ಕಲಬುರಗಿ: ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಕೇಂದ್ರ ಸರ್ಕಾರದ ಟೆಲಿಕಾಂ ಇಲಾಖೆ ಅಧಿಕಾರಿಯಾಗಿ, ಉಪನ್ಯಾಸಕರಾಗಿ, ಪಿಯು ಕಾಲೇಜಿನ ಸಹಾಯಕ ನಿರ್ದೇಶಕರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ಕುವೆಂಪು ವಿ.ವಿ. ಸಿಂಡಿಕೇಟ್ ಸದಸ್ಯರಾಗಿ, ಪಠ್ಯ ಪುಸ್ತಕ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ ನಗರದ ಗುಬ್ಬಿ ಕಾಲೊನಿ ನಿವಾಸಿ 80ರ ಹರೆಯದ ಸಣ್ಣಬಾಳಪ್ಪ ಬಸಪ್ಪ ಹೊಸಮನಿ (ಎಸ್.ಬಿ. ಹೊಸಮನಿ) ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

ಮೂಲತಃ ಬೆಳಗಾವಿ ಜಿಲ್ಲೆ ಕೌಜಲಗಿಯವರಾದ ಹೊಸಮನಿ ಅವರು ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಚಿತ್ರದುರ್ಗ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

1945ರ ಮಾರ್ಚ್ 1ರಂದು ಜನಿಸಿದ ಹೊಸಮನಿ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಆಹ್ವಾನಿತ ಸದಸ್ಯರಾಗಿ, ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಶಿವಮೊಗ್ಗ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ವಿವಿಧ ಇಲಾಖೆಗಳ ಕ್ಲಾಸ್ –1, ಕ್ಲಾಸ್–2 ಅಧಿಕಾರಿಗಳಿಗೆ ಆಡಳಿತದಲ್ಲಿ ಕನ್ನಡ ತರಬೇತಿ ನೀಡಿದ್ದಾರೆ.

ಹೊಸಮನಿ ಅವರು ತತ್ಸವ, ತದ್ಭವ ರೂಪಗಳು, ಶಬರಿ (ಖಂಡಕಾವ್ಯ), ವ್ಯಾಕರಣ ಸಾರ, ಐಸಿರಿಯ ಹಿರಿಯೂರು, ಒಳದನಿ, ನಮ್ಮ ಲೇಖಕರು, ಆತ್ಮಾರ್ಪಣೆ, ಶಿವಶರಣ ಹರಳಯ್ಯ, ಕ್ರಾಂತಿ ಕಹಳೆ, ಹಸಿರು ಕ್ರಾಂತಿಯ ಹರಿಕಾರ ಸೇರಿದಂತೆ ಆಡಳಿತ ಭಾಷೆ: ಒಂದು ಅವಲೋಕನ ಸೇರಿದಂತೆ 19 ಕೃತಿಗಳನ್ನು ರಚಿಸಿದ್ದಾರೆ. ಚಿಗುರು, ಹೆಜ್ಜೆ ಮೂಡದ ಹಾದಿ, ಕ್ರೀಡಾ ತರಂಗ ಸೇರಿದಂತೆ 12 ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ.

ಎಸ್.ಬಿ.ಹೊಸಮನಿ ಅವರಿಗೆ ಕಲಬುರಗಿ ಲೋಕಾಯುಕ್ತ ಕಚೇರಿಯಲ್ಲಿ ಡಿವೈಎಸ್ಪಿ ಆಗಿರುವ ಶೀಲವಂತ ಹೊಸಮನಿ ಸೇರಿದಂತೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಸರ್ಕಾರ ನನ್ನ ಸೇವೆಯನ್ನು ತಡವಾಗಿಯಾದರೂ ಗುರುತಿಸಿದೆ. ಇದಕ್ಕಾಗಿ ಅರ್ಜಿ ಪಡೆಯದೇ ಸಾಧಕರನ್ನು ಗುರುತಿಸಿದ್ದು ಶ್ಲಾಘನೀಯ. ಆಡಳಿತದಲ್ಲಿ ಕನ್ನಡವು ಈಗ ಸಾಕಷ್ಟು ಸುಧಾರಿಸಿದೆ. ಕನ್ನಡದ ಫಲಕಗಳು ಎಲ್ಲೆಡೆ ಕಾಣಿಸುತ್ತಿವೆ.
-ಎಸ್.ಬಿ.ಹೊಸಮನ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಜಿಲ್ಲೆಗೆ ಸಿಗದ ಪ್ರಾತಿನಿಧ್ಯ: ಬೇಸರ

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ಜಿಲ್ಲೆಯವರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಬೇಸರ ವ್ಯಕ್ತವಾಗಿದೆ.

ಜಿಲ್ಲೆಯ ಸಾಧಕರಿಗೆ ಪ್ರಶಸ್ತಿ ಕೊಡಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಆಸಕ್ತಿ ವಹಿಸಬೇಕಿತ್ತು. ನೆರೆಯ ಯಾದಗಿರಿ ಜಿಲ್ಲೆಗೆ ಎರಡು ಪ್ರಶಸ್ತಿ ಸಿಕ್ಕಿದೆ. ಅದಕ್ಕಿಂತ ದೊಡ್ಡ ಜಿಲ್ಲೆಯಾದ ಕಲಬುರಗಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಅಭಿಪ್ರಾಯಪಟ್ಟಿದ್ದಾರೆ.

‘ಪ್ರಾದೇಶಿಕ ಕೇಂದ್ರವಾಗಿರುವ ಕಲಬುರಗಿಗೆ ಕನಿಷ್ಠ ಮೂರು ಪ್ರಶಸ್ತಿಗಳನ್ನಾದರೂ ನೀಡಬೇಕಿತ್ತು. ಈಗ ಪ್ರಶಸ್ತಿಗೆ ಆಯ್ಕೆಯಾಗಿರುವವರು ಮೂಲತಃ ಕಲಬುರಗಿಯವರಲ್ಲ. ಜಿಲ್ಲೆಯ ಮೂಲದ ಸಾಹಿತಿಗಳು, ಕಲಾವಿದರಿದ್ದರೂ ಅವರನ್ನು ಗಣನೆಗೆ ತೆಗೆದುಕೊಂಡಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಬೇಸರ ವ್ಯಕ್ತಪಡಿಸಿದ್ದಾರೆ.

ಆಯ್ಕೆ ಸಂದರ್ಭದಲ್ಲಿ ಜಿಲ್ಲೆಯ ಕಲಾವಿದರನ್ನು ಕಡೆಗಣಿಸಲಾಗಿದೆ ಎಂದು ನಾರಾಯಣ ಜೋಶಿ ಟೀಕಿಸಿದ್ದಾರೆ.