ಶನಿವಾರ, ಅಕ್ಟೋಬರ್ 31, 2020
24 °C

ತಗ್ಗಿದ ನೀರು: ಮಳಖೇಡ ಸೇತುವೆ ಪ್ರಯಾಣಕ್ಕೆ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ–ಸೇಡಂ ಸಂಪರ್ಕ ಸೇತುವೆ ಸಂಚಾರಕ್ಕೆ ಸಿದ್ಧ

ಸೇಡಂ (ಕಲಬುರ್ಗಿ ಜಿಲ್ಲೆ): ಭಾರಿ ಮಳೆ ಹಾಗೂ ಕಾಗಿಣಾ ನದಿ ನೀರಿನ ಹರಿವು ಹೆಚ್ಚಿದ ಪರಿಣಾಮ ಕಳೆದ ನಾಲ್ಕು ದಿನಗಳಿಂದ ಸ್ಥಗಿತಗೊಂಡಿದ್ದ ಕಲಬುರ್ಗಿ–ಸೇಡಂ ಸಂಪರ್ಕ ಸೇತುವೆ ಮೇಲೆ ಹರಿಯುತ್ತಿದ್ದ ನೀರು ತಗ್ಗಿದ್ದರಿಂದ ಶನಿವಾರ ಬೆಳಿಗ್ಗೆ ಪುನರಾರಂಭಗೊಂಡಿದೆ.

ರಾಜ್ಯ ಹೆದ್ದಾರಿ ಕಲಬುರ್ಗಿ–ರಿಬ್ಬನಪಲ್ಲಿ ಮಧ್ಯದ ಮಳಖೇಡ (ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಪಟ್ಟಣ) ಸೇತುವೆ  ನಾಲ್ಕು ದಿನಗಳ ಕಾಲ ತುಂಬಿ ಹರಿದಿತ್ತು. ಇದರಿಂದಾಗಿ ಸೇಡಂ–ಕಲಬುರ್ಗಿ ನೇರ ಸಂಪರ್ಕ ಕಡಿತಗೊಂಡು ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಕಾಗಿಣಾ ನದಿ ನೀರಿನ ಹರಿವು ಇಳಿಮುಖವಾಗಿದ್ದರಿಂದ ಸಂಚಾರ ಆರಂಭಗೊಂಡಿದೆ. ಇದರಿಂದಾಗಿ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಸೇತುವೆಯಿಂದ ಮೂರ್ನಾಲ್ಕು ಅಡಿ ನೀರು ಕೆಳಗಡೆ ಹರಿಯುತ್ತಿರುವುದರಿಂದ ಪ್ರಯಾಣಿಕರು ನಿರ್ಭಯದಿಂದ ತೆರಳುತ್ತಿದ್ದಾರೆ. ನಾಲ್ಕು ದಿನಗಳಿಂದ ರಸ್ತೆ ಪಕ್ಕದಲ್ಲೇ ಬಿಡಾರ ಹೂಡಿದ್ದ ಗುಜರಾತ್ ಹಾಗೂ ಮಹಾರಾಷ್ಟ್ರದಿಂದ ಸರಕು ಸಾಗಾಣಿಕೆ ಲಾರಿಗಳು ಸೇತುವೆ ದಾಟಿ ತೆಲಂಗಾಣದ ಮೂಲಕ ಚೆನ್ನೈನತ್ತ ತೆರಳಿದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು