶ್ರೀರಾಮುಲು ಮಾತನಾಡಿ, ‘ಜಗಜೀವನರಾಂ ಅವರು ಭಾರತದಲ್ಲಿ ಸಾಮಾಜಿಕ ನ್ಯಾಯದ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯದ ಪರವಾಗಿ ಧ್ವನಿ ಎತ್ತಿದ್ದಾರೆ’ ಎಂದರು.

ಡಾ. ಬಾಬು ಜಗಜೀವನರಾಂ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಸಂಸ್ಥೆಯ ನಿರ್ದೇಶಕ ಡಾ.ದೇವಿದಾಸ ಮಾಲೆ ಪ್ರಾಸ್ತಾವಿಕವಾಗಿ ಮಾತನಾಡಿ, ‘ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 2016–17ನೇ ಸಾಲಿನಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದ್ದು, ಪ್ರಸ್ತುತ ಸಿಬ್ಬಂದಿ ಮತ್ತು ಹಣಕಾಸಿನ ಕೊರತೆಯಿಂದಾಗಿ ಅಧ್ಯಯನ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ವಿಷಾದಿಸಿದರು.

ಸಿಂಡಿಕೇಟ್ ಸದಸ್ಯೆ ಶ್ರೀದೇವಿ ಎಸ್.ಕಟ್ಟಿಮನಿ, ವಿದ್ಯಾ ವಿಷಯಕ ಪರಿಷತ್ ಸದಸ್ಯೆ ಪ್ರೊ.ಸಿ.ಸುಲೋಚನಾ, ಕುಲಸಚಿವ (ಪ್ರಭಾರ) ಪ್ರೊ.ರಮೇಶ ಲಂಡನಕರ್, ಮೌಲ್ಯಮಾಪನ ಕುಲಸಚಿವ ಎನ್.ಜಿ ಕಣ್ಣೂರ, ಹಣಕಾಸು ಅಧಿಕಾರಿ ಜಯಾಂಬಿಕಾ ಉಪಸ್ಥಿತರಿದ್ದರು. ಎಲ್ಲಾ ನಿಕಾಯದ ಡೀನರು ಮತ್ತು ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿ ಅಣವೀರಗೌಡ ಬಿರಾದಾರ ನಿರೂಪಿಸಿದರು. ರಿಷಿ ಕುಮಾರ್ ವಂದಿಸಿದರು.

ಭಾರತದಲ್ಲಿನ ಜಾತಿ ವ್ಯವಸ್ಥೆ ನಿರ್ಮೂಲನೆಯಿಂದ ಮಾತ್ರ ನವಭಾರತ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಜಗಜೀವನರಾಂ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು
–ವಡ್ಡಗೆರೆ ನಾಗರಾಜಯ್ಯ ಸಂಶೋಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.