ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28 ತಿಂಗಳ ನಂತರ ಕಲಬುರ್ಗಿ ಮಹಾನಗರ ಪಾಲಿಕೆಗೆ ಚುನಾವಣೆ

ಕಲಬುರ್ಗಿ ಮಹಾನಗರ ಪಾಲಿಕೆ; ರಾಜಕೀಯ ಚಟುವಟಿಕೆ ಚುರುಕು
Last Updated 11 ಆಗಸ್ಟ್ 2021, 16:41 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ಮಹಾಗರ ಪಾಲಿಕೆಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಿಸಿದೆ. 28 ತಿಂಗಳ ನಂತರ ಮಹಾನಗರ ಪಾಲಿಕೆಗೆ ಚುನಾಯಿತ ಆಡಳಿತ ಮಂಡಳಿ ರಚನೆಯಾಗುವ ಕಾಲ ಸನ್ನಿಹಿತವಾಗಿದೆ.

ಪಾಲಿಕೆಯ ಹಿಂದಿನ ಅವಧಿಯ ಚುನಾಯಿತ ಸದಸ್ಯರ ಅವಧಿಯ2019ರ ಏಪ್ರಿಲ್‌ 4ಕ್ಕೆ ಕೊನೆಗೊಂಡಿತ್ತು. ವಾರ್ಡ್‌ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ ವಿವಾದ ಕೋರ್ಟ್‌ ಮೆಟ್ಟಿಲೇರಿತು. ಹೀಗಾಗಿ ಪಾಲಿಕೆಯ ಚುನಾವಣೆ ನನೆಗುದಿಗೆ ಬಿದ್ದಿತ್ತು.

ವಾರ್ಡ್‌ಗಳ ಪುನರ್‌ ವಿಂಗಡಣೆ ಸರಿಯಾಗಿಲ್ಲ ಎಂದು ಕೆಲವರು ಹೈಕೋರ್ಟ್‌ ಮೊರೆ ಹೋಗಿದ್ದರಿಂದವಾರ್ಡ್‌ಗಳ ಮರುವಿಂಗಡಣೆ, ಮೀಸಲು ಅಧಿಸೂಚನೆಯನ್ನು ಪುನರ್‌ ಪರಿಶೀಲಿಸುವಂತೆ ಹೈಕೋರ್ಟ್‌ ಆದೇಶ ನೀಡಿತ್ತು.

ವಾರ್ಡ್‌ ಪುನರ್‌ ವಿಂಗಡಣೆ ವೇಳೆ ಸಾಕಷ್ಟು ದೋಷವಾಗಿದೆ. ಕೆಲ ವಾರ್ಡ್‌ಗಳಲ್ಲಿ ಕೇವಲ 5 ಸಾವಿರ ಜನಸಂಖ್ಯೆ ಇದ್ದರೆ, ಕೆಲ ವಾರ್ಡ್‌ಗಳ ಜನಸಂಖ್ಯೆ 20 ಸಾವಿರದಷ್ಟಿದೆ. ಇದು ಯಾವ ನ್ಯಾಯ? ಮೀಸಲಾತಿ ಅಧಿಸೂಚನೆ, ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡಬೇಕು ಎಂದು ಹೈಕೋರ್ಟ್‌ ಸರ್ಕಾರಕ್ಕೆ ಛೀಮಾರಿಯನ್ನೂ ಹಾಕಿತ್ತು.

ರಾಜ್ಯ ಸರ್ಕಾರದ ವಿಳಂಬ ನೀತಿ ಹಾಗೂ ಕೋವಿಡ್‌ ಹಾವಳಿ ಕಾರಣ ಪಾಲಿಕೆಗೆ ಚುನಾವಣೆ ನನೆಗುದಿಗೆ ಬಿದ್ದಿತ್ತು. ಈಗ ಹೈಕೋರ್ಟ್‌ ಮಧ್ಯಪ್ರವೇಶದಿಂದಾಗಿ ಚುನಾವಣೆ ಘೋಷಣೆಯಾಗಿದೆ.

ಚುರುಕುಗೊಂಡ ಚಟುವಟಿಕೆ: ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ವಿವಿಧ ಪಕ್ಷಗಳ ವರಿಷ್ಠರ ಬಳಿ ಆಕಾಂಕ್ಷಿಗಳ ದಂಡು ಎಡತಾಕುತ್ತಿದೆ. ಪಕ್ಷದ ಮುಖಂಡರೂ ಈಗಾಗಲೇ ಸಂಭವನೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಟಿಕೆಟ್‌ಗಳಿಗೆ ಹೆಚ್ಚು ಬೇಡಿಕೆ ವ್ಯಕ್ತವಾಗಿದ್ದು, ಶಾಸಕರು, ಪಕ್ಷದ ಮುಖಂಡರ ಮನವೊಲಿಕೆಯಲ್ಲಿ ತೊಡಗಿದ್ದಾರೆ.

ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಬುಧವಾರ ಬೆಂಗಳೂರಿಗೆ ತೆರಳಿದ್ದು, ಅವರು ಮರಳಿದ ಬಳಿಕ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳ ಸಂಭವನೀಯರ ಪಟ್ಟಿಯನ್ನು ಅಖೈರುಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮೀಸಲಾತಿಯಿಂದ ಕ್ಷೇತ್ರ ಕಳೆದುಕೊಂಡವರು ಕೈ ಕೈ ಹಿಸುಕಿಕೊಳ್ಳುತ್ತಿದ್ದು, ಹೊಸ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಆದರೆ, ಚುನಾವಣೆ ಪ್ರಕ್ರಿಯೆಗೆ 15 ದಿನಗಳೂ ಸಿಕ್ಕಿಲ್ಲವಾದ್ದರಿಂದ ಕ್ಷೇತ್ರದ ಮತದಾರರನ್ನು ಹೇಗೆ ಭೇಟಿ ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ. ಮೂರು ಪ್ರಮುಖ ಪಕ್ಷಗಳು ಆಗಸ್ಟ್ 22ರಂದು ತಮ್ಮ ಅಭ್ಯರ್ಥಿಗಳ ಘೋಷಣೆ ಮಾಡುವ ಸಾಧ್ಯತೆ ಇದೆ.

ಅಂಕಿ ಅಂಶ

55
ಒಟ್ಟು ವಾರ್ಡ್‌ಗಳು

2,58,775

ಪುರುಷ ಮತದಾರರು

2,60,543

ಮಹಿಳಾ ಮತದಾರರು

146

ಇತರರು

5,19,464

ಒಟ್ಟು ಮತದಾರರ ಸಂಖ್ಯೆ

531

ಒಟ್ಟು ಮತಗಟ್ಟೆಗಳ ಸಂಖ್ಯೆ

**

ಕಲಬುರ್ಗಿ ಮಹಾನಗರ ಪಾಲಿಕೆಯ ಚುನಾವಣೆಯ ವೇಳಾಪಟ್ಟಿ

ನಾಮಪತ್ರ ಸಲ್ಲಿಕೆ ಆರಂಭ; ಆ.16ರಿಂದ

ನಾಮಪತ್ರ ಸಲ್ಲಿಕೆಯ ಕೊನೆ ದಿನ; ಆ.23

ನಾಮಪತ್ರಗಳ ಪರಿಶೀಲನೆ; ಆ.24

ನಾಮಪತ್ರ ವಾಪಸ್‌ಗೆ ಕೊನೆ ದಿನ; ಆ.26

ಮತದಾನ ನಡೆಯುವ ದಿನ; ಸೆಪ್ಟೆಂಬರ್‌ 3

ಮತ ಎಣಿಕೆ: ಸೆಪ್ಟೆಂಬರ್‌ 6

**

ಹಿಂದಿನ ಅವಧಿಯಲ್ಲಿ ‘ಅತಂತ್ರ’ ಫಲಿತಾಂಶ

ಒಟ್ಟು 55 ಸದಸ್ಯ ಬಲದ ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಹಿಂದಿನ ಅವಧಿಯಲ್ಲಿ ಯಾವುದೇ ಪಕ್ಷಗಳಿಗೆ ಸ್ಪಷ್ಟ ಬಹುಮತ ಇರಲಿಲ್ಲ.

23 ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್‌ ಬಹುದೊಡ್ಡ ಪಕ್ಷವಾಗಿತ್ತು. ಜೆಡಿಎಸ್‌–10, ಬಿಜೆಪಿ–7, ಕೆಜೆಪಿ–7, ಪಕ್ಷೇತರರು–7, ಆರ್‌ಪಿಐ–ಒಬ್ಬರು ಸದಸ್ಯರು ಇದ್ದರು. ಕೆಜೆಪಿ ಸ್ಥಾಪಿಸಿದ್ದ ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿದ ನಂತರ ಇಲ್ಲಿಯೂ ಕೆಜೆಪಿ ಸದಸ್ಯರು ಬಿಜೆಪಿ ಸೇರಿದರು. ಪಕ್ಷೇತರರ ಬೆಂಬಲದಿಂದ ಕಾಂಗ್ರೆಸ್‌ ಅಧಿಕಾರ ನಡೆಸಿತು.

**

ಮೊದಲನೇ ಅಲೆ ಬರುವ ಮುಂಚೆಯೇ ಸರ್ಕಾರ ಚುನಾವಣೆ ನಡೆಸಬೇಕಿತ್ತು. ಎರಡು ವರ್ಷಗಳವರೆಗೆ ಮಹಾನಗರ ಪಾಲಿಕೆ ಬಜೆಟ್ ಏನಾಯಿತು ಎಂಬುದೂ ಗೊತ್ತಿಲ್ಲ. ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದ್ದೇವೆ
ಪ್ರಿಯಾಂಕ್ ಖರ್ಗೆ
ಶಾಸಕ, ಕೆಪಿಸಿಸಿ ವಕ್ತಾರ

ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನವೇ ನಾವು ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಕೋರ್‌ ಕಮಿಟಿ ಸಭೆಯಲ್ಲಿಯೂ ಈ ಬಗ್ಗೆ ಚರ್ಚಿಸಿದ್ದೇವೆ. ಟಿಕೆಟ್ ಆಕಾಂಕ್ಷಿಗಳು ಬಹಳ ಜನ ಇದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ
ಸಿದ್ದಾಜಿ ಪಾಟೀಲ
ಬಿಜೆಪಿ ಶಹರ ಜಿಲ್ಲಾ ಘಟಕದ ಅಧ್ಯಕ್ಷ

ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ನಮ್ಮ ವರದಿ ಆಧರಿಸಿ ಎಚ್‌.ಡಿ. ಕುಮಾರಸ್ವಾಮಿ ಅವರು ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಿದ್ದಾರೆ
ನಾಸಿರ್ ಹುಸೇನ್
ಜೆಡಿಎಸ್‌ ಮುಖಂಡ

**

ವಾರ್ಡ್‌ವಾರು ಮೀಸಲಾತಿ ಪಟ್ಟಿ

ವಾರ್ಡ್‌ ಸಂಖ್ಯೆ; ಮೀಸಲಾತಿ

1; ಹಿಂದುಳಿದ ವರ್ಗ (ಎ) ಮಹಿಳೆ

2; ಸಾಮಾನ್ಯ

3; ಸಾಮಾನ್ಯ

4; ಹಿಂದುಳಿದ ವರ್ಗ (ಎ)

5; ಸಾಮಾನ್ಯ ಮಹಿಳೆ

6; ಹಿಂದುಳಿದ ವರ್ಗ (ಬಿ) ಮಹಿಳೆ

7; ‍ಪರಿಶಿಷ್ಟ ಜಾತಿ

8; ಹಿಂದುಳಿದ ವರ್ಗ (ಬಿ)

9; ಸಾಮಾನ್ಯ

10; ಹಿಂದುಳಿದ ವರ್ಗ (ಎ) ಮಹಿಳೆ

11; ಹಿಂದುಳಿದ ವರ್ಗ (ಬಿ)

12; ಪರಿಶಿಷ್ಟ ಜಾತಿ

13; ಸಾಮಾನ್ಯ ಮಹಿಳೆ

14; ಹಿಂದುಳಿದ ವರ್ಗ (ಎ)

15; ಸಾಮಾನ್ಯ ಮಹಿಳೆ

16; ಹಿಂದುಳಿದ ವರ್ಗ (ಬಿ) ಮಹಿಳೆ

17; ಸಾಮಾನ್ಯ

18; ಸಾಮಾನ್ಯ

19; ಸಾಮಾನ್ಯ ಮಹಿಳೆ

20; ಹಿಂದುಳಿದ ವರ್ಗ (ಎ) ಮಹಿಳೆ

21; ಸಾಮಾನ್ಯ

22; ಸಾಮಾನ್ಯ

23; ಹಿಂದುಳಿದ ವರ್ಗ (ಎ)

24; ಸಾಮಾನ್ಯ ಮಹಿಳೆ

25; ಸಾಮಾನ್ಯ

26; ಹಿಂದುಳಿದ ವರ್ಗ (ಎ) ಮಹಿಳೆ

27; ಸಾಮಾನ್ಯ

28; ಸಾಮಾನ್ಯ ಮಹಿಳೆ

29; ಹಿಂದುಳಿದ ವರ್ಗ (ಎ)

30; ಹಿಂದುಳಿದ ವರ್ಗ (ಎ) ಮಹಿಳೆ

31; ಸಾಮಾನ್ಯ ಮಹಿಳೆ

32; ಹಿಂದುಳಿದ ವರ್ಗ (ಎ) ಮಹಿಳೆ

33; ಹಿಂದುಳಿದ ವರ್ಗ (ಎ) ಮಹಿಳೆ

34; ಪರಿಶಿಷ್ಟ ಜಾತಿ

35; ಹಿಂದುಳಿದ ವರ್ಗ (ಎ)

36; ಸಾಮಾನ್ಯ

37; ಸಾಮಾನ್ಯ ಮಹಿಳೆ

38; ಹಿಂದುಳಿದ ವರ್ಗ (ಎ)

39; ಸಾಮಾನ್ಯ ಮಹಿಳೆ

40; ಸಾಮಾನ್ಯ

41; ಸಾಮಾನ್ಯ ಮಹಿಳೆ

42; ಹಿಂದುಳಿದ ವರ್ಗ (ಎ)

43; ಪರಿಶಿಷ್ಟ ಜಾತಿ ಮಹಿಳೆ

44; ಪರಿಶಿಷ್ಟ ಜಾತಿ

45; ಸಾಮಾನ್ಯ ಮಹಿಳೆ

46; ಸಾಮಾನ್ಯ

47; ಪರಿಶಿಷ್ಟ ಜಾತಿ ಮಹಿಳೆ

48; ಸಾಮಾನ್ಯ

49; ಪರಿಶಿಷ್ಟ ಜಾತಿ ಮಹಿಳೆ

50; ಸಾಮಾನ್ಯ

51; ಸಾಮಾನ್ಯ ಮಹಿಳೆ

52; ಸಾಮಾನ್ಯ ಮಹಿಳೆ

53; ಪರಿಶಿಷ್ಟ ಪಂಗಡ

54; ಪರಿಶಿಷ್ಟ ಜಾತಿ ಮಹಿಳೆ

55; ಸಾಮಾನ್ಯ ಮಹಿಳೆ

**

ಮೇಯರ್, ಉಪಮೇಯರ್ ಮೀಸಲಾತಿ

ಮೇಯರ್; ಪರಿಶಿಷ್ಟ ಪಂಗಡ

ಉಪಮೇಯರ್; ಹಿಂದಳಿದ ವರ್ಗ (ಎ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT