ಆಳಂದ: ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿನ ಬೀರಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿ ಕೆಕೆಆರ್ಡಿಬಿಯ ₹ 55 ಲಕ್ಷ ಅನುದಾನದಲ್ಲಿ ಕನಕ ಭವನ ನಿರ್ಮಾಣ ಕಾಮಗಾರಿಗೆ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್.ಪಾಟೀಲ ಅವರು ಬುಧವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು,‘ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಚಾಲ್ತಿಯಲ್ಲಿವೆ. ಮಾದನಹಿಪ್ಪರಗಿ ಮುಖ್ಯರಸ್ತೆಯಿಂದ ವಾಡಿ ರಸ್ತೆಗೆ ₹1.91 ಕೋಟಿ ಮಂಜೂರಾಗಿದೆ. ಮಾದನಹಿಪ್ಪರಗಿಯ ಅಗಸಿಯಿಂದ ಮರಗಮ್ಮ ದೇವಸ್ಥಾನದ ರಸ್ತೆಗೆ ₹2 ಕೋಟಿ ಮತ್ತು ಸರ್ಕಾರಿ ಆಸ್ಪತ್ರೆಯಿಂದ ಹೊಸಬಡಾವಣೆಯ ರಸ್ತೆಗೆ ₹ 55 ಲಕ್ಷ ಮಂಜೂರಾತಿ ದೊರೆತಿದೆ’ ಎಂದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವಿಠಲ ಜಿಡ್ಡಮನಿ, ಅಮೃತ ವಗ್ಗಿ, ದೊಂಡಿಬಾ ಪೂಜಾರಿ, ಮಲ್ಲಯ್ಯ ಸ್ವಾಮಿ, ಶಿವಲಿಂಗಪ್ಪ ಜಮಾದಾರ, ರಾಜಕುಮಾರ ಯಂಕಂಚಿ, ಈರಣ್ಣ ಮೈಂದರಗಿ, ಅಂಬಣ್ಣ ಸಾಲಿ, ಧರ್ಮಣ್ಣ ಕೌಲಗಿ, ಸಿದ್ದರಾಮ ಖ್ಯಾಮು, ಶಿವಪ್ಪ ಕಾರಬಾರಿ, ಅಪ್ಪಸಾಬ್ ಮೇತ್ರೆ, ಸಿದ್ದರಾಜು ಆಲೂರೆ, ಶಂಕರ ಪ್ಯಾಟಿ, ಹರಿದಾಸ ಹಜಾರೆ, ಶರಣು ಕಾಳಕಿಂಗೆ, ಹರಿದಾಸ ಹಜಾರೆ ಹಾಗು ಲೋಕೋಪಯೋಗಿ ಇಲಾಖೆಯ ಎಇಇ ಹೊನ್ನೇಶ್ ಇತರೆ ಅಧಿಕಾರಿಗಳು ಇದ್ದರು.

ಎಲೆ ನಾವದಗಿ: ತಾಲ್ಲೂಕಿನ ಎಲೆ ನಾವದಗಿ ಗ್ರಾಮದಲ್ಲಿ ₹22 ಲಕ್ಷ ವೆಚ್ಚದ ಸಿದ್ದಲಿಂಗ ಹಿರೇಮಠ ಸಮುದಾಯ ಭವನದ ಭೂಮಿಪೂಜೆಯು ಬಿ.ಆರ್.ಪಾಟೀಲ ನೆರವೇರಿಸಿದರು. ಆಳಂದದ ಹಿರೇಮಠದ ಪೀಠಾಧಿಪತಿ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದರು. ಮುಖಂಡರಾದ ನಾಗೇಂದ್ರಪ್ಪ ಪಾಟೀಲ, ಶರಣು ಪವಾಡಶೆಟ್ಟಿ, ರಾಜಶೇಖರ ಯಂಕಂಚಿ, ಚನ್ನವೀರ ಕಾಳಕಿಂಗೆ, ಸಿದ್ದಲಿಂಗ ಕುಲಕರ್ಣಿ, ಪೀರಪ್ಪ ಪಾಟೀಲ ಉಪಸ್ಥಿತರಿದ್ದರು.

ನಂತರ ಧುತ್ತರಗಾಂವ ಗ್ರಾಮದಲ್ಲಿಯೂ ₹51 ಲಕ್ಷ ವೆಚ್ಚದ ಕನಕಭವನ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಆರ್.ಪಾಟೀಲ ಗುದ್ದಲಿಪೂಜೆ ನೆರವೇರಿಸಿದರು. ವೀರಣ್ಣ ಹೊನ್ನಶೆಟ್ಟಿ, ಈರಣ್ಣಾ ಝಳಕಿ, ಭೀಮಾಶಂಕರ ಪಾಟೀಲ, ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.