ಕಲಬುರಗಿ: ಇಲ್ಲಿನ ವಿಮಾನ ನಿಲ್ದಾಣದಿಂದ ಕಲಬುರಗಿ ಮತ್ತು ಬೆಂಗಳೂರು ನಡುವೆ ನಿತ್ಯ ಸಂಚರಿಸುತ್ತಿದ್ದ ಸ್ಟಾರ್ ಏರ್ ವಿಮಾನ ಸಂಚಾರ ಸ್ಥಗಿತಗೊಂಡಿದೆ.

‘ಅಕ್ಟೋಬರ್ 15ರಿಂದ ಸೇವೆ ನಿಲ್ಲಿಸುವುದಾಗಿ ಸ್ಟಾರ್ ಏರ್ ವಿಮಾನವು ಮಾಹಿತಿ ನೀಡಿದೆ. ಆದರೆ, ಅಕ್ಟೋಬರ್ 8ರಂದು ಕಲಬುರಗಿಯಿಂದ ಹಾರಿದ್ದೇ ಕೊನೆಯ ವಿಮಾನವಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಕಳೆದ ವರ್ಷದಿಂದ ಸ್ಟಾರ್ ಏರ್ ವಿಮಾನವು ಕಲಬುರಗಿ–ಬೆಂಗಳೂರು ನಡುವೆ ನಿತ್ಯ ವಿಮಾನ ಸೇವೆ ಒದಗಿಸುತ್ತಿತ್ತು. ಪ್ರಯಾಣಿಕರ ಕೊರತೆಯ ಕಾರಣದಿಂದ ಕಳೆದೆರಡು ವಾರಗಳಿಂದ ವಾರಕ್ಕೆ ಮೂರು ದಿನಗಳು ಮಾತ್ರವೇ ವಿಮಾನಗಳು ಸಂಚರಿಸಿವೆ. ಅಕ್ಟೋಬರ್ 15ರಿಂದ ವಿಮಾನ ಸೇವೆ ನಿಲ್ಲಿಸುವುದಾಗಿ ಸಂಸ್ಥೆ ಹೇಳಿದೆ’ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಸಕಾ ಜ್ಞಾನೇಶ್ವರರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಟಾರ್ ಏರ್ ಸಂಸ್ಥೆಗೆ ಉಡಾನ್ ಅಡಿಯಲ್ಲಿ ಬೀದರ್, ಶಿವಮೊಗ್ಗ, ನಾಂದೇಡ್ಗೆ ಹೊಸ ಮಾರ್ಗಗಳು ಮಂಜೂರಾಗಿವೆ. ಕಲಬುರಗಿಗೆ ಬಳಕೆಯಾಗುತ್ತಿದ್ದ ವಿಮಾನವನ್ನು ಸಂಸ್ಥೆಯು ನಾಂದೇಡ್ ಮಾರ್ಗಕ್ಕೆ ಬದಲಾಯಿಸಲು ಚಿಂತನೆ ನಡೆಸಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.