ಜೇವರ್ಗಿ: ‘ಭೀಕರ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಎಲ್ಲಾ ಗ್ರಾಮಗಳ ಸ್ಥಳಾಂತರ ಮಾಡಿ ಶಾಶ್ವತ ಪರಿಹಾರ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ ಬಾಬು ಹೇಳಿದರು.

ತಾಲ್ಲೂಕಿನ ಕಟ್ಟಿಸಂಗಾವಿ, ಹೊನ್ನಾಳ, ಹೋತಿನಮಡು ಸೇರಿದಂತೆ ವಿವಿಧ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದ ನಂತರ ಅವರು ಮಾತನಾಡಿದರು.

‘ಅತಿವೃಷ್ಟಿ ಹಾಗೂ ಪ್ರವಾಹದಿಂದ ಬೆಳೆ ಹಾನಿ ಅನುಭವಿಸಿದ ರೈತರಿಗೆ ಎಕರೆಗೆ ಕನಿಷ್ಠ ₹25 ಸಾವಿರ ಪರಿಹಾರಕ್ಕೆ ಸರ್ಕಾರದ ಮೇಲೆ ಜೆಡಿಎಸ್ನಿಂದ ಒತ್ತಡ ಹೇರಲಾಗುವುದು. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಕಳೆದುಕೊಂಡಿರುವವರಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

‘ರೈತರು ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆ ಕೈಬಿಟ್ಟು ಆತ್ಮವಿಶ್ವಾಸದಿಂದ ಬದುಕು ನಡೆಸಬೇಕು. ನಿಮ್ಮೊಂದಿಗೆ ಜೆಡಿಎಸ್ ಪಕ್ಷ ಸದಾ ಬೆನ್ನೆಲುಬಾಗಿ ನಿಲ್ಲಲಿದೆ’ ಎಂದು ರೈತರಿಗೆ ಧೈರ್ಯ ತುಂಬಿದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ‘ತಾಲ್ಲೂಕಿನ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಬಂದು ರೈತರ ಬದುಕು ಹದಗೆಟ್ಟಿದೆ. ಸರ್ಕಾರ ಸಮೀಕ್ಷೆ ನಡೆಸದೇ ಎಲ್ಲಾ ರೈತರಿಗೆ ಪರಿಹಾರ ಕೊಡಬೇಕು. ಮನೆ ಕಳೆದುಕೊಂಡವರಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ಮಾಜಿ ಸಚಿವ ವೆಂಕಟರಾವ ನಾಡಗೌಡ, ಶಾಸಕಿ ಕರೆಮ್ಮ ನಾಯಕ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ, ಶಿವಕುಮಾರ್ ನಾಟಿಕಾರ, ಸಿ.ಬಿ.ಚಂದ್ರಶೇಖರ್, ಮಹೇಶ್ವರಿ ವಾಲಿ, ರಮೇಶಬಾಬು ವಕೀಲ, ಶಿವಾನಂದ ದ್ಯಾಮಗೊಂಡ, ಎಸ್.ಎಸ್.ಸಲಗರ, ಗೊಲ್ಲಾಳಪ್ಪ ಕಡಿ, ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಬಸವರಾಜ ಮುಕ್ಕಣ್ಣಿ, ವೆಂಕಣಗೌಡ ರಾಂಪೂರ, ಧರ್ಮರಾಜ ಜೋಗೂರ, ಶರಣಗೌಡ ಯಲಗೋಡ, ರವಿ ಪಡಶೆಟ್ಟಿ, ರೇವಣಸಿದ್ದಪ್ಪ ಅಕ್ಕಿ, ಶರಣು ಮಣೂರ ಸೇರಿದಂತೆ ಮತ್ತಿತರರು ಇದ್ದರು.

ಮೃತ ರೈತನ ಕುಟುಂಬಕ್ಕೆ ಸಾಂತ್ವನ

ಕಲಬುರಗಿ: ಜೆಡಿಎಸ್ ಮುಖಂಡರ ನಿಯೋಗವು ಬುಧವಾರ ಬೆಳೆಹಾನಿ ಸಮೀಕ್ಷೆಗೂ ಮುನ್ನ ಕಲಬುರಗಿಯಿಂದ ಹೊರಟು ಮೊದಲಿಗೆ ಫರಹತಾಬಾದ್ ಸಮೀಪದ ಬಸವಪಟ್ಟಣ ಗ್ರಾಮಕ್ಕೆ ಭೇಟಿ ನೀಡಿತು. ಇತ್ತೀಚೆಗೆ ಸಾಲಬಾಧೆಯಿಂದ ಬೇಸತ್ತು ಭೀಮಾನದಿಯ ಪ್ರವಾಹದ ಹಿನ್ನೀರಿಗೆ ಹಾರಿ ಮೃತಪಟ್ಟ ಮರೆಪ್ಪ ಬರ್ಮಾ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿತು. ಪಕ್ಷದ ಮುಖಂಡರು ಸೇರಿ ₹35 ಸಾವಿರ ನೆರವು ನೀಡಿದರು.

ಅತಿವೃಷ್ಟಿ ಭೀಮಾ ಪ್ರವಾಹದ ಸಂಕಷ್ಟಗಳ ನಡುವೆಯೂ ಸಮಾಧಾನದ ಜೀವನ ನಡೆಸುತ್ತಿರುವ ಈ ಭಾಗದ ಜನ ಮಾತೃ ಹೃದಯ ಹೊಂದಿದ್ದಾರೆ.
-ಸುರೇಶ ಬಾಬು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ಮಳೆಗಾಲದಲ್ಲಿ ಭೀಮಾನದಿಗೆ ಬರುವ ನೀರಿನ ಸದ್ಬಳಕೆಗೆ ಸರ್ಕಾರ ಯೋಜನೆ ರೂಪಿಸಬೇಕು. ಈ ಬಗೆಗೆ ಮುಂದಿನ ಅಧಿವೇಶದಲ್ಲಿ ಸರ್ಕಾರ ಸಮಗ್ರವಾಗಿ ಚರ್ಚಿಸಬೇಕು.
-ಶಿವಕುಮಾರ ನಾಟಿಕಾರ ಜೆಡಿಎಸ್ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.