ಕಲಬುರಗಿ: ‘ವಸತಿ ನಿಲಯಗಳಿಗೆ ಆಹಾರ ಮತ್ತು ಇತರೆ ಸಾಮಗ್ರಿ ಪೂರೈಕೆಯಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಆರೋಪಿಸಿ ಗುರುವಾರ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಹಾಗೂ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಪ್ರಾದೇಶಿಕ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಲಾಯಿತು.

‘ನಿಯಮಗಳ ಪ್ರಕಾರ ಪ್ರತಿ ತಿಂಗಳು 2ನೇ ತಾರೀಕಿನೊಳಗೆ ವಸತಿ ನಿಲಯಗಳಿಗೆ ಸಾಮಗ್ರಿ ಸರಬರಾಜು ಮಾಡಬೇಕು. ಆದರೆ, ಸರಿಯಾಗಿ ಸರಬರಾಜು ಮಾಡದೆ ಬೋಗಸ್ ಬಿಲ್ ಸೃಷ್ಟಿಸಿ ಸರ್ಕಾರಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ದಯಾನಂದ, ಡಿಡಿಪಿಐ ಸೋಮಶೇಖರ, ಕಚೇರಿ ಮೇಲ್ವಿಚಾರಕ ಮೊಹಮ್ಮದ್ ಆರಿಫ್, ತಾಲ್ಲೂಕು ಕಲ್ಯಾಣಾಧಿಕಾರಿಗಳು, ವಾರ್ಡನ್ಗಳನ್ನು ವಜಾ ಮಾಡಬೇಕು. ಅಕ್ರಮಕ್ಕೆ ಜಿಲ್ಲಾಧಿಕಾರಿ, ಸಿಇಒ ಬೆಂಬಲ ನೀಡಿದ್ದು, ಅವರನ್ನು ವರ್ಗಾವಣೆ ಮಾಡಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ತಂಗಡಗಿ ರಾಜೀನಾಮೆ ನೀಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಪ್ರಾದೇಶಿಕ ಆಯುಕ್ತರ ಕಚೇರಿ ಮೂಲಕ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಎಂ.ಎಸ್.ಪಾಟೀಲ ನರಿಬೋಳ, ಶ್ರವಣಕುಮಾರ ಡಿ ನಾಯಕ, ಲಕ್ಷ್ಮೀಕಾಂತ ಸ್ವಾದಿ, ಸುಮಾ ಕವಲ್ದಾರ, ಶಮಿನಾ ಬೇಗಂ, ಅಶ್ವಿನಿ ಚವ್ಹಾಣ, ಸಿದ್ದು ಕವಲ್ದಾರ, ನಿಂಗಣ್ಣ ಎಂ.ಚಿಗರಹಳ್ಳಿ, ರಮೇಶ ಮೇಲಗಿರಿ, ಹಣಮಂತ ಕುಳಗೇರಿ, ಭೀಮು ಕಿಲೆದಮನಿ, ಮಲ್ಲಪ್ಪ ಪೂಜಾರಿ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.