ದಸರಾ ಹಬ್ಬಕ್ಕೆ ಖರೀದಿ ಜೋರು |ಹೂವುಗಳ ದರ ಹೆಚ್ಚಳ: ಗ್ರಾಂ ಲೆಕ್ಕದಲ್ಲಿ ಖರೀದಿ!
ವಿಶ್ವರಾಧ್ಯ ಎಸ್.ಹಂಗನಳ್ಳಿ
Published : 1 ಅಕ್ಟೋಬರ್ 2025, 8:03 IST
Last Updated : 1 ಅಕ್ಟೋಬರ್ 2025, 8:03 IST
ಫಾಲೋ ಮಾಡಿ
Comments
ಕಲಬುರಗಿಯ ಮಾರುಕಟ್ಟೆಯಲ್ಲಿ ಚೆಂಡು ಹೂವು ಮಾರಾಟ ಮಾಡುತ್ತಿರುವ ಮಹಿಳೆ
ದಸರಾ ಹಬ್ಬದಲ್ಲಿ ದೇವಿ ಮತ್ತು ವಾಹನಗಳ ಪೂಜೆಗೆ ಹೂವು ಕಡ್ಡಾಯವಾಗಿ ಬೇಕು. ಹಾಗಾಗಿ ₹100 ಕೊಟ್ಟು ಕೆ.ಜಿ ಚೆಂಡು ಹೂವು ₹50ರಲ್ಲಿ 100 ಗ್ರಾಂ ಸೇವಂತಿ ಹೂವು ಖರೀದಿಸಿದ್ದೇನೆ
ಶರಣಪ್ಪ ನಂದೂರ ಗ್ರಾಹಕ
ತರಕಾರಿ ಸೊಪ್ಪು ದರ ಏರಿಕೆ
ನಿರಂತರ ಮಳೆಯ ಕಾರಣ ತರಕಾರಿ ಮತ್ತು ಸೊಪ್ಪುಗಳ ದರದಲ್ಲಿ ಏರಿಕೆಯಾಗಿದೆ. ಹಬ್ಬದಲ್ಲಿ ಸಿಹಿ ಮಾಡಿದಾಗ ಬದನೆಕಾಯಿ ಪಲ್ಯ ಇರಲೇಬೇಕು. ಇದರಿಂದಾಗಿ ಬದನೆಕಾಯಿ ದರ ಹೆಚ್ಚಳವಾಗಿದ್ದು ಕೆ.ಜಿಗೆ ₹120ರಂತೆ ಮಾರಾಟವಾಯಿತು. ‘ಕೆ.ಜಿ ಚವಳೆಕಾಯಿ ಸೌತೆಕಾಯಿ ತಲಾ ₹80 ಬೆಂಡೆಕಾಯಿ ಹಿರೇಕಾಯಿ ಹಸಿಮೆಣಸಿನಕಾಯಿ ತಲಾ ₹60 ಟೊಮೆಟೊ ₹40 ಇದೆ’ ಎಂದು ವ್ಯಾಪಾರಿ ಸೋಯೆಬ್ ಅಲಿ ತಿಳಿಸಿದರು. ಆಲೂಗಡ್ಡೆ ಮಾತ್ರ ₹30ರಂತೆ ಮಾರಾಟವಾಗುತ್ತಿದ್ದು ಈ ದರ ಗ್ರಾಹಕರಿಗೆ ಕಡಿಮೆ ಅನ್ನಿಸಿತು. ಕೊತ್ತಂಬರಿ ಮತ್ತು ಪುದೀನಾ ದೊಡ್ಡ ಸೂಡುಗಳು ₹40 ಸಣ್ಣ ಸೂಡು ₹20 ಇದೆ.