ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲೂ ನಳನಳಿಸುವ ಶಾಲಾ ಆವರಣ

ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಸರ್ಕಾರಿ ಪ್ರೌಢಶಾಲೆ
Published 30 ಮಾರ್ಚ್ 2024, 7:01 IST
Last Updated 30 ಮಾರ್ಚ್ 2024, 7:01 IST
ಅಕ್ಷರ ಗಾತ್ರ

ಯಡ್ರಾಮಿ: ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರು ಗಿಡ, ಮರಗಳು, ಬಣ್ಣ ಬಣ್ಣದ ಹೂವುಗಳು, ಸ್ವಚ್ಛಂದವಾಗಿ ಸಂಚರಿಸುವ ವಿವಿಧ ಬಗೆಯ ಹಕ್ಕಿಗಳು, ಅಲ್ಲಲ್ಲಿ ಕಂಡುಬರುವ ಕಿರು ಹೊಂಡಗಳು.

ನೋಡೋದಕ್ಕೆ ಕಿರು ಉದ್ಯಾನದ ರೀತಿ ಕಾಣುವ ಇದು ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದ ಪ್ರೌಢಶಾಲೆ. ಪಾಠವಷ್ಟೇ ಅಲ್ಲ ಸಾಮಾಜಿಕ ಕಳಕಳಿ, ಪರಿಸರ ಪ್ರಜ್ಞೆ ಹೇಳಿಕೊಡುವ ಅಪರೂಪದ ಪರಿಸರ ಶಾಲೆ. ಶಿಕ್ಷಕರು, ವಿದ್ಯಾರ್ಥಿಗಳ ರಚನಾತ್ಮಕ ಕಾರ್ಯಕ್ಕೆ ಸಾಕ್ಷಿಯಂತಿದೆ.

ಶಾಲಾ ಆವರಣ ಸುಮಾರು ನಾಲ್ಕು ಎಕರೆಯಷ್ಟಿದೆ. ಇಲ್ಲಿ ಒಟ್ಟು 104ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಕಟ್ಟಡ ನಿರ್ಮಾಣಗೊಂಡ ಕೂಡಲೇ ಆವರಣದಲ್ಲಿ ಉತ್ತಮ ಉದ್ಯಾನ ನಿರ್ಮಿಸಿಕೊಂಡಿದ್ದಾರೆ. ಕೊಳವೆಬಾವಿಯಿಂದ ನೀರು ಹರಿಸಲಾಗುತ್ತದೆ.

ಜೀವ ವೈವಿಧ್ಯತೆ: ಶಾಲೆಯ ಆವರಣದಲ್ಲಿ ಬೆಳೆದ ಅನೇಕ ದೊಡ್ಡದೊಡ್ಡ ಮರಗಳಲ್ಲಿ ವಿವಿಧ ಬಗೆಯ ಪಕ್ಷಿಗಳು ಆಶ್ರಯ ಪಡೆದುಕೊಂಡಿವೆ. ವಿವಿಧ ಬಗೆಯ ಹೂವಿನ ಗಿಡಗಳು, ಹಣ್ಣಿನ ಗಿಡಗಳು ಇವೆ. ಪರಿಸರ ಕುರಿತು ಪಾಠ ಮತ್ತು ಪ್ರಾತ್ಯಕ್ಷತೆ ಆಯೋಜಿಸುವುದು, ಬದು ನಿರ್ಮಾಣದ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತಿರುವುದು ವಿಶೇಷ.

ಹೆಚ್ಚು ಖರ್ಚಿಲ್ಲದೆ ಲಭ್ಯವಿರುವ ಸಂಪನ್ಮೂಲದಿಂದಲೇ ಶಾಲಾ ಆವರಣ ಸುಂದರವಾಗಿ ನಿರ್ಮಿಸಿಕೊಂಡಿದ್ದಾರೆ. ಬಿಸಿಲ ಪ್ರದೇಶದಲ್ಲಿ ಮಲೆನಾಡನ್ನೂ ನಾಚಿಸುವಂತೆ ಮಾಡಿರುವ ಕಣಮೇಶ್ವರ ಶಾಲೆಗೆ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು ಲಭಿಸಲಿ ಎನ್ನುತ್ತಾರೆ ಶಿವಲಿಂಗ ಕಣಮೇಶ್ವರ, ಶಿವಶರಣ ಕಣಮೇಶ್ವರ.

‌ಇಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿಯೂ ಅಗ್ರಸ್ಥಾನದಲ್ಲಿದ್ದಾರೆ. ಪ್ರತಿದಿನ ಧ್ಯಾನ ಮತ್ತು ಶನಿವಾರ ಯೋಗ ನಡೆಯುತ್ತದೆ. ಯೋಗಕ್ಕೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸಮವಸ್ತ್ರ ಮಾಡಲಾಗಿದೆ.ಎಲ್ಲಾ ರೀತಿಯಿಂದ ಸುಂದರ ಪರಿಸರ ನಿರ್ಮಾಣ ಮಾಡಿದ್ದೇವೆ. ಇದಕ್ಕೆಲ್ಲಾ ಗ್ರಾಮಸ್ಥರು ಎಸ್‍ಡಿಎಂಸಿ ಗ್ರಾ.ಪಂ. ಮತ್ತು ಗ್ರಾಮಸ್ಥರ ಸಹಕಾರದಿಂದ ಶಾಲೆ ಅಭಿವೃದ್ಧಿಗೊಂಡಿದೆ - ಬಿ.ಬಿ.ಹಿರೇಗೌಡರ ಮುಖ್ಯಶಿಕ್ಷಕ

ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಜತೆಗಿರುವುದು
ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಜತೆಗಿರುವುದು
ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣ
ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣ
ಎಲ್ಲಾ ರೀತಿಯಿಂದ ಸುಂದರ ಪರಿಸರ ನಿರ್ಮಾಣ ಮಾಡಿದ್ದೇವೆ. ಇದಕ್ಕೆಲ್ಲಾ ಗ್ರಾಮಸ್ಥರು ಎಸ್‍ಡಿಎಂಸಿ ಗ್ರಾ.ಪಂ. ಮತ್ತು ಗ್ರಾಮಸ್ಥರ ಸಹಕಾರದಿಂದ ಶಾಲೆ ಅಭಿವೃದ್ಧಿಗೊಂಡಿದೆ
- ಬಿ.ಬಿ.ಹಿರೇಗೌಡರ ಮುಖ್ಯಶಿಕ್ಷಕ
ಯೋಗ ಮತ್ತು ಧ್ಯಾನದಿಂದ ಮಕ್ಕಳಲ್ಲಿ ಸೃಜನಶೀಲತೆ ಆರೋಗ್ಯ ಸುರಕ್ಷತೆಗೊಳ್ಳುತ್ತದೆ. ಬುದ್ಧಿಶಕ್ತಿ ಪ್ರಭಲಗೊಳ್ಳುತ್ತದೆ -
ಪ್ರಭು ಯಾಳಗಿ ದೈಹಿಕ ಶಿಕ್ಷಕ
ಇಲ್ಲಿನ ಮಕ್ಕಳು ಮತ್ತು ಶಿಕ್ಷಕರ ಕೈಚಳಕದಿಂದ ಸುಂದರ ಪರಿಸರ ನಿರ್ಮಾಣಗೊಂಡಿದೆ. ಬೇಸಿಗೆಯಲ್ಲಿ ಶಾಲಾ ಆವರಣದಲ್ಲಿ ಕೂರಬೇಕು ಎನಿಸುತ್ತದೆ
- ವಿಜು ಬಡಿಗೇರ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT