ಕಲಬುರಗಿ: ‘ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಬೆಳೆ ಹಾನಿಯಾದ ಕುರಿತು 2-3 ದಿನಗಳಲ್ಲಿ ಜಂಟಿ ಸಮೀಕ್ಷೆ ಮಾಡಿ ಮಾಹಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.

ಬುಧುವಾರ ಜಿಲ್ಲಾಧಿಕಾರಿ ಕಚೇರಿ ವಿಡಿಯೊ ಕಾನ್ಫರೆನ್ಸ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾದ ಮಾನವ ಪ್ರಾಣ ಹಾನಿ, ವಸತಿಗಳು ಮತ್ತು ಬೆಳೆಹಾನಿ ಹಾಗೂ ಎಸ್ಡಿಎಂಫ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗುವ ಅನಾಹುತ ತಪ್ಪಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಬೆಳೆ ಹಾನಿಯಾಗಿದ್ದರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು’ ಎಂದು ನಿರ್ದೇಶನ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ‘ಜಿಲ್ಲೆಯಲ್ಲಿ ಸತತ ಮಳೆ ಹಿನ್ನೆಲೆಯಲ್ಲಿ ಕೃಷಿ ಬೆಳೆಗೆ ಹಾನಿಯಾಗುವ ಸಂಭವವಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಒಳಗೊಂಡಂತೆ ಬೆಳೆಹಾನಿ ಜಂಟಿ ಸಮೀಕ್ಷೆಗೆ ಈಗಾಗಲೇ ಆದೇಶಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಶಾಲಾ–ಕಾಲೇಜುಗಳು, ಅಂಗನವಾಡಿಯ ಶಿಥಿಲಗೊಂಡಿರುವ ಕಟ್ಟಡಗಳನ್ನು ಗುರುತಿಸಿ, ಅಲ್ಲಿ ವಾಸಿಸಿರುವ ಜನರು ಅಥವಾ ವಿದ್ಯಾರ್ಥಿಗಳಿಗೆ ಬೇರೆ ಕಡೆ ಸ್ಥಳಾಂತರಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

‘ಈಗಾಗಲೇ ಮಳೆ ಜಾಸ್ತಿ ಆಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿದ್ದು, ಸೊಳ್ಳೆಗಳು ಉತ್ಪತ್ತಿಯಾಗದಂತೆ ಡೆಂಗಿ, ಚಿಕೂನ್ಗುನ್ಯಾದಂಥ ರೋಗಗಳ ನಿಯಂತ್ರಿಸಲು ಅಗತ್ಯ ಕ್ರಮಹಿಸಬೇಕು’ ಎಂದು ಡಿಎಚ್ಒ ಡಾ.ಶರಣಬಸಪ್ಪ ಕ್ಯಾತನಾಳ ಅವರಿಗೆ ಸೂಚಿಸಿದರು.

ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಎಎಸ್ಪಿ ಮಹೇಶ ಮೇಘಣ್ಣನವರ ಮಾತನಾಡಿದರು.

ಜಿಲ್ಲೆಯ ಎಲ್ಲ ತಹಶೀಲ್ದಾರ್ಗಳು ಮತ್ತು ತಾಲ್ಲೂಕು ಪಂಚಾಯಿತಿ ಇಒಗಳು, ಜಿಲ್ಲಾಮಟ್ಟ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದದ ಮೂಲಕ ಜಿಲ್ಲಾಧಿಕಾರಿ ಚರ್ಚಿಸಿದರು.

ಎಸ್ಪಿ ಅಡ್ಡೂರು ಶ್ರೀನಿವಾಸುಲು, ಎಸಿ ಸಾಹಿತ್ಯಾ ಆಲದಕಟ್ಟಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಮಾ ಪ್ರತಿನಿಧಿಗಳ ಮಾಹಿತಿ

ಜಿಲ್ಲೆಯ ರೈತರು ಸ್ಥಳೀಯ ಪ್ರಕೃತಿ ವಿಕೋಪದಡಿ ಮಳೆ ಬಂದ 72 ಗಂಟೆಗಳಲ್ಲಿ ಇಫ್ಕೊ ಟೊಕಿಯೊ ಜನರಲ್ ಇನ್ಶೂರನ್ಸ್ ಕಂಪನಿಯ ಟೋಲ್ ಫ್ರೀ ಸಂಖ್ಯೆ 1800-200-5142ಗೆ ಕರೆ ಮಾಡಿ ದೂರು ನೀಡಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲಾ ಪ್ರತಿನಿಧಿ ಶಿವ ಎಸ್.ಬಿ.(63629 54334) ಆಳಂದ ಪ್ರತಿನಿಧಿ ಸುನಿಲ್ ಪವಾರ್(98458 48208) ಯಡ್ರಾಮಿ ಪ್ರತಿನಿಧಿ ಭೀಮಪ್ಪ ಬಳಬಟ್ಟಿ (98445 88639) ಅಫಜಲಪುರ ಪ್ರತಿನಿಧಿ ಗಣಪತಿ ಹೊನ್ನಳ್ಳಿ (82170 50978) ಕಮಲಾಪುರ ಪ್ರತಿನಿಧಿ ಸಂತೋಷ ರಾಗಿ (99723 20999) ಚಿತ್ತಾಪುರ ಪ್ರತಿನಿಧಿ ರಾಹುಲ್ ಪಾಟೀಲ್ (76193 17156) ಕಲಬುರಗಿ ಪ್ರತಿನಿಧಿ ಸೋಮಲಿಂಗಯ್ಯ ಹಿರೇಮಠ (97401 07575) ಚಿಂಚೋಳಿ ಪ್ರತಿನಿಧಿ ಕಿಶನ್ ನಾಯಕ್ (87470 25295) ಸೇಡಂ ಪ್ರತಿನಿಧಿ ಆಕಾಶ್ ರೆಡ್ಡಿ (70227 67246) ಜೇವರ್ಗಿ ಪ್ರತಿನಿಧಿ ಮಲ್ಲಿಂಗರಾಯ(77605 45692) ಕಾಳಗಿ ಪ್ರತಿನಿಧಿ ಚಾಂದ್ ಪಟೇಲ್ (80953 84057) ಹಾಗೂ ಶಹಾಬಾದ್ ಪ್ರತಿನಿಧಿ ಗುಂಡೇರಾವ್ (73385 74943) ಅವರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.