ಪ್ರವಾಹ ಇಳಿದ ಬಳಿಕ ಹಾಗರಗುಂಡಗಿ ಗ್ರಾಮದ ರಸ್ತೆಯ ತುಂಬ ಕೆಸರು ತುಂಬಿಕೊಂಡಿದ್ದು ಗ್ರಾಮಸ್ಥರು ಕೆಸರಿನಲ್ಲೇ ನಡೆದುಕೊಂಡು ಬರುತ್ತಿರುವುದು ಶನಿವಾರ ಕಂಡು ಬಂತು
ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಪ್ರವಾಹದ ನೀರು ಬರದಂತೆ ನದಿ ದಡದಲ್ಲಿ ತಡೆಗೋಡೆ ನಿರ್ಮಿಸಬೇಕು. ಈ ಬಾರಿಯ ಪ್ರವಾಹಕ್ಕೆ ಇಡೀ ಊರು ದ್ವೀಪದಂತಾಗಿತ್ತು. ಮಿಣಜಗಿ ಮೂಲಕ ಹೋಗುವ ರಸ್ತೆಯನ್ನು ದುರಸ್ತಿಪಡಿಸಬೇಕು. ವಿಶೇಷ ಪ್ಯಾಕೇಜ್ ಘೋಷಿಸಬೇಕು.
– ಬಾಬುರಾವ್ ಪರೀಟ, ಹಾಗರಗುಂಡಗಿ ಗ್ರಾಮಸ್ಥ
ಮನೆಯಲ್ಲಿಟ್ಟ ಸಾಮಾನುಗಳೊಂದಿಗೆ ಮನೆಯ ಗೋಡೆ ಕುಸಿದು ಬಿದ್ದಿದೆ. ಪ್ರವಾಹದ ನೀರು ಬಂದಾಗ ಕೊಡಗಳಲ್ಲಿ ಸಂಗ್ರಹಿಸಿ ಇಟ್ಟಿದ್ದ ನೀರನ್ನೇ ಕುಡಿದೆವು. ಬೇರೆ ಕಡೆ ಮನೆ ಹುಡುಕೋಣವೆಂದರೆ ಬಾಡಿಗೆ ಮನೆಯೂ ಸಿಗುತ್ತಿಲ್ಲ. ಸರ್ಕಾರ ಸ್ಥಳಾಂತರ ಮಾಡಬೇಕು.